ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಯ್ಡ್ ನ್ಯೂಸ್‌ ದೃಢಪಟ್ಟರೆ ಅಭ್ಯರ್ಥಿ ವೆಚ್ಚಕ್ಕೆ ಸೇರಿಸಲಾಗುತ್ತದೆ: ಡಿಸಿ

Last Updated 23 ಮಾರ್ಚ್ 2014, 11:12 IST
ಅಕ್ಷರ ಗಾತ್ರ

ಉಡುಪಿ: ಲೋಕಸಭಾ ಚುನಾವಣೆ­ಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪರ­ವಾಗಿ ಜಾಹೀರಾತು ಪ್ರಸಾರ ಮಾಡುವ ಸ್ಥಳೀಯ ಕೇಬಲ್ ವಾಹಿನಿಗಳು ಜಾಹೀ­ರಾತು ತಯಾರಿಕೆ ಮತ್ತು ಪ್ರಸಾರಕ್ಕೆ ತಗಲುವ ನಿಖರವಾದ ವೆಚ್ಚವನ್ನು ತಿಳಿಸ­ಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣ­ದಲ್ಲಿ ಗುರುವಾರ ನಡೆದ ಮಾಧ್ಯಮ ದೃಢೀಕರಣ ಮತ್ತು ಮೇಲುಸ್ತುವಾರಿ ಸಮಿತಿ (ಎಂಸಿಎಂಸಿ) ಸಭೆಯ ಅಧ್ಯಕ್ಷತೆ­ಯನ್ನು ವಹಿಸಿ ಮಾತನಾಡಿದರು.

ಎಂಸಿಎಂಸಿ ಸಮಿತಿಯ ಅನುಮೋದ­ನೆಗೆ ಸಲ್ಲಿಸಲಾಗುತ್ತಿರುವ ಅರ್ಜಿಗಳಲ್ಲಿ ಜಾಹೀರಾತು ಪಡೆಯವ ವಾಹಿನಿಗಳು ನಮೂದಿಸಿರುವ ದರಗಳು ನಿಜವಾದ ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ­ಯಿದೆ. 

ಜಾಹೀರಾತು ನಿರ್ಮಾಣ ಮತ್ತು ಪ್ರಸಾರದ ವೆಚ್ಚಗಳು ಅಭ್ಯರ್ಥಿ­ಗಳ ಚುನಾವಣಾ ವೆಚ್ಚಕ್ಕೆ ಪರಿಗಣೆನೆ­ಯಾಗುವುದರಿಂದ ಸರಿಯಾದ ದರ­ವನ್ನು ನಮೂದಿಸಿ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಪತ್ರಿಕೆ­ಯಲ್ಲಿ ಬರುವ ಪೇಯ್ಡ್ ನ್ಯೂಸ್‌ಗಳನ್ನು ಸಮಿತಿಯ ಸದಸ್ಯರು ಪರಿಶೀಲಿಸುತ್ತಿದ್ದು, ಪೇಯ್ಡ್ ನ್ಯೂಸ್ ವರದಿ ಕಂಡು­ಬಂದಲ್ಲಿ, ವರದಿಯ ವೆಚ್ವ­ವನ್ನು ಸಮಿತಿ­ಯು ನಿರ್ಧರಿಸಿ, ಅಭ್ಯರ್ಥಿ­ಯ ವೆಚ್ಚಕ್ಕೆ ಸೇರಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಕನಗವಲ್ಲಿ, ಹೆಚ್ಚುವರಿ ಜಿಲ್ಲಾಧಿ­ಕಾರಿ ಕುಮಾರ, ಸಹಾಯಕ ಚುನಾ­ವಣಾ ಲೆಕ್ಕ ವೀಕ್ಷಣಾಧಿಕಾರಿ ಬಿ. ತಿಮ್ಮಪ್ಪ, ಹಿರಿಯ ಪತ್ರಕರ್ತ ಮಾಧವಾ­ಚಾರ್ಯ, ಮಣಿಪಾಲ ಸಮೂಹ ಸಂವ­ಹನ ವಿಭಾಗದ ಮುಖ್ಯಸ್ಥ ವರದೇಶ್ ಹಿರೇಗಂಗೆ, ನಗರ ಗ್ರಂಥಾಲಯಾಧಿಕಾರಿ ನಳಿನಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT