ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಶಾವರಕ್ಕೆ ಹೋಗುವ ಆಸೆ: ಶಾರುಖ್‌

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬಾಲಿವುಡ್‌ ಬಾದಶಾ ಶಾರುಖ್‌ ಖಾನ್‌ ತನ್ನ ಮಕ್ಕ ಳಾದ ಆರ್ಯನ್‌, ಸುಹಾನಾ ಮತ್ತು ಅಬ್ರಾಂ ಅವರನ್ನು ತಮ್ಮ ಕುಟುಂಬದ ಮೂಲ ಸ್ಥಾನವಾದ ಪಾಕಿಸ್ತಾನದ ಪೆಶಾವರಕ್ಕೆ  ಕರೆದೊ­ಯ್ಯಲು ಬಯಸಿದ್ದಾರೆ.

ಪಾಕಿಸ್ತಾನದ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖರ್‌  ತಮ್ಮ ದೇಶಕ್ಕೆ ಭೇಟಿ ನೀಡುವಂತೆ ನೀಡಿದ ಆಹ್ವಾನವನ್ನು ನಿರಾಕರಿಸಿದ ಅವರು ಚಿಕ್ಕವನಿದ್ದಾಗ ತಂದೆಯೊಡನೆ ಹೋಗಿದ್ದ ಆ ಸ್ಥಳಕ್ಕೆ ಮತ್ತೆ ಹೋಗಲು ಇಷ್ಟ­ಪಡುತ್ತೇನೆ ಎಂದು  ಹೇಳಿದ್ದಾರೆ.

‘ನನ್ನ ಕುಟುಂಬದ ಮೂಲ ಪೆಶಾವರ­. ಕೆಲವು ಸದಸ್ಯರು ಇನ್ನೂ ಅಲ್ಲಿ ವಾಸವಾಗಿದ್ದಾರೆ. ನಾನು 15ವರ್ಷದ­ವನಾಗಿದ್ದಾಗ ನನ್ನ ತಂದೆ ನನ್ನನ್ನು ಅಲ್ಲಿಗೆ ಕರೆದೊಯ್ದಿದ್ದರು.

ಪೆಶಾವರ, ಕರಾಚಿ ಮತ್ತು ಲಾಹೋರ್‌­­ದಲ್ಲಿ ತಂದೆಯೊಂದಿಗೆ ಕಳೆದ ದಿನಗಳ ಕುರಿತು ನನಗಿನ್ನೂ ಕೆಲವು ಅದ್ಭುತವಾದ ನೆನಪುಗಳಿವೆ. ಆ ಸ್ಥಳ­ಗಳನ್ನು ನನ್ನ ಮಕ್ಕಳಿಗೂ ತೋರಿಸಬೇಕು ಎಂಬ ಆಸೆ ನನಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT