ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂನಂ ಮೊದಲ ಮಿಂಚು

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ಸದಾ ಒಂದಿಲ್ಲೊಂದು ವಿವಾದದ ಜಡಿಮಳೆಯಲ್ಲಿ ತೊಯ್ಯುವ ನಟಿ ಪೂನಂ ಪಾಂಡೆ ಗಾಸಿಪ್‌ಗಳನ್ನೇ ಉಸಿರಾಗಿಸಿಕೊಂಡಾಕೆ. ವಿವಾದಗಳ ಮಳೆಯಲ್ಲಿ ಜಳಕಮಾಡುತ್ತಾ ಪುಳಕಗೊಳ್ಳುವ ಪೂನಂ ಅಭಿನಯಿಸಿರುವ ಮೊದಲ ಚಿತ್ರ `ನಶಾ' ಜುಲೈ 26ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ಅದಕ್ಕೂ ಮುನ್ನ ಅಂದರೆ, `ನಶಾ' ಚಿತ್ರದ ಟ್ರೈಲರ್ ಜೂನ್ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆಯಂತೆ.

ಶೃಂಗಾರರಸ ಢಾಳಾಗಿರುವ `ನಶಾ' ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನಿರ್ದೇಶಕ ಅಮಿತ್ ಸಕ್ಸೇನಾ ಕೂಡಾ ಇಂತಹ ಕಾಮಪ್ರಚೋದಕ ಸಿನಿಮಾ ತಯಾರಿಸುವಲ್ಲಿ ಪಳಗಿದವರು. ಬಿಪಾಶಾ ಬಸು ಮತ್ತು ಜಾನ್ ಅಬ್ರಾಹಂ ನಟಿಸಿದ್ದ `ಜಿಸ್ಮ್' ಚಿತ್ರವನ್ನು ನಿರ್ದೇಶನ ಮಾಡಿದ್ದು ಇದೇ ಅಮಿತ್.

`ಜಿಸ್ಮ್' ಚಿತ್ರಕಥೆ ಪ್ಲೇಬಾಯ್‌ನಂಥ ಕುಡುಕ ಲಾಯರ್ ಹಾಗೂ ವಿವಾಹಿತ ಮಹಿಳೆಯ ನಡುವೆ ನಡೆವ ಪ್ರಣಯದಾಟದ ಸುತ್ತ ಇದ್ದರೆ, `ನಶಾ' ಚಿತ್ರದ ಕಥೆ 18 ವರ್ಷದ ಹುಡುಗನನ್ನು 25 ವರ್ಷ ವಯಸ್ಸಿನ ಯುವತಿಯೊಬ್ಬಳು ಮೋಹಿಸುವುದರ ಸುತ್ತ ಸುತ್ತುತ್ತದಂತೆ.

`ಪೂನಂ ಪಾಂಡೆ ನಟಿಸಿರುವ `ನಶಾ' ಚಿತ್ರ ಬಿಡುಗಡೆಗೆ ಸಿದ್ಧಗೊಂಡಿದೆ. ಈ ಚಿತ್ರವನ್ನು ಜುಲೈ ತಿಂಗಳ ಕೊನೆ ವಾರದಲ್ಲಿ ಬಿಡುಗಡೆ ಮಾಡಲಾಗುವುದು. ಜೂನ್ ಮೊದಲ ವಾರದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಗೊಳ್ಳಲಿದೆ. `ನಶಾ' ಚಿತ್ರ ಒಂದು ಸಿಂಪಲ್ ಲವ್‌ಸ್ಟೋರಿ. ಈ ಚಿತ್ರದಲ್ಲಿ ಕಾಮವನ್ನು ಪ್ರಚೋದಿಸುವ ಸಾಕಷ್ಟು ದೃಶ್ಯಗಳಿವೆ. ಈ ಚಿತ್ರದಲ್ಲಿ ಪೂನಂ ಮೈಚಳಿ ಬಿಟ್ಟು ನಟಿಸಿದ್ದಾರೆ' ಎನ್ನುತ್ತಾರೆ ನಿರ್ದೇಶಕ ಅಮಿತ್ ಸಕ್ಸೇನಾ.

`ನಶಾ' ಚಿತ್ರದಲ್ಲಿ ಹಸಿಬಿಸಿಯಾಗಿ ಕಾಣಿಸಿಕೊಂಡಿರುವ ಪೂನಂ ಪಾತ್ರಕ್ಕಾಗಿ ದೇಹತೂಕ ಹೆಚ್ಚಿಸಿಕೊಳ್ಳಲು ಜಂಕ್ ಫುಡ್ ಮೊರೆ ಹೋಗಿದ್ದರಂತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT