ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೃಥ್ವಿ-2 ಕ್ಷಿಪಣಿ ಯಶಸ್ವಿ ಪರೀಕ್ಷೆ

Last Updated 9 ಜೂನ್ 2011, 19:30 IST
ಅಕ್ಷರ ಗಾತ್ರ

ಬಾಲಸೋರ್ (ಒಡಿಶಾ): ಅಣ್ವಸ್ತ್ರ ಹೊತ್ತೊಯ್ಯಬಹುದಾದ ಖಂಡಾಂತರ ಕ್ಷಿಪಣಿ ಪೃಥ್ವಿ-2ರ ಪ್ರಯೋಗಾರ್ಥ ಪರೀಕ್ಷೆಯನ್ನು ಗುರುವಾರ ಇಲ್ಲಿನ ಚಂಡೀಪುರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಸ್ಥಳೀಯವಾಗಿ ನಿರ್ಮಿಸಲಾಗಿರುವ ಈ ಕ್ಷಿಪಣಿಯ ಪರೀಕ್ಷೆಯನ್ನು ಸೇನೆಯು ಬೆಳಿಗ್ಗೆ 9.05ರ ವೇಳೆಯಲ್ಲಿ  ನಡೆಸಿತು ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

`ಈ ಹಿಂದೆಯೂ ಕ್ಷಿಪಣಿ-2ರ ಸಾಮರ್ಥ್ಯವನ್ನು ಪ್ರಯೋಗಾರ್ಥವಾಗಿ ಪರೀಕ್ಷಿಸಲಾಗಿತ್ತು. ಈಗಾಗಲೇ ಇಂತಹ ಹಲವು ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಲಾಗಿದೆ~ ಎಂದು ಹೇಳಿವೆ.

`ಇದೊಂದು ಸೇನೆಯ ಎಂದಿನ ಪ್ರಯೋಗ ಪರೀಕ್ಷೆ~ ಎಂದು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಘಟನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪೃಥ್ವಿ-2 ಕ್ಷಿಪಣಿಯು 250ರಿಂದ 350 ಕೆ.ಜಿ ತೂಕದ ಯುದ್ಧಾಸ್ತ್ರಗಳ ಭಾರವನ್ನು ಸುಮಾರು 500 ರಿಂದ 1 ಸಾವಿರ ಕಿ.ಮೀವರೆಗೆ ಹೊತ್ತೊಯ್ಯುವ  ಸಾಮರ್ಥ್ಯ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT