ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಚಿತ್ತವೆಲ್ಲಾ ಕ್ರಿಕೆಟ್ ಆಟದತ್ತ...!

Last Updated 21 ಫೆಬ್ರುವರಿ 2011, 18:45 IST
ಅಕ್ಷರ ಗಾತ್ರ

ಅಹಮದಾಬಾದ್: ಚೀನಾದಲ್ಲಿ ಒಲಿಂಪಿಕ್ ನಡೆದಾಗ, ದಕ್ಷಿಣ ಆಫ್ರಿಕಾದಲ್ಲಿ ವಿಶ್ವಕಪ್ ಫುಟ್‌ಬಾಲ್ ಆಯೋಜನೆಗೊಂಡಾಗ, ಆಸ್ಟ್ರೇಲಿಯಾದಲ್ಲಿ ರಗ್ಬಿ ವಿಶ್ವಕಪ್ ಪಂದ್ಯಗಳು ನಡೆದಿದ್ದಾಗ ಭದ್ರತಾ ಸಿಬ್ಬಂದಿ ಆಟ ನಡೆಯುವ ಕ್ಷೇತ್ರಕ್ಕೆ ಬೆನ್ನುಮಾಡಿಕೊಂಡು ನಿಂತಿದ್ದನ್ನು ಟೆಲಿವಿಷನ್‌ನಲ್ಲಿ ಕಂಡಿರುವುದು ಸಾಮಾನ್ಯ.

ಶ್ರೀಲಂಕಾದಲ್ಲಿಯೂ ಕ್ರಿಕೆಟ್ ಪಂದ್ಯಗಳು ನಡೆದಾಗ ಇಂಥ ದೃಶ್ಯ ಕೆಲವೊಮ್ಮೆ ಗಮನ ಸೆಳೆದಿದ್ದಿದೆ. ಆದರೆ ಭಾರತದಲ್ಲಿ ಮಾತ್ರ ಸ್ಥಿತಿ ಬೇರೆಯೇ ಆಗಿರುತ್ತದೆ. ಭದ್ರತೆಗಾಗಿ ನಿಯೋಜಿತರಾದ ಪೊಲೀಸರು ಜನರ ಕಡೆ ಮುಖಮಾಡಿಕೊಂಡು ಸುತ್ತಲಿನ ಚಲನವಲನವನ್ನು ನೋಡುವುದು ಬಹಳ ಕಡಿಮೆ. ಅವರ ಗಮನವೆಲ್ಲಾ ಆಟದ ಕಡೆಗೇ ಇರುತ್ತದೆ.

ಇಲ್ಲಿ ಸೋಮವಾರ ನಡೆದ ಆಸ್ಟ್ರೇಲಿಯಾ ಹಾಗೂ ಜಿಂಬಾಬ್ವೆ ತಂಡಗಳ ನಡುವಣ ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿದ್ದ ಹೆಚ್ಚಿನ ಪೊಲೀಸರು ನಿರಮ್ಮಳವಾಗಿ ಆಟವನ್ನು ನೋಡುತ್ತ ನಿಂತಿದ್ದು ಗಮನ ಸೆಳೆಯಿತು. ಸುರಕ್ಷತೆಯ ಜವಾಬ್ದಾರಿಯನ್ನು ಹೊತ್ತ ಪೊಲೀಸರು ಆಟದ ಕಡೆಗೆ ಚಿತ್ತವನ್ನು ಕೇಂದ್ರೀಕರಿಸಿದರೆ ಭದ್ರತೆಯ ಬಗ್ಗೆ ಕಾಳಜಿ ಮಾಡುವವರು ಯಾರು? ಎನ್ನುವ ಸವಾಲು ಕಾಡುವುದು ಸಹಜ.

ಸಾಮಾನ್ಯವಾಗಿ ದೊಡ್ಡ ಕ್ರೀಡಾ ಚಟುವಟಿಕೆ ನಡೆದಾಗ ಕ್ರೀಡಾಂಗಣದ ಒಳಗೆ ಕ್ರೀಡಾಪಟುಗಳು ಹಾಗೂ ಪ್ರೇಕ್ಷಕರ ಸುರಕ್ಷತೆ ಕಾಪಾಡುವ ಹೊಣೆ ಹೊತ್ತ ಪೊಲೀಸರು ಆಟ ನಡೆಯುವ ಕಡೆಗೆ ಬೆನ್ನುಮಾಡಿಕೊಂಡು ನಿಂತು ಅಹಿತಕರ ಘಟನೆಗಳಿಗೆ ಕಾರಣವಾಗದಂತೆ ಅನುಮಾನಾಸ್ಪದ ಚಲನವಲನಗಳ ಮೇಲೆ ಗಮನ ಕೇಂದ್ರೀಕರಿಸಬೇಕು. ಆದರೆ ಭಾರತದಲ್ಲಿ ಯಾವುದೇ ಕ್ರೀಡಾಂಗಣಗಳಲ್ಲಿ ಚೆಂಡು-ದಾಂಡಿನ ಆಟವು ನಡೆದರೆ ಪೊಲೀಸರು ಆಟವನ್ನು ನೋಡುವಲ್ಲಿ ಆಸಕ್ತರಾಗಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT