ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರೇರಾ ಆಟಕ್ಕೆ ಧವನ್‌ ಮೆಚ್ಚುಗೆ

Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೊಹಾಲಿ (ಪಿಟಿಐ): ಸಾಕಷ್ಟು ಒತ್ತಡವಿದ್ದರೂ ತಿಸಾರ ಪೆರೇರಾ ತೋರಿದ ಅಮೋಘ ಬ್ಯಾಟಿಂಗ್‌ಗೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕ ಶಿಖರ್‌ ಧವನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಪೆರೇರಾ ಉತ್ತಮವಾಗಿ ರನ್‌ ಕಲೆ ಹಾಕಿದರು. ಸಿಡಿಸಿದ ಸಿಕ್ಸರ್‌ಗಳೂ ಅಪೂರ್ವ­­ವಾಗಿದ್ದವು. ಅಗತ್ಯ ಸಂದರ್ಭದಲ್ಲಿ ಅವರು ತೋರಿದ ಜವಾಬ್ದಾರಿಯುತ ಬ್ಯಾಟಿಂಗ್‌ ಖುಷಿ ನೀಡಿದೆ. ಟ್ರಿನಿಡಾಡ್‌ ಆ್ಯಂಡ್‌ ಟೊಬೊಗೊ ತಂಡದವರು ಚೆನ್ನಾಗಿಯೇ ದಾಳಿ ನಡೆಸಿದರು’ ಎಂದು ಧವನ್‌ ನುಡಿದರು.

ಮಂಗಳವಾರ ನಡೆದ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಸನ್‌ರೈಸರ್ಸ್‌ ತಂಡ ಟೊಬೊಗೊ ಎದುರು ನಾಲ್ಕು ವಿಕೆಟ್‌ಗಳ ಗೆಲುವು ಪಡೆದಿತ್ತು.

ಟೊಬೊಗೊ ನೀಡಿದ್ದ 160 ರನ್‌ ಗುರಿಯನ್ನು ಧವನ್‌ ಪಡೆ 19.3 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದು­ಕೊಂಡು ಮುಟ್ಟಿತು. ಈ ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಧವನ್‌ ಮಾತನಾಡಿದರು.

ಖುಷಿ ನೀಡಿದೆ: ‘ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಖುಷಿ ನೀಡಿದೆ. ಆಲ್‌ರೌಂಡ್‌ ಪ್ರದರ್ಶನ ತೋರಿದ್ದು ತೃಪ್ತಿ ನೀಡಿದೆ. ಕ್ಷೇತ್ರರಕ್ಷಣೆಯಲ್ಲಿ ನಾವು ಹಲವು ತಪ್ಪುಗಳನ್ನು ಮಾಡಿದೆವು. ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದೆವು. ಇಲ್ಲವಾದರೆ ಟೊಬೊಗೊ ತಂಡವನ್ನು 150 ರನ್‌ ಒಳಗೆ ಕಟ್ಟಿ ಹಾಕಬಹು­ದಿತ್ತು’ ಎಂದು ಪಂದ್ಯ ಶ್ರೇಷ್ಠ ಗೌರವ ಪಡೆದ ಪೆರೇರಾ ನುಡಿದರು.

‘ನಾವು ಇನ್ನು ಹತ್ತು ರನ್‌ ಹೆಚ್ಚು ಕಲೆ ಹಾಕಿದ್ದರೆ ಗೆಲ್ಲಲು ಅವಕಾಶವಿತ್ತು. ಬೌಲಿಂಗ್‌ನಲ್ಲಿಯೂ ಎದುರಾಳಿ ತಂಡ­ವನ್ನು ನಿಯಂತ್ರಿಸಬಹುದಿತ್ತು’ ಎಂದು ಟೊಬೊಗೊ ತಂಡದ ನಾಯಕ ದಿನೇಶ್‌ ರಾಮ್ದಿನ್‌ ಅಭಿಪ್ರಾಯ ಪಟ್ಟರು.

ಸಂಕ್ಷಿಪ್ತ ಸ್ಕೋರ್‌: ಟ್ರಿನಿಡಾಡ್‌ ಆ್ಯಂಡ್‌ ಟೊಬಾಗೊ: 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 160.

ಸನ್‌ರೈಸರ್ಸ್‌ ಹೈದರಾಬಾದ್‌ 19.3 ಓವರ್‌ಗಳಲ್ಲಿ 6 ವಿಕೆಟ್‌ಗೆ 164. (ಪಾರ್ಥಿವ್‌ ಪಟೇಲ್‌ 17, ಶಿಖರ್‌ ಧವನ್‌ 23, ತಿಸಾರ ಪರೇರಾ ಔಟಾಗದೆ 57, ಕರಣ್‌ ಶರ್ಮ ಔಟಾಗದೆ 13; ಸುನಿಲ್‌ ನಾರಾಯಣ್‌ 9ಕ್ಕೆ4. ಫಲಿತಾಂಶ: ಸನ್‌ರೈಸರ್ಸ್‌ಗೆ 4 ವಿಕೆಟ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT