ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಕಾ ಅಥ್ಲೆಟಿಕ್ಸ್: ಮೈಸೂರು ಪಾರಮ್ಯ

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಗದಗ: ಮೈಸೂರು ಜಿಲ್ಲೆಯ ಆಟಗಾರ್ತಿಯರು ಇಲ್ಲಿನ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಆರಂಭಗೊಂಡ ರಾಜ್ಯಮಟ್ಟದ ಮಹಿಳಾ ಪೈಕಾ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಪಾರಮ್ಯ ಮೆರೆದಿದ್ದಾರೆ. ಪಣಕ್ಕಿದ್ದ ಪ್ರಶಸ್ತಿಗಳಲ್ಲಿ ಸಿಂಹಪಾಲನ್ನು ಬಾಚಿಕೊಂಡಿದ್ದಾರೆ. ಇದೇ ತಂಡದ ಬೇಬಿ ಸುಮಯ್ಯಾ 11.09 ಸೆಕೆಂಡ್‌ಗಳಲ್ಲಿ ಗುರಿ ತಲಪುವ ಮೂಲಕ ಕೂಟದ ವೇಗದ ಓಟಗಾರ್ತಿ ಎನಿಸಿದ್ದಾರೆ.

ಫಲಿತಾಂಶ: 100 ಮೀ. ಓಟ: ಬೇಬಿ ಸುಮಯ್ಯಾ (ಮೈಸೂರು)-1, ಮಂಜುಶ್ರೀ (ತುಮಕೂರು)-2, ಪ್ರಿಯಾಂಕ ಕಾಳಗೆ (ಧಾರವಾಡ)-3, ಕಾಲ: 11.09 ಸೆಕೆಂಡ್; 400 ಮೀ. ಓಟ: ರೀನಾ ಜಾರ್ಜ್ (ಮೈಸೂರು)-1, ಅನಿತಾ (ಧಾರವಾಡ)-2, ಲಕ್ಷ್ಮೀ (ವಿಜಾಪುರ)-3, ಕಾಲ: 5.05 ನಿ.

1500 ಮೀ. ಓಟ: ಶ್ರದ್ಧಾರಾಣಿ ಎಸ್. ದೇಸಾಯಿ-1, (5.06.8 ಸೆ.) ಪ್ರಥಮ, ಮೈಸೂರಿನ ಯಶಸ್ವಿನಿ (ಇಬ್ಬರೂ ಮೈಸೂರು)-2, ಬಿ.ಎಸ್. ಪುಷ್ಪಲತಾ (ಮಂಡ್ಯ)-3,ಕಾಲ: 5.06.08 ನಿಮಿಷ, ಡಿಸ್ಕಸ್ ಥ್ರೋ: ಎಸ್. ಸುಷ್ಮಾ (ಮೈಸೂರು)-1, ಆರ್.ಎಸ್. ಶಿವನಂದಾ (ಬೆಂಗಳೂರು)-2, ಎಸ್.ಜಿ. ಪುಷ್ಪಾ (ಮೈಸೂರು)-3,ದೂರ: 34.89 ಮೀ.

ಹ್ಯಾಮರ್ ಥ್ರೋ:  ಎಸ್. ಸುಷ್ಮಾ (ಮೈಸೂರು)-1, ರಂಜನಾ ಬಾದರಿ (ಧಾರವಾಡ)-2, ಆರ್.ಎಸ್. ಶಿವನಂದಾ (ಬೆಂಗಳೂರು)-3, ದೂರ: 12.93 ಮೀ, ಹೈಜಂಪ್: ಪವಿತ್ರಾ-1, ಪಿ.ಬಿ.ಸುಮಿತ್ರಾ (ಇಬ್ಬರೂ ಮೈಸೂರು)-2, ಜೆ.ಶ್ರೇಯಾಂಕ (ಕೊಡಗು)-3, ಎತ್ತರ: 1.40 ಮೀ, ಲಾಂಗ್ ಜಂಪ್: ಆರ್.ಎ. ಮಂಜುಶ್ರೀ (ತುಮಕೂರು)-1, ರಮ್ಯಶ್ರೀ (ಮೈಸೂರು)-2, ಚಂದ್ರವ್ವ ಸನದಿ (ಧಾರವಾಡ)-3, ಉದ್ದ: 5.65ಮೀ, 4್ಡ100 ರಿಲೆ: ಮೈಸೂರು-1, ಬೆಂಗಳೂರು-2, ಮಂಡ್ಯ-3, ಕಾಲ: 4.26 ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT