ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಪ್‌ ಫ್ರಾನ್ಸಿಸ್‌ ‘ಟೈಮ್‌ ವರ್ಷದ ವ್ಯಕ್ತಿ’

Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್‌ ಅವರು ಟೈಮ್‌ ಪತ್ರಿಕೆಯ  ‘ವರ್ಷದ ವ್ಯಕ್ತಿ–2013’ಗೌರವಕ್ಕೆ ಪಾತ್ರರಾಗಿದ್ದಾರೆ.

ಪೋಪ್‌ ಆಗಿ ಅಧಿಕಾರ ವಹಿಸಿಕೊಂಡ ಕೇವಲ 9 ತಿಂಗಳ ಒಳಗಾಗಿಯೇ ಅನೇಕ ಕ್ರಾಂತಿಕಾರಕ ಧಾರ್ಮಿಕ ಬದಲಾವಣೆ ತಂದ ಕಾರಣಕ್ಕಾಗಿ  ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಟೈಮ್‌ ಪತ್ರಿಕೆ ಹೇಳಿದೆ.

ಪೋಪ್‌ ಜೊತೆ ಎಡ್ವರ್ಡ್‌ ಸ್ನೊಡೆನ್‌ ಹೆಸರು ಕೊನೆಯ ಗಳಿಗೆಯವರೆಗೂ ಸ್ಪರ್ಧೆಯ­ಲ್ಲಿತ್ತು. ಪ್ರಶಸ್ತಿಗಾಗಿ ಸಿದ್ಧಪಡಿಸಿದ ಅಂತಿಮ ಹತ್ತು ಜನರ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಹೆಸರು ಕೂಡಾ ಇತ್ತು. ಬಿಜೆಪಿ ಪ್ರಧಾನಿ ಹುದ್ದೆ ಅಭ್ಯರ್ಥಿ ನರೇಂದ್ರ ಮೋದಿ 42ನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT