ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರೊಡನೆ ಸವಾರನ ವಾಗ್ವಾದ

Last Updated 1 ಜನವರಿ 2014, 10:53 IST
ಅಕ್ಷರ ಗಾತ್ರ

ಕೋಲಾರ: ಸಂಚಾರ ನಿಯಮ ಉಲ್ಲಂಘಿ­ಸಿಯೂ ವಾಹನ ಸವಾರರೊಬ್ಬರು ಸಂಚಾರ ನಿಯಂತ್ರಣ ಠಾಣೆ ಪೊಲೀಸ­ರೊಡನೆ ವಾಗ್ವಾದಕ್ಕೆ ಮುಂದಾದ ಘಟನೆ ನಗರದ ಎಂ.ಜಿ.ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆಯಿತು. ರಾತ್ರಿ 7 ಗಂಟೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ರಸ್ತೆಯ ತಿರುವಿನಲ್ಲಿ ಸಂಚಾರ ನಿಯಂತ್ರಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಘಟನೆ ನಡೆದಿದೆ.

ಏಕಮುಖ ಸಂಚಾರ ನಿಯಮ ಉಲ್ಲಂಘಿಸಿ ಬಂದವರನ್ನು ಅಡ್ಡಗಟ್ಟಿ ಅವ­ರಿಂದ ದಂಡ ಶುಲ್ಕ ವಸೂಲು ಮಾಡುವ ಸಂದರ್ಭದಲ್ಲಿ ವಾಹನ ಸವಾರ­ರೊಬ್ಬರು ಆಕ್ಷೇಪಿಸಿದರು. ಯಾವತ್ತೋ ಒಂದು ದಿನ ಕಾರ್ಯಾ­ಚರಣೆ ನಡೆಸಿ ದಂಡ ಶುಲ್ಕ ವಿಧಿಸುವುದು ಸರಿಯಲ್ಲ. ದಿನವೂ ಕಾರ್ಯಾಚರಣೆ ನಡೆಸಿದರೆ ನಿಯಮ ಉಲ್ಲಂಘನೆ ಮಾಡುವವರಲ್ಲಿ ಅರಿವು ಮೂಡುತ್ತದೆ ಎಂದು ಪೊಲೀಸ­ರನ್ನು ದಬಾಯಿಸಿದರು.

ದಿನವೂ ಬಂದು ರಸ್ತೆಯಲ್ಲಿ ನಿಲ್ಲುವು­ದಷ್ಟೇ ತಮ್ಮ ಕೆಲಸವಲ್ಲ. ಇನ್ನಿತರ ಜವಾ­ಬ್ದಾರಿ­ಗಳೂ ಇರುತ್ತವೆ ಎಂದು ಪೊಲೀ­ಸರು ಸಮಜಾಯಿಷಿ ನೀಡಿದರೂ, ದಂಡ ಶುಲ್ಕ­ವನ್ನು ಪಾವತಿಸಲು ಸವಾರ ನಿರಾ­ಕ­ರಿ­ಸಿದರು. ಹೀಗಾಗಿ ಕೋಪ­­ಗೊಂಡ ಎಸ್‌ಐ ವಾಹ­ನ­ವನ್ನು ಜಪ್ತಿ ಮಾಡ­ಲಾ­ಗು­ವುದು. ನ್ಯಾಯಾಲಯ­ದಲ್ಲೇ ಶುಲ್ಕ ಪಾವ­ತಿಸಿ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT