ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಕಾ–ಗ್ರಾಮೀಣ ಕ್ರೀಡಾಕೂಟಕ್ಕೆ ಹೊಸ ಸೌಲಭ್ಯ

Last Updated 21 ಸೆಪ್ಟೆಂಬರ್ 2013, 9:56 IST
ಅಕ್ಷರ ಗಾತ್ರ

ರಾಮನಗರ: ಕ್ರೀಡಾ ವಸತಿ ಶಾಲೆ ಮತ್ತು ಕ್ರೀಡಾ ನಿಲಯದ ಕ್ರೀಡಾ ಪಟುಗಳು ಹಾಗೂ ಕ್ರೀಡಾ ತಂಡಗಳು ‘ಪಂಚಾಯತ್‌ ಯುವ ಕ್ರೀಡಾ ಮತ್ತು ಖೇಲ್‌ ಅಭಿಯಾನ’ (ಪೈಕಾ)ದ ಗ್ರಾಮೀಣ ಕ್ರೀಡಾಕೂಟದಲ್ಲಿ ನೇರವಾಗಿ ರಾಜ್ಯಮಟ್ಟದಲ್ಲಿ ಭಾಗವಹಿಸಲು ಅವ ಕಾಶ ಕಲ್ಪಿಸಿ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ನಿರ್ದೇಶನಾಲಯ ಆದೇಶಿಸಿದೆ.

ಕ್ರೀಡಾ ಶಾಲೆ ಮತ್ತು ಕ್ರೀಡಾ ನಿಲಯದ ಕ್ರೀಡಾಪಟುಗಳಿಗೆ ನುರಿತ ತಜ್ಞರಿಂದ ಸೂಕ್ತ ತರಬೇತಿ ದೊರೆಯು ತ್ತದೆ ಹಾಗೂ ಇಲ್ಲಿನ ಕ್ರೀಡಾಪಟುಗಳು ನಿರಂತರ ಕ್ರೀಡಾ ಅಭ್ಯಾಸದಲ್ಲಿ ತೊಡಗಿ ರುತ್ತಾರೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಅವರಿಗೆ ನೇರವಾಗಿ ರಾಜ್ಯಮಟ್ಟದಲ್ಲಿ ಭಾಗವಹಿಸಲು ಅವ ಕಾಶ ಕಲ್ಪಿಸಲಾಗಿದೆ.

ಕ್ರೀಡಾ ತಾಂತ್ರಿಕ ಕೌಶಲ ಮತ್ತು ಅಭ್ಯಾಸದಿಂದಾಗಿ ಕ್ರೀಡಾಶಾಲೆ ಮತ್ತು ಕ್ರೀಡಾ ನಿಲಯಗಳ ಕ್ರೀಡಾಪಟುಗಳು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಅಲ್ಲದೆ ಈ ಶಾಲೆಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿಯೇ ಕ್ರೀಡಾ ಕೌಶಲ ಹಾಗೂ ಅವರ ದೈಹಿಕ ಸಾಮರ್ಥ್ಯ ಪರೀಕ್ಷಿಸಲಾಗಿರುತ್ತದೆ. ಹೀಗಾಗಿ ಅವರ ಸಾಮರ್ಥ್ಯ ಇತರರಿಗಿಂತ ಹೆಚ್ಚಿರುವ ಕಾರಣ ಅವರನ್ನು ನೇರವಾಗಿ ರಾಜ್ಯಮ ಟ್ಟದಲ್ಲಿ ಸ್ಪರ್ಧಿಸಲು ನಿರ್ದೇಶನಾಲಯ ಅನುವು ಮಾಡಿಕೊಟ್ಟಿದೆ ಎಂದು ರಾಮ ನಗರ ಜಿಲ್ಲೆಯ ಕ್ರೀಡಾ ತರಬೇತಿದಾರರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

‘ಅಲ್ಲದೆ ಈ ಕ್ರೀಡಾಪಟುಗಳು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಿದರೆ, ಇವರೇ ಗೆಲುವು ಸಾಧಿಸಿ, ರಾಜ್ಯಮಟ್ಟಕ್ಕೆ ಹೋಗುತ್ತಾರೆ ಎಂಬುದ ರಲ್ಲಿ ಸಂಶಯ ಇಲ್ಲ. ಇಲ್ಲಿ ಸೋಲುವ ಗ್ರಾಮಿೀಣ ಕ್ರೀಡಾಪಟುಗಳು ನಿರಾಸೆ ಯಿಂದ ಮನೆಗೆ ಹಿಂದಿರುಗುತ್ತಾರೆ.  ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಕ್ರೀಡೆಯತ್ತ ಸೆಳೆಯಲು ಇಲಾಖೆ ಈ ಕ್ರಮ ಕೈಗೊಂಡಿದೆ’ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ನವಜ್ಯೋತಿ ‘ಪ್ರಜಾವಾಣಿ’ಗೆ ತಿಳಿಸಿ ದರು.

ಸಲಹೆಗೆ ಮನ್ನಣೆ: 2008–09ನೇ ಸಾಲಿನಿಂದ ಆರಂಭವಾಗಿರುವ ’ಪೈಕಾ’ ಗ್ರಾಮೀಣ ಕ್ರೀಡಾ ಕೂಟದಲ್ಲಿ ಭಾಗವ ಹಿಸುವ ಕ್ರೀಡಾ ವಸತಿ ಶಾಲೆಗಳ ವಿದ್ಯಾರ್ಥಿ ಗಳೇ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ  ಪ್ರಶಸ್ತಿಗಳನ್ನು ಬಾಚಿಕೊಂಡು ಅವರೇ ರಾಜ್ಯಮಟ್ಟಕ್ಕೆ ಹೋಗುತ್ತಾರೆ. ಅಲ್ಲದೆ ಅದೇ ಕ್ರೀಡಾಪಟುಗಳು ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕ್ರೀಡೆಗಳಲ್ಲೂ ಪ್ರಶಸ್ತಿಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ದೊರೆಯುತ್ತಿಲ್ಲ ಎಂಬ ದೂರು ಕೆಲ ದೈಹಿಕ ಶಿಕ್ಷಕರಿಂದ ವ್ಯಕ್ತವಾಗಿತ್ತು.

ಕ್ರೀಡಾ ವಸತಿ ಶಾಲೆ ಅಥವಾ ಕ್ರೀಡಾ ನಿಲಯಗಳ ಕ್ರೀಡಾಪಟುಗಳನ್ನು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಪೈಕಾ ಕ್ರೀಡಾಕೂಟದಿಂದ ವಿನಾಯಿತಿ ನೀಡಿದರೆ ನಿಜವಾದ ಗ್ರಾಮೀಣ ಕ್ರೀಡಾ ಪಟುಗಳು ರಾಜ್ಯಮಟ್ಟದ ಕ್ರೀಡಾ ಕೂಟದಲ್ಲಿ ಸ್ಪರ್ಧಿಸಲು ಸಾಧ್ಯವಾ ಗುತ್ತದೆ ಎಂದು ದೈಹಿಕ ಶಿಕ್ಷಕರು ಸಲಹೆ ನೀಡಿದ್ದರು ಎಂದು ಗೊತ್ತಾಗಿದೆ.

ಇದನ್ನು ಸಮಗ್ರವಾಗಿ ಪರಿಶೀಲಿಸಿದ ಇಲಾಖೆಯು ನುರಿತರಿಂದ ತರಬೇತಿ ಪಡೆದು, ಸದಾ ಕ್ರೀಡಾ ಅಭ್ಯಾಸದಲ್ಲಿ ತೊಡಗಿರುವ ಕ್ರೀಡಾ ಶಾಲೆ ಮತ್ತು ಕ್ರೀಡಾ ನಿಲಯಗಳ ವಿದ್ಯಾರ್ಥಿಗಳಿಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟದಿಂದ ವಿನಾಯಿತಿ ನೀಡಿ, ನೇರವಾಗಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ನವ ಜ್ಯೋತಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT