ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಸ್ಟ್: ಸರ್ಕಾರದ ನಿಯಮಾವಳಿ

Last Updated 3 ಜುಲೈ 2012, 19:30 IST
ಅಕ್ಷರ ಗಾತ್ರ

ಮಾರುಕಟ್ಟೆಯಲ್ಲಿನ ಪೈಪೋಟಿಯಿಂದಾಗಿ ಇಂದು ಹಲ್ಲುಜ್ಜುವ ಪೇಸ್ಟ್‌ಗಳ ಪ್ಯಾಕಿಂಗ್ ಮತ್ತು ಲೇಬಲಿಂಗ್ ಆಕರ್ಷಕವಾಗಿದೆ. ಇದೇ ವೇಳೆ ಲೇಬಲಿಂಗ್‌ಗೆ ಸಂಬಂಧಿಸಿದಂತೆ ಸರ್ಕಾರ ಕೆಲವು ಕಟ್ಟುಪಾಡುಗಳನ್ನೂ ವಿಧಿಸಿದೆ.
 
ನಿಯಮಾವಳಿ ಪ್ರಕಾರ, ಯಾವುದೇ ಪೇಸ್ಟ್ ಪ್ಯಾಕೆಟ್ ಮೇಲಿನ ಲೇಬಲ್ ಕೆಳಕಂಡ ಮಾಹಿತಿಗಳನ್ನು ಒಳಗೊಂಡಿರುವುದು ಕಡ್ಡಾಯ

1) ಪೇಸ್ಟ್‌ನ ಹೆಸರು ಮತ್ತು ದೃಢೀಕೃತ ಲಾಂಛನ ಇದ್ದರೆ ಅದನ್ನು ಅಚ್ಚು ಹಾಕಿರಬೇಕು.
2) ಯಾವುದೇ ಕಂಪೆನಿ ಪೇಸ್ಟ್‌ನ ಚಿಕಿತ್ಸಕ ಪರಿಣಾಮದ ಬಗ್ಗೆ ಪ್ರಚಾರ ಮಾಡಿಕೊಂಡಿದ್ದರೆ, ಅದಕ್ಕೆ ಕಾರಣವಾಗುವ ಪೇಸ್ಟ್‌ನಲ್ಲಿನ ರಾಸಾಯನಿಕ ವಸ್ತುವಿನ ಹೆಸರು ಹಾಗೂ ಅದರ ಪ್ರಮಾಣ
3) ರಾಸಾಯನಿಕ ಅಂಶಗಳ ವಿವರ ಹಾಗೂ ಅವುಗಳ ಪ್ರಮಾಣ
4) ವಿವಿಧ ಘಟಕಾಂಶಗಳು ಪ್ರಮಾಣ ಅಥವಾ ತೂಕ
5) ಲಾಟ್/ ಬ್ಯಾಚ್ (ಸಂಕೇತ ಅಥವಾ ಸಂಖ್ಯೆ)
6) ತಯಾರಕರ ಹೆಸರು, ವಿಳಾಸ
7) ಪೇಸ್ಟ್‌ಗೆ ಫ್ಲೋರೀನ್ ಅಂಶವನ್ನು ಸೇರಿಸಿದ್ದರೆ,  `ಫ್ಲೋರಿಡೇಟೆಡ್ ಟೂಥ್‌ಪೇಸ್ಟ್~ ಎಂಬುದನ್ನು ಕನಿಷ್ಠ 3 ಮಿ.ಮಿ. ಎತ್ತರದ ಅಕ್ಷರಗಳಲ್ಲಿ, ನೋಡಲು ಎದ್ದುಕಾಣುವಂತೆ ಮುದ್ರಿಸಿರಬೇಕು.
8) ಉತ್ಪನ್ನ ತಯಾರಾದ ದಿನಾಂಕ, ಅದು ಬಳಕೆಗೆ ಅರ್ಹವಾಗಿರುವ ದಿನಾಂಕದ ಗಡುವು (ವರ್ಷ, ತಿಂಗಳು, ದಿನ)
9) ಪೇಸ್ಟ್ ಸಂರಕ್ಷಿಸಿ ಇಡುವ ರೀತಿ
10) ಆಮದು ಮಾಡಿಕೊಂಡ ಪೇಸ್ಟ್ ಆಗಿದ್ದರೆ, ಎಲ್ಲಿಂದ ಆಮದಾಗಿದೆ ಎಂಬ ಮಾಹಿತಿ
11) ಬಳಕೆ ರೀತಿಯ ಬಗ್ಗೆ ಹೊರ ಕವರ್‌ನ ಮೇಲೆ ಅಥವಾ ಒಳಸೇರಿಸಿದ ಕಾಗದದಲ್ಲಿ ಮಾಹಿತಿ
12) ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ)

(ಮುಗಿಯಿತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT