ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಕಾ ಕ್ರೀಡಾಕೂಟ; ವರ್ಣರಂಜಿತ ಆರಂಭ

Last Updated 13 ಜನವರಿ 2011, 6:40 IST
ಅಕ್ಷರ ಗಾತ್ರ

ದಾವಣಗೆರೆ: ಬಾನಂಗಳದಲ್ಲಿ ಹಾರಾಡಿದ ತ್ರಿವರ್ಣ ಬಲೂನು, ರೆಕ್ಕೆಬಿಚ್ಚಿ ಹಾರಾಡಿದ ಶಾಂತಿದೂತ ಪಾರಿವಾಳ. ಟ್ರ್ಯಾಕ್‌ಸೂಟ್ ಧರಿಸಿ ಶಿಸ್ತಿನಿಂದ ನಿಂತ ದೇಶದ ವಿವಿಧ ಮೂಲೆಯ ಅರಳುವ ಕ್ರೀಡಾ ಪ್ರತಿಭೆಗಳು. ಬ್ಯಾಂಡ್‌ಸೆಟ್ ವಾದನಕ್ಕೆ ಲಯಬದ್ಧ ಹೆಜ್ಜೆಗಾರಿಕೆ.

ಸೂರ್ಯ ಮರೆಯಾದ. ಹೊನಲು ಬೆಳಕು ಹರಿಯಿತು. ಒಮ್ಮೆಲೆ ತೇಲಿಬಂದ ವಂದೇ ಮಾತರಂ, ಜೈಹೋ... ಗೀತೆ, ಒಂದು ಸಣ್ಣ ಬ್ರೇಕ್ ಮರುಕ್ಷಣವೇ ಮೂಡಿತು ಗಗನದಲ್ಲಿ ವರ್ಣ ಚಿತ್ತಾರ. ಇತ್ತ ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಹಾಡು. ಯುವ ಮನಸ್ಸುಗಳಿಗೆ ಆಹ್ಲಾದ ನೀಡಿದ ಕ್ಷಣಗಳವು.

ಸಂದರ್ಭ ಜಿಲ್ಲಾಡಳಿತ, ಜಿ.ಪಂ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಭಾರತೀಯ ಕ್ರೀಡಾ ಪ್ರಾಧಿಕಾರದ ಆಶ್ರಯದಲ್ಲಿ ಬುಧವಾರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪಂಚಾಯತ್ ಯುವ ಕ್ರೀಡಾ ಔರ್ ಖೇಲ್ ಅಭಿಯಾನ್(ಪೈಕಾ) ಅಡಿ ನಡೆದ ರಾಷ್ಟ್ರೀಯ ಗ್ರಾಮೀಣ ಕ್ರೀಡಾಕೂಟದ ವರ್ಣರಂಜಿತ ಉದ್ಘಾಟನೆ.

ಫಲಿತಾಂಶ
ಬುಧವಾರ ಆರಂಭವಾದ ಪಂಚಾಯತ್ ಯುವ ಕ್ರೀಡಾ ಔರ್ ಖೇಲ್ ಅಭಿಯಾನ್ ಅಡಿ ನಡೆಯುತ್ತಿರುವ ಮೂರನೇ ರಾಷ್ಟ್ರಮಟ್ಟದ 16 ವರ್ಷದ ಒಳಗಿನ ಬಾಲಕ-ಬಾಲಕಿಯರ ಗ್ರಾಮೀಣ ಕ್ರೀಡಾಕೂಟದ ಕಬಡ್ಡಿ ಹಾಗೂ ಕೊಕ್ಕೊ ಲೀಗ್ ಪಂದ್ಯಗಳ ಫಲಿತಾಂಶ.

ಬಾಲಕರ ಕೊಕ್ಕೊ: ಕೇರಳ ತಂಡವು ಉತ್ತರ ಖಂಡದ ವಿರುದ್ಧ 15-8 ಅಂಕಗಳ ಅಂತರದಿಂದ ಜಯಗಳಿಸಿದೆ. ಛತ್ತೀಸ್‌ಘಡದ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ 13-7 ಅಂಕಗಳ ಅಂತರದಲ್ಲಿ ಜಯಗಳಿಸಿದೆ. ಮಹಾರಾಷ್ಟ್ರ ತಂಡವು ಒಡಿಶಾ ವಿರುದ್ಧ 10-9 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದೆ.

ಬಾಲಕಿಯರ ಕೊಕ್ಕೊ: ಮಧ್ಯಪ್ರದೇಶ ತಂಡವು ಗುಜರಾತ್ ವಿರುದ್ಧ 7-5 ಅಂಕಗಳ ಅಂತರದಲ್ಲಿ ಜಯ ಸಾಧಿಸಿದೆ.

ಬಾಲಕರ ಕಬಡ್ಡಿ: ದೆಹಲಿ ತಂಡವು ಗೋವಾ ವಿರುದ್ಧ 36-10 ಅಂಕಗಳ ಅಂತರದಲ್ಲಿ ಜಯಗಳಿಸಿದೆ. ಹರಿಯಾಣ ತಂಡವು ಕೇರಳ ವಿರುದ್ಧ 54-11 ಅಂಕಗಳ ಅಂತರದಲ್ಲಿ ಗೆದ್ದಿದೆ. ಉತ್ತರ ಪ್ರದೇಶ ತಂಡವು ಗುಜರಾತನ್ನು 40-17 ಅಂಕಗಳ ಅಂತರದಲ್ಲಿ ಮಣಿಸಿದೆ. ತಮಿಳುನಾಡು ತಂಡವು ಪಂಜಾಬ್ ವಿರುದ್ಧ 27-18 ಅಂಕಗಳ ಅಂತರದಲ್ಲಿ ಜಯ ಸಾಧಿಸಿದೆ.

ಬಾಲಕಿಯರ ಕಬಡ್ಡಿ: ಆಂಧ್ರಪ್ರದೇಶ ತಂಡವು ಗೋವಾ ವಿರುದ್ಧ 57-9 ಅಂಕಗಳ ಅಂತರದಲ್ಲಿ, ದೆಹಲಿ ತಂಡ ಗುಜರಾತ್ ವಿರುದ್ಧ 55-10 ಅಂತರದಲ್ಲಿ ಜಯ ಸಾಧಿಸಿದೆ. ಪಶ್ಚಿಮ ಬಂಗಾಳವು ಮೇಘಾಲಯದ ವಿರುದ್ಧ 43-20 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಪಂಜಾಬ್ ತಂಡವು ತಮಿಳುನಾಡು ವಿರುದ್ಧ 51-28 ಅಂಕಗಳ ಅಂತರದಲ್ಲಿ, ಉತ್ತರ ಪ್ರದೇಶ ತಂಡವು ಬಿಹಾರ ವಿರುದ್ಧ 44-6 ಅಂಕಗಳ ಅಂತರದಲ್ಲಿ ಜಯ ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT