ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರಿಗಾಗಿ ಕಾರ್ಯಾಗಾರ

Last Updated 3 ಜುಲೈ 2013, 19:59 IST
ಅಕ್ಷರ ಗಾತ್ರ

`ನಿಮ್ಮ ಮಗುವನ್ನು ಅರಿತುಕೊಳ್ಳಿ ಮತ್ತು ಹದಿಹರೆಯದ ಮಕ್ಕಳನ್ನು ತಿಳಿದುಕೊಳ್ಳಿ' ಎಂಬ ಕಾರ್ಯಾಗಾರವು ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಕೇಂದ್ರದಲ್ಲಿ ಇದೇ ಭಾನುವಾರ ನಡೆಯಲಿದೆ.

ತಂದೆ ತಾಯಂದಿರುವ ಮತ್ತು ಪೋಷಕರು ತಮ್ಮ ಮಗುವಿನೊಂದಿಗೆ ಆಪ್ತವಾದ ಸಂಬಂಧ ಬೆಳೆಸುವ ನಿಟ್ಟಿನಲ್ಲಿ ಏರ್ಪಡಿಸಲಾಗಿರುವ ಈ ಕಾರ್ಯಾಗಾರದಲ್ಲಿ ಮಕ್ಕಳು ಬಾಲ್ಯದಲ್ಲಿ ಮತ್ತು ಹದಿಹರೆಯದಲ್ಲಿ ಮಾನಸಿಕವಾಗಿ ಹೇಗೆ ಬದಲಾಗುತ್ತಾರೆ, ಅವರಲ್ಲಿನ ಬದಲಾವಣೆಗಳ ಕುರಿತ ಚರ್ಚೆ, ಸಂವಾದ ಹಾಗೂ ಯಾವುದೇ ಸಂದರ್ಭಗಳನ್ನು ಎದುರಿಸಲು ಅವರನ್ನು ಸಜ್ಜುಗೊಳಿಸುವ ಬಗೆ ಹೇಗೆ ಎಂಬ ಅಂಶಗಳನ್ನು ತಿಳಿದುಕೊಳ್ಳಲು ಅವಕಾಶವಿರುತ್ತದೆ.

ಭಾನುವಾರ ಮಧ್ಯಾಹ್ನ ಆರಂಭವಾಗುವ ಈ ಕಾರ್ಯಾಗಾರದಲ್ಲಿ ನವಜಾತ ಶಿಶುಗಳಿಂದ ಹದಿಹರೆಯದವರೆಗಿನ ಮಕ್ಕಳ ತಂದೆ ತಾಯಂದಿರುವ ಪಾಲ್ಗೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 99866 73892, www.artofliving.org/in-en/novice-know-your-child ,   www.artofliving.org/know-your-teen
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT