ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್ ಮತ್ತಷ್ಟು ತುಟ್ಟಿ?

Last Updated 8 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳು ಪೆಟ್ರೋಲ್ ದರವನ್ನು ಜೂನ್ 16ರಿಂದ ರೂ.0.50ರಷ್ಟು ಹೆಚ್ಚಿಸಲು ನಿರ್ಧರಿಸಿವೆ. 

ಕಳೆದ ಮೇ 15ರಂದು ಪೆಟ್ರೋಲ್ ದರವನ್ನು ಒಮ್ಮಲೆ ರೂ.5ಹೆಚ್ಚಿಸಲಾಗಿತ್ತು.ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾತೈಲದ ಬೆಲೆಗೆ ಹೋಲಿಸಿದರೆ ಈ ಏರಿಕೆ ತುಂಬಾ ಕಡಿಮೆ ಎಂದು ತೈಲ ಮಾರಾಟ ಕಂಪೆನಿಗಳು ಹೇಳಿವೆ.

`ಯಾವುದೇ ರಾಜಕೀಯ ಒತ್ತಡಗಳು ಕಂಡುಬರದಿದ್ದರೆ, ಜೂನ್ 15ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟೋಲ್ ದರವನ್ನು ನಾವು ರೂ. 0.50ರಷ್ಟು ಹೆಚ್ಚಳ ಮಾಡುತ್ತೇವೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ (ಐಒಸಿ) ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

`ಪೆಟ್ರೋಲ್ ದರವನ್ನು ರೂ. 5 ಹೆಚ್ಚಿಸಿದ ನಂತರವೂ, ಪ್ರತಿ ಲೀಟರ್ ಪೆಟ್ರೋಲ್ ಮಾರಾಟದ ಮೇಲೆ ರೂ. 4.58 ನಷ್ಟವಾಗುತ್ತಿದೆ. ದೆಹಲಿಯಲ್ಲಿ ಚಿಲ್ಲರೆ ಮಾರಾಟದ ಮೇಲೆ ರೂ. 5.50 ನಷ್ಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮೇ ತಿಂಗಳ ಮೊದಲ ಪಾಕ್ಷಿಕ ಅವಧಿಯ ಕಚ್ಚಾತೈಲದ ಸರಾಸರಿ ಬೆಲೆ ಆಧರಿಸಿ ಪೆಟ್ರೋಲ್ ದರ ಏರಿಕೆ ಮಾಡಲಾಗಿದೆ. ಆದರೆ, ಜೂನ್ 1ರಿಂದ ಮತ್ತೆ ಕಚ್ಚಾತೈಲದ ಬೆಲೆಯಲ್ಲಿ ವ್ಯತ್ಯಾಸವಾಗಿದೆ. ಪೆಟ್ರೋಲ್ ದರವನ್ನು ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸಿದ ನಂತರ, ಸರ್ಕಾರ ತೈಲ ಮಾರಾಟ ಕಂಪೆನಿಗಳಿಗೆ ನಷ್ಟ ಭರ್ತಿಗಾಗಿ ಯಾವುದೇ ಹಣಕಾಸಿನ ನೆರವು ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ದರ ಏರಿಕೆ ಅನಿವಾರ್ಯ ಎಂದು ಅವರು ಹೇಳಿದರು.

ಕಚ್ಚಾ ತೈಲದ ಆಮದು ಬೆಲೆಗಿಂತ ಕಡಿವೆು ದರದಲ್ಲಿ ತೈಲ ಮಾರಾಟ ಮಾಡುತ್ತಿರುವುದರಿಂದ ಸರ್ಕಾರಿ ಸ್ವಾಮ್ಯದ ಮೂರು ತೈಲ ಮಾರಾಟ ಕಂಪೆನಿಗಳು 2011-12ನೇ ಸಾಲಿನಲ್ಲಿ ಒಟ್ಟು ರೂ.1,60,568 ಕೋಟಿ ನಷ್ಟ ಅನುಭವಿಸುತ್ತವೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT