ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಗೂ ವೇತನ ಹೆಚ್ಚಲಿ

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರಿ ನೌಕರಿಗೆ ಶೇ 7 ತುಟ್ಟಿಭತ್ಯೆ ನೀಡಿರುವುದು ಮರಳುಗಾಡಿನಲ್ಲಿ ಸಿಕ್ಕ ಓಯಸಿಸ್‌ನಂತಾಗಿದೆ. ಈಗಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆಯು ತೀರಾ ಏರಿಕೆಯಾಗುತ್ತಿದ್ದು, `ಸಿ~ ದರ್ಜೆ ನೌಕರರ ಕೈ ಗೆಟಕುವ ಸ್ಥಿತಿಯಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ.

ರಾಜ್ಯದಲ್ಲಿ ಪೊಲೀಸ್ ಇಲಾಖೆಗೆ ಕೇವಲ ಒಂದು ದಿನ ಸರ್ಕಾರ ರಜೆಯನ್ನು ಘೋಷಣೆ ಮಾಡಿದ್ದಲ್ಲಿ ಕಾನೂನು ವ್ಯವಸ್ಥೆ ನೋಡಿಕೊಳ್ಳುವವರಿಲ್ಲದಿದ್ದರೆ ಆ ಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ. ಅಂದರೆ ಅಷ್ಟರಮಟ್ಟಿಗೆ ಕಾನೂನು ವ್ಯವಸ್ಥೆಯನ್ನು ಕಾಯಬೇಕಾದ ಪರಿಸ್ಥಿತಿ ಇದೆ. ನಾನೊಬ್ಬ ಪೊಲೀಸ್ ಕಾನ್ಸ್‌ಟೇಬಲ್ ಆಗಿ  ಕರ್ತವ್ಯ ನಿರ್ವಹಿಸುತ್ತಿದ್ದೇನೆ.

ಈಗ ಕರ್ನಾಟಕದಲ್ಲಿ 6ನೇ ವೇತನ ಆಯೋಗದಿಂದ ವೇತನ ಪರಿಷ್ಕರಣೆ ನಡೆಯುತ್ತಿದ್ದು, ಪೊಲೀಸರಿಗೆ ಅವರ ಕೆಲಸಕ್ಕೆ ತಕ್ಕಂತೆ ಹೆಚ್ಚಿನ ವೇತನ ನೀಡುವ ಬಗ್ಗೆ ಪರಿಶೀಲಿಸಬೇಕು.
ಪೊಲೀಸರು ಹಗಲು ಮತ್ತು ರಾತ್ರಿ ಎನ್ನದೇ ದಿನದ 24 ಗಂಟೆ ನಿರ್ವಹಿಸಬೇಕಾಗಿರುತ್ತದೆ.

ರಾಷ್ಟ್ರೀಯ ಹಬ್ಬ, ಸ್ಥಳೀಯ ಹಬ್ಬಹರಿದಿನಗಳು, ಕೋಮುಗಲಭೆ, ಮುಂತಾದ ತುರ್ತು ಸಂದರ್ಭಗಳಲ್ಲಿ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈ ದುಡಿಮೆಗೆ ನೀಡುತ್ತಿರುವ ವೇತನ ಮಾತ್ರ ಹೇಳಿಕೊಳ್ಳಲೂ ನಾಚಿಕೆ ಆಗುತ್ತದೆ.

ನಾಲ್ಕನೇ ವೇತನ ಆಯೋಗದಲ್ಲಿ ಪ್ರಾಥಮಿಕ ಶಿಕ್ಷಕರ ಮೂಲ ವೇತನಕ್ಕೂ ಹಾಗೂ ಪೊಲೀಸರ ಮೂಲ ವೇತನಕ್ಕೂ ರೂ. 300 ಇದ್ದ ವ್ಯತ್ಯಾಸವು 5ನೇ ವೇತನ ಆಯೋಗವು ಸಾವಿರಾರು ರೂ.ಗಳಿಗೆ ತಂದಿರಿಸಿತು.

ಏಕೀ ತಾರತಮ್ಯ? ಇತರೆ ಇಲಾಖೆಯ ನೌಕರರ ವೇತನಕ್ಕೆ ಹೋಲಿಸಿಕೊಂಡಲ್ಲಿ ತೀರಾ ನಿಕೃಷ್ಠ ವೇತನವನ್ನು ಪೊಲೀಸ್ ಇಲಾಖೆಯ ಸಿಬ್ಬಂದಿಗೆ ನೀಡುತ್ತಿರುವುದು ದುರದೃಷ್ಟಕರ. ಅಲ್ಲದೇ ಯಾವುದೇ ಸಿಬ್ಬಂದಿ ಮತ್ತು ಅಧಿಕಾರಿ ವರ್ಗವು ವೇತನದ ಹೆಚ್ಚಳದ ವಿರುದ್ಧ ಹೋರಾಡುವುದು ಅಪರಾಧವೆಂಬ ಕಟ್ಟುಪಾಡುಗಳಿವೆ.

ನೆರೆಯ ರಾಜ್ಯವಾದ ಕೇರಳದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಯ ಮೂಲ ವೇತನ ರೂ. 14,328 ಮತ್ತು ಜೊತೆಗೆ ಹಲವಾರು ಭತ್ಯೆಗಳನ್ನು ನೀಡಲಾಗಿದೆ.

ಅದೇ ರೀತಿ ಮಹಾರಾಷ್ಟ್ರದ ಪೊಲೀಸ್ ಇಲಾಖೆಯಲ್ಲಿ ರೂ. 15,446, ಆಂಧ್ರಪ್ರದೇಶ ರೂ. 13,926, ತಮಿಳುನಾಡು ರೂ. 13,556 ಹಾಗೂ ಬಿಹಾರದಲ್ಲೂ ಸಹ ರೂ. 14,201 ರೂ.ಗಳನ್ನು ಮೂಲ ವೇತನ ನೀಡಲಾಗುತ್ತಿದೆ.
 
ರಾಜ್ಯ ಸರ್ಕಾರಿ ನೌಕರರು (ಪೊಲೀಸ್ ಇಲಾಖೆಯನ್ನು ಹೊರತುಪಡಿಸಿ) ತಮ್ಮದೇ ಆದ ಸಂಘಗಳನ್ನು ಹೊಂದಿ, ಪ್ರತಿಭಟನೆ ಮತ್ತು ಹೋರಾಟದ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಯಾವುದೇ ಸಂಘಗಳನ್ನು ಕಟ್ಟಿಕೊಳ್ಳಲು ಅವಕಾಶವಿರದ ಕಾರಣ ಪೊಲೀಸರ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದು ಅಸಾಧ್ಯವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT