ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಗಂಬರ್ ಉದಾತ್ತತೆ ಸಾರಿದ ಈದ್ ಮಿಲಾದ್

Last Updated 6 ಫೆಬ್ರುವರಿ 2012, 3:30 IST
ಅಕ್ಷರ ಗಾತ್ರ

ಬೆಂಗಳೂರು: ಈದ್ ಮಿಲಾದ್ ಆಚರಣೆಯ ಅಂಗವಾಗಿ ಭಾನುವಾರ ಸಂಜೆ ಸಾವಿರಾರು ಸಂಖ್ಯೆಯ ಮುಸ್ಲಿಂ ಬಾಂಧವರು ನಗರದ ನೃಪತುಂಗ ರಸ್ತೆಯ ವೈಎಂಸಿಎ ಮೈದಾನದಲ್ಲಿ ಸೇರಿ ಪರಸ್ಪರ ಶುಭಾಶಯ ಹಂಚಿಕೊಂಡರು.

ಹಿರಿಯರು, ಯುವಕರು, ಮಕ್ಕಳು ಸೇರಿದಂತೆ ಸಾವಿರಾರು ಜನ ಉತ್ಸಾಹ ದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡು ಭಿನ್ನ ರೀತಿಯಲ್ಲಿ ಪ್ರವಾದಿಯನ್ನು ಆರಾಧಿಸಿದರು. ಜಯನಗರದಲ್ಲಿ ಎನ್‌ಜಿಒ ನಡೆಸುತ್ತಿರುವ ಸೈಯದ್ ಹಮೀದ್ ಮೋಸಿನ್ ಎಂಬುವರು `ಎಲ್ಲರಿಗಾಗಿ ಮಹಮ್ಮದ್~ ಎಂಬ ಆಂದೋಲನ ನಡೆಸಿ ಪೈಗಂಬರರ ಶ್ರೆಷ್ಠತೆಯನ್ನು ಸಾರಿದರು. ಇದಕ್ಕಾಗಿ ಸೈಯದ್ ನಗರದಾದ್ಯಂತ 20 ಕ್ಕೂ ಹೆಚ್ಚು ಫಲಕಗಳನ್ನು ಹಾಕುವುದರ ಜೊತೆಗೆ ಆಹ್ವಾನದ ಪ್ರತಿಗಳನ್ನು ಹಂಚಿ ಜನರನ್ನು ಆಹ್ವಾನಿಸಿದ್ದರು.

ಪ್ರಾರ್ಥನೆ ಪ್ರವಚನಗಳ ಮೂಲಕ ಮಹಮ್ಮದ್‌ರ ಶ್ರೇಷ್ಠತೆಯನ್ನು ಸಾರಿದರು. ರಾಜ್ಯಪಾಲ ಹಂಸರಾಜ್ ಭಾರ ದ್ವಾಜ್ ಮಾತನಾಡಿ `ಮಹಮ್ಮದ್ ಹಾಗೂ ಖುರಾನ್‌ನ ಶ್ರೇಷ್ಠತೆ ತಿಳಿಯ ದವರು ಮಾತ್ರ ಅಗೌರವದಿಂದ ವರ್ತಿಸುತ್ತಿದ್ದಾರೆ. ನಾನು ಅಧಿಕಾರ ದಲ್ಲಿರುವವರೆಗೂ ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಶಾಂತಿ ಹಾಗೂ ರಕ್ಷಣೆಗೆ ಯಾವುದೆ ಸಮಸ್ಯೆಯಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT