ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಲಿಯೊ ನಿರ್ಮೂಲನೆಗೆ ಸಹಕರಿಸಿ

Last Updated 20 ಫೆಬ್ರುವರಿ 2012, 6:25 IST
ಅಕ್ಷರ ಗಾತ್ರ

ಸುರಪುರ: ಪೋಲಿಯೊ ಮಾರಕ ರೋಗ. ಇದು ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆಯನ್ನು ಉಂಟು ಮಾಡುತ್ತದೆ. ಈ ಭೀಕರ ರೋಗವನ್ನು ನಿರ್ಮೂಲನೆ ಮಾಡಲು ಸರ್ಕಾರ ಸಾಕಷ್ಟು ಹಣ ವ್ಯಯಿಸುತ್ತಿದೆ.

ಪಾಲಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ಈ ಹಿಂದೆ ಎಷ್ಟೆ ಬಾರಿ ಪೋಲಿಯೊ ಹನಿ ಹಾಕಿಸಿದರೂ ಮತ್ತೆ ಹಾಕಿಸುವ ಮೂಲಕ ಈ ಅಭಿಯಾನಕ್ಕೆ ಸಹಕಾರ ನೀಡಿ. ಇದರಿಂದ ಈ ರೋಗ ಸಂಪೂರ್ಣ ಮುಲೋತ್ಪಾಟನೆಯಾಗುತ್ತದೆ ಎಂದು ಸಚಿವ ರಾಜೂಗೌಡ ಅವರ ತಂದೆ ಶಂಭನಗೌಡ ಮನವಿ ಮಾಡಿದರು.

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಮಗುವೊಂದಕ್ಕೆ ಲಸಿಕೆ ಹಾಕುವ ಮೂಲಕ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಆರ್. ವಿ. ನಾಯಕ್ ಮಾತನಾಡಿ, ಆರೋಗ್ಯ ಇಲಾಖೆ ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಶಿಕ್ಷಣ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಉತ್ತಮ ಸಹಕಾರ ನೀಡುತ್ತಿವೆ. ಪಾಲಕರು, ಸಂಘ, ಸಂಸ್ಥೆಗಳು ಸಹಕರಿಸುತ್ತಿದ್ದಾರೆ  ಎಂದರು.

ಭಾನುವಾರ ತಾಲ್ಲೂಕಿನ ಎಲ್ಲಾ ಕೇಂದ್ರಗಳಲ್ಲಿ ಪೋಲಿಯೊ ಹನಿ ಹಾಕುವ ಕಾರ್ಯಕ್ರಮ ನಡೆದಿದೆ. ಸೋಮವಾರ, ಮಂಗಳವಾರ ಮತ್ತು ಬುಧವಾರ ಕಾರ್ಯಕರ್ತರು ಮನೆ ಮನೆಗೆ ತೆರಳಿ ಲಸಿಕೆ ಹಾಕಲಿದ್ದಾರೆ. ಈ ಮೂರು ದಿನಗಳವರೆಗೆ ಜನದಟ್ಟಣೆಯ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ 11 ಕೇಂದ್ರಗಳು ಕಾರ್ಯಾರಂಭ ಮಾಡುತ್ತವೆ ಎಂದು ವಿವರಿಸಿದರು.


ತಹಸೀಲ್ದಾರ್ ಎಸ್. ಡಿ. ಗಣಾಚಾರಿ, ಆಸ್ಪತ್ರೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ವಿ. ಎಲ್. ಚೌಧರಿ, ವೈದ್ಯಾಧಿಕಾರಿಗಳಾದ ಡಾ. ಹರ್ಷವರ್ಧನ್ ರಫುಗಾರ್, ಡಾ. ಬಿಲ್ಹಾರ್ ವೇದಿಕೆಯಲ್ಲಿದ್ದರು.
ಐ.ಸಿ.ಟಿ.ಸಿ. ಆಪ್ತ ಸಮಾಲೋಚಕ ಬಸವರಾಜ ನಿರೂಪಿಸಿದರು. ಜನಾರ್ಧನ್ ವಂದಿಸಿದರು.

ಹಸನಾಪುರ:
ಪುರಸಭೆ ವ್ಯಾಪ್ತಿಯ ಹಸನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪುರಸಭೆ ಅಧ್ಯಕ್ಷ ಚಂದ್ರಶೇಖರ ಹಸನಾಪುರ ಮಗುವೊಂದಕ್ಕೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ಯಾಮಲಾ ಕಮತಗಿ, ಮುಖಂಡ ಮಲ್ಲಯ್ಯ ಕಮತಗಿ, ಪುರಸಭೆ ಮುಖ್ಯಾಧಿಕಾರಿ ಶಿವುಕುಮಾರಸ್ವಾಮಿ, ವೈದ್ಯಾಧಿಕಾರಿಗಳಾದ ಡಾ. ಶಫಿ ಉಜ್ಜಮಾ, ಡಾ. ಸ್ಮಿತಾ ಓಂ ಪ್ರಕಾಶ ಅಂಬೂರೆ, ವನಜಾ ಪಾಟೀಲ, ಸಿಬ್ಬಂದಿ ಮಹ್ಮದ್ ರಫೀಕ್, ರಾಜೇಶ ಭಟ್, ಶಶಿಕಲಾ, ಜಲಾಲುದ್ದೀನ್, ವಾಸುಮತಿ, ದುರ್ಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT