ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಪ್‌ಲೈನ್: ಚೇಳ್ಯಾರು ರಸ್ತೆಗೆ ಹಾನಿ

Last Updated 23 ಫೆಬ್ರುವರಿ 2012, 9:45 IST
ಅಕ್ಷರ ಗಾತ್ರ

ಸುರತ್ಕಲ್: ಸುರತ್ಕಲ್‌ನ ಚೇಳ್ಯಾರು ಗ್ರಾಮ ಪಂಚಾಯಿತಿ ರಸ್ತೆ ಎಂಎಸ್‌ಇಜೆಡ್‌ನ ಪೈಪ್‌ಲೈನ್ ಕಾಮಗಾರಿ ಯಿಂದಾಗಿ ಸಂಪೂರ್ಣ ಹದಗೆಟ್ಟಿದ್ದು, ಜನರು ನಿತ್ಯ ಯಾತನೆ ಅನುಭವಿಸು ವಂತಾಗಿದೆ.

ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಈ ಹಿಂದೆ ಖುಷಿಪಡು ತ್ತಿದ್ದರು. ಹಳೆಯಂಗಡಿ ಕಡೆಯಿಂದ ಕಾಟಿಪಳ್ಳ ಸೂರಿಂಜೆ ಕಡೆಗೆ ಸಂಚರಿಸುವ ಸವಾರರು ಎನ್‌ಐಟಿಕೆ ಶ್ರೀನಿವಾಸನಗರ ಬಳಿ ತಿರುವು ಪಡೆದು ಈ ರಸ್ತೆಯಲ್ಲೇ ಮುಂದೆ ಸಾಗುತ್ತಿದ್ದರು. ಇದರಿಂದ ಕ್ರಮಿಸುವ ದೂರ ಕೂಡಾ ಕಡಿಮೆ ಯಾಗುತ್ತಿತ್ತು. ಈ ರಸ್ತೆಯಲ್ಲಿ ವಾಹನ ಗಳ ಸಂಖ್ಯೆಯೂ ವಿರಳವಾಗಿತ್ತು. ರಸ್ತೆಯೂ ಸಂಚಾರಕ್ಕೆ ಯೋಗ್ಯ ವಾಗಿತ್ತು.

ಎಂಎಸ್‌ಇಜೆಡ್‌ನ ಮುಕ್ಕ ಸಮುದ್ರಕ್ಕೆ ತ್ಯಾಜ್ಯ ವಿಲೇವಾರಿಗೆ ಸಂಪರ್ಕ ಕಲ್ಪಿಸುವ ಪೈಪ್‌ಲೈನ್ ಕಾಮಗಾರಿ ಈ ರಸ್ತೆಯಲ್ಲಿ ಮುಂದೆ ಸಾಗುತ್ತಿದೆ. ಆರಂಭದಲ್ಲಿ ಸಾರ್ವಜನಿ ಕರಿಂದ ವಿರೋಧ ವ್ಯಕ್ತವಾಗಿದ್ದರೂ ರಸ್ತೆಯನ್ನು ಸಮರ್ಪಕಗೊಳಿಸುವುದಾಗಿ ಗುತ್ತಿಗೆದಾರರು ಅಭಯ ನೀಡಿದ್ದರಿಂದ ಇಲ್ಲಿನ ಜನತೆ ಸುಮ್ಮನಾಗಿದ್ದರು. ಆದರೆ ಕಾಮಗಾರಿ ನಡೆದಿದೆ. ರಸ್ತೆ ಮಾತ್ರ ದುಸ್ಥಿತಿಯಲ್ಲಿದೆ. ಕೆಲವೆಡೆ ರಸ್ತೆ ಹದ ಮಾಡಿ ಡಾಂಬರೀಕರಣಗೊಳಿಸಲಾಗಿ ದ್ದರೆ ಹಲವೆಡೆ ರಸ್ತೆ ದುಸ್ಥಿತಿಯಲ್ಲೇ ಇದೆ.

ಇಡೀ ರಸ್ತೆ ದೂಳುಮಯವಾಗಿದ್ದು ಅಗೆದ ಮಣ್ಣನ್ನು ಪಕ್ಕದಲ್ಲೇ ಹಾಕ ಲಾಗಿದೆ. ಇದರಿಂದ ಪಾದಚಾರಿ ಗಳಿಗೂ ಸಂಚಾರಕ್ಕೆ ಸಮಸ್ಯೆ ಯಾಗಿದ್ದು ಮಳೆಗಾಲದಲ್ಲಿ  ಮಳೆನೀರಿಗೆ ಮಣ್ಣು ರಸ್ತೆಯನ್ನು ಕ್ರಮಿಸುವ ಸಾಧ್ಯತೆಯೂ ಇದೆ ಎಂದು ಸ್ಥಳೀಯರು ದೂರುತ್ತಾರೆ.

ಕುಡಿಯುವ ನೀರಿನ ಸಮಸ್ಯೆ ಹಿನ್ನಲೆಯಲ್ಲಿ ಚೇಳ್ಯಾರು ಮಧ್ಯ ಉಭಯ ಗ್ರಾಮಗಳಿಗೆ ರೂ. 70 ಲಕ್ಷ ವೆಚ್ಚದಲ್ಲಿ ನೀರಿನ ಪೈಪ್ ಅಳವ ಡಿಸಲಾಗಿತ್ತು. ಆದರೆ ಕಾಮಗಾರಿ ಯಿಂದ ನೀರಿನ ಪೈಪ್‌ಗಳಿಗೆ ಹಾನಿ ಯಾಗಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಪುನರಾವರ್ತನೆ ಯಾಗಿದ್ದು, ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸದಿದ್ದಲ್ಲಿ ಜಿ.ಪಂ. ಸದಸ್ಯರ ನೇತೃತ್ವದಲ್ಲಿ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಬೇಕಾದೀತು ಎಂದು ಗ್ರಾ.ಪಂ. ಸದಸ್ಯೆ ಯಶೋದಾ ಎಚ್ಚರಿಸಿದ್ದಾರೆ.

ಸ್ಥಳೀಯ ಚೇಳ್ಯಾರು ಗ್ರಾ.ಪಂ. ಸದಸ್ಯೆ ಪ್ರತಿಮಾ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿ, ಎಂಎಸ್‌ಇಜೆಡ್‌ಗೆ  ಈ ಬಗ್ಗೆ ದೂರು ನೀಡಲಾಗಿದ್ದು ಗುತ್ತಿಗೆದಾರರಿಗೆ ಸಮಸ್ಯೆ ಸರಿಪಡಿಸು ವಂತೆ ಸೂಚಿಸಿದ್ದೇವೆ ಎಂದು ಕಂಪೆನಿ ಮೂರು ತಿಂಗಳ ಹಿಂದೆಯೇ ತಿಳಿಸಿತ್ತು. ಆದರೆ ಇನ್ನೂ ಸಮಸ್ಯೆ ಬಗೆಹರಿದಿಲ್ಲ ಎನ್ನುತ್ತಾರೆ. ಸ್ಥಳೀಯರೂ ಸಮಸ್ಯೆ ಬಗ್ಗೆ ಪತ್ರಿಕೆಯೊಂದಿಗೆ ದೂರಿಕೊಂಡಿದ್ದು ಸಂಬಂಧಪಟ್ಟವರು ಈ ಬಗ್ಗೆ ಶೀಘ್ರ ಗಮನಹರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT