ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಗೆ ಇನ್ನು ಕಾಯಂ ವರ್ಗಾವಣೆ ಇಲ್ಲ

Last Updated 18 ಫೆಬ್ರುವರಿ 2011, 10:15 IST
ಅಕ್ಷರ ಗಾತ್ರ

ಅಹಮದಾಬಾದ್ (ಪಿಟಿಐ): ‘ಪೊಲೀಸ್ ಪೇದೆ (ಕಾನ್ ಸ್ಟೇಬಲ್) ಹಾಗೂ ಮುಖ್ಯ ಪೇದೆ (ಹೆಡ್ ಕಾನ್‌ಸ್ಟೇಬಲ್)ಗಳನ್ನು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಕಾಯಂ ವರ್ಗಾವಣೆ ಮಾಡಬಾರದು’ ಎಂದು ಗುಜರಾತ್ ಹೈಕೋರ್ಟ್ ಆದೇಶಿಸಿದೆ.

ಮುಖ್ಯ ಪೇದೆ ಹರೂನ್ ಕಾಡಿವಾಲಾ ಅವರನ್ನು ತಮ್ಮ ಹುಟ್ಟೂರಾದ ಸೂರತ್‌ನಿಂದ ಸಬರಕಾಂತಾಕ್ಕೆ ವರ್ಗಾವಣೆ ಮಾಡಿದ್ದನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಎಸ್.ಜೆ.ಮುಖ್ಯೋಪಾಧ್ಯಾಯ ಹಾಗೂ ನ್ಯಾ. ಜೆ.ಬಿ.ಪರ್ಡಿವಾಲಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಮೇಲಿನ ಆದೇಶ ನೀಡಿದೆ.

ಪೊಲೀಸ್ ಪೇದೆ ಹಾಗೂ ಮುಖ್ಯಪೇದೆಗಳಿಗೆ ಒಂದು ಊರಿನಿಂದ ಮತ್ತೊಂದೆಡೆಗೆ ವರ್ಗಾವಣೆ ಮಾಡುವುದನ್ನೇ ಪೊಲೀಸ್ ಇಲಾಖೆಯಲ್ಲಿ ಬಹುದೊಡ್ಡ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಇದನ್ನು ತಡೆಯುವುದು ಅತ್ಯಗತ್ಯ ಎಂದು ಅರ್ಜಿದಾರರ ಪರ ವಕಾಲತ್ತು ವಹಿಸಿದ ಮುಕುಲ್ ಸಿನ್ಹಾ ವಾದಿಸಿದರು.

ಬಾಂಬೇ ಪೊಲೀಸ್ ಕಾಯ್ದೆ 28(1)ಕ್ಕೆ ತಿದ್ದುಪಡಿ ತಂದಿರುವ ಗುಜರಾತ್ ಹೈಕೋರ್ಟ್ ‘ತುರ್ತು ಅಗತ್ಯವಿದ್ದಲ್ಲಿ ಹಾಗೂ ಆಡಳಿತ ಸುಧಾರಣೆಗೆ ಬಲವಾದ ಕಾರಣವಿದ್ದಲ್ಲಿ ಮಾತ್ರ ಪೊಲೀಸ್ ಪೇದೆಗಳನ್ನು ವರ್ಗಾವಣೆ ಮಾಡಬಹದು. ಆದರೆ ಕಳುಹಿಸಿದ ಕಾರ್ಯ ಮುಗಿದೊಡನೆ ಅವರನ್ನು ತಮ್ಮ ಸ್ವಸ್ಥಳಕ್ಕೆ ಕಳುಹಿಸಿಕೊಡಬೇಕು’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT