ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಮೇಲೆ ಪ್ರಭಾವ ಬೀರುವ ರಾಜಕಾರಣಿಗಳು

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆಡಳಿತಾರೂಢ ರಾಜಕೀಯ ಪಕ್ಷಗಳು ತಮ್ಮ ಅಧಿಕಾರ ಚಲಾಯಿಸಲು ಪೊಲೀಸ್ ಇಲಾಖೆಯನ್ನು ಒಂದು ಸಾಧನವನ್ನಾಗಿ ಬಳಸಿಕೊಳ್ಳುತ್ತವೆ ಎಂದು ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೆ ಅಭಿಪ್ರಾಯಪಟ್ಟಿದ್ದಾರೆ.

`ಸಿಪಿಎಂ, ಡಿಎಂಕೆ, ಕಾಂಗ್ರೆಸ್, ಎಐಡಿಎಂಕೆ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಅಧಿಕಾರವನ್ನು ಚಲಾಯಿಸಲು ಪೊಲೀಸ್ ಇಲಾಖೆಯನ್ನು ಸಾಧನವನ್ನಾಗಿ ಬಳಸುತ್ತವೆ. ಎಲ್ಲಾ ಪಕ್ಷಗಳು ಇದನ್ನೇ ಮಾಡಿವೆ~ ಎಂದು ನಕ್ಸಲ್ ಉಗ್ರವಾದ ಕುರಿತ ದುಂಡು ಮೇಜಿನ ಶೃಂಗಸಭೆಯಲ್ಲಿ ಪಿಳ್ಳೆ ಹೇಳಿದ್ದಾರೆ.

ದೇಶದ ಐಪಿಎಸ್ ಅಧಿಕಾರಿಗಳು ವರ್ಗಾವಣೆ ಶಿಕ್ಷೆಯ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದೂ ನಿವೃತ್ತ ಐಎಸ್‌ಎಸ್ ಅಧಿಕಾರಿ ಜಿ.ಕೆ.ಪಿಳ್ಳೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT