ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್‌ ಲೀಟರ್‌ಗೆ ರೂ 1.63 ಹೆಚ್ಚಳ

ಡೀಸೆಲ್‌, ಸೀಮೆಎಣ್ಣೆ, ಎಲ್‌ಪಿಜಿ ಏರಿಕೆ ಶೀಘ್ರ
Last Updated 13 ಸೆಪ್ಟೆಂಬರ್ 2013, 19:43 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪೆಟ್ರೋಲ್‌ ದರ­ವನ್ನು ಲೀಟರ್‌ಗೆ ರೂ 1.63 ಹೆಚ್ಚಿಸ­ಲಾಗಿದೆ. ಹೊಸ ದರ ಶುಕ್ರ­ವಾರ ಮಧ್ಯ­­ರಾತ್ರಿ­ಯಿಂದಲೇ ಜಾರಿಗೆ ಬಂದಿದೆ.
ಈ ದರವು ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ ಹೊರತುಪಡಿಸಿ­ದ್ದು, ಗ್ರಾಹಕರನ್ನು ತಲುಪುವಾಗ ಇವುಗಳನ್ನು ಸೇರಿಸಿ ಇನ್ನೂ ಹೆಚ್ಚಳವಾಗ­ಲಿದೆ. ಕಳೆದ ಜೂನ್‌ನಿಂದ ಸತತ ಏಳನೇ ದರ ಏರಿಕೆ ಇದಾಗಿದೆ.

ತೈಲ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತದ ಹಿನ್ನೆಲೆ­ಯಲ್ಲಿ ದರ ಏರಿಕೆ ನಿರ್ಧಾರ ಮಾಡಲಾಗಿದೆ ಎಂದು ತೈಲ ಸಂಸ್ಥೆ­ಗಳು ತಿಳಿಸಿವೆ. ಈ ಮಧ್ಯೆ, ಶೀಘ್ರವೇ ಡೀಸೆಲ್‌ ದರ ಲೀಟರ್‌ಗೆ ರೂ 35, ಸೀಮೆಎಣ್ಣೆ ಲೀಟ­ರ್‌ಗೆ ರೂ 2 ಹಾಗೂ ಎಲ್‌ಪಿಜಿ ಸಿಲಿಂಡ­ರ್‌ಗೆ ರೂ 50 ಏರಿಕೆಯಾಗುವ ನಿರೀಕ್ಷೆ­ಯಿದೆ.

ರೂಪಾಯಿ ಮೌಲ್ಯ ಕುಸಿತ ಮತ್ತು ತೈಲ ಬೆಲೆ ಏರಿಕೆಯ ಕಾರಣ ಸರ್ಕಾರಕ್ಕೆ ದಾಖಲೆಯ ರೂ 1,80,000 ಕೋಟಿ ನಷ್ಟ­ವಾಗಿರುವುದನ್ನು ಸರಿದೂಗಿ­ಸಲು ತೈಲ ಸಚಿವಾಲಯ ಮಾರ್ಗೋ­ಪಾಯ ಹುಡುಕುತ್ತಿರುವ ಹಿನ್ನೆಲೆಯಲ್ಲಿ ಈ ಹೆಚ್ಚಳ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT