ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೃಥ್ವಿ-2 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Last Updated 4 ಅಕ್ಟೋಬರ್ 2012, 6:00 IST
ಅಕ್ಷರ ಗಾತ್ರ

ಬಾಲಸೋರ್ (ಒಡಿಶಾ) (ಪಿಟಿಐ): ಸುಮಾರು 350 ಕಿ.ಮೀ ದೂರದ ವೈರಿಗಳ ಗುರಿಯನ್ನು ಕರಾರುವಕ್ಕಾಗಿ ಹೊಡೆದು ಉರುಳಿಸಬಲ್ಲ ಸ್ವದೇಶಿ ನಿರ್ಮಿತ ಪೃಥ್ವಿ-2 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಭಾರತೀಯ ಸೇನೆ ಗುರುವಾರ ಯಶಸ್ವಿಯಾಗಿ ನಡೆಸಿತು.

`ಬೆಳಿಗ್ಗೆ 09 ಗಂಟೆ ಸುಮಾರಿಗೆ ಇಲ್ಲಿಗೆ ಸಮೀಪದ ಚಾಂಡಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿರುವ (ಐಟಿಆರ್) ಉಡ್ಡಯನ ಸಂಕೀರ್ಣ 3 ರಿಂದ ಈ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು~ ಎಂದು ಸೇನೆಯ ಮೂಲಗಳು ತಿಳಿಸಿವೆ.

`ನೆಲದಿಂದ ನೆಲಕ್ಕೆ ಚಿಮ್ಮುವ ಮತ್ತು 500 ಕೆ.ಜಿ. ಭಾರದ ಅಣ್ವಸ್ತ್ರ ಸಿಡಿತಲೆಗಳನ್ನು ಸುಮಾರು 350 ಕಿ.ಮೀ ದೂರ ಹೊತ್ತಯ್ಯಬಲ್ಲ ಈ ಕ್ಷಿಪಣಿಯ ಉಡಾವಣೆ ಎಲ್ಲ ಉದ್ದೇಶಗಳನ್ನು ಯಶಸ್ವಿಯಾಗಿ ಪೂರೈಸಿದೆ~ ಎಂದು ಉಡ್ಡಯನ ಕೇಂದ್ರದ ನಿರ್ದೇಶಕ ಎಂ.ವಿ.ಕೆ.ವಿ ಪ್ರಸಾದ್ ತಿಳಿಸಿದ್ದಾರೆ.

ಸದ್ಯ ಸೇನೆಯ ಬತ್ತಳಕೆಯಲ್ಲಿರುವ ಪೃಅಥ್ವಿಯ ಸಾಮರ್ಥ್ಯ ಮತ್ತು ನಿಖರತೆ ಪರೀಕ್ಷಿಸಲು ಸೇನೆ ಈ ಪ್ರಯೋಗ ನಡೆಸಿದೆ.

ದೇಶದ ಮಹತ್ವಾಕಾಂಕ್ಷೆಯ `ಸಮಗ್ರ ಕ್ಷಿಪಣಿ ಅಭಿವೃದ್ಧಿ ಯೋಜನೆ~ಯ ಅಡಿ ಸಂಪೂರ್ಣ ದೇಶಿ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾದ ಮೊದಲ ಕ್ಷಿಪಣಿ ಎಂಬ ಹೆಗ್ಗಳಿಕೆ ಇದಕ್ಕಿದೆ. 9 ಮೀಟರ್ ಉದ್ದ ಮತ್ತು ಒಂದು ಮೀಟರ್ ಅಗಲದ ಪೃಥ್ವಿಯನ್ನು ಈ ಮೊದಲೇ ವಿಜ್ಞಾನಿಗಳು ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT