ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಸ್ಟಲ್‌ ಅಥ್ಲೆಟಿಕ್ಸ್‌: ಪವಿತ್ರಾಗೆ ಚಿನ್ನ

Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಪವಿತ್ರಾ ಇಲ್ಲಿ ಬುಧವಾರ ಆರಂಭವಾದ 27ನೇ ಅಖಿಲ ಭಾರತ ಪೋಸ್ಟಲ್‌ ಅಥ್ಲೆಟಿಕ್‌ ಕ್ರೀಡಾಕೂಟದ ಲಾಂಗ್‌ ಜಂಪ್‌ ಸ್ಪರ್ಧೆಯಲ್ಲಿ ಬಂಗಾರದ ಸಾಮರ್ಥ್ಯ ತೋರಿದರು.

ಪವಿತ್ರಾ 4.80ಮೀ. ಜಿಗಿದು ಈ ಸಾಧನೆ ಮಾಡಿದರು. ರಾಜಸ್ತಾನದ ಸ್ನೇಹಾ ಬಿನ್‌ (4.29ಮೀ.) ಬೆಳ್ಳಿ ತಮ್ಮ ದಾಗಿಸಿಕೊಂಡರು.  ಪವಿತ್ರಾ 400ಮೀ. ಹರ್ಡಲ್ಸ್‌ನಲ್ಲಿ  ಬೆಳ್ಳಿ ಗೆದ್ದುಕೊಂಡರು.

ಆತಿಥೇಯ ರಾಜ್ಯದ ಇಫ್ತಿಕಾರ್‌ ಅಹ್ಮದ್‌ 1500ಮೀ. ಓಟದ ಸ್ಪರ್ಧೆಯಲ್ಲಿ (ಕಾಲ: 4:20.2ಸೆ.) ಕಂಚು ಗೆದ್ದರು.

200ಮೀ. ಓಟದ ಸ್ಪರ್ಧೆಯಲ್ಲಿ ಮಿಂಚಿದ ಪವಿತ್ರಾ ನಿಗದಿತ ಗುರಿಯನ್ನು 27.9ಸೆಕೆಂಡ್‌ಗಳಲ್ಲಿ ಮುಟ್ಟಿ ಮೊದಲ ಸ್ಥಾನ ಪಡೆದರು.

ಆಂಧ್ರಪ್ರದೇಶದ ಪಲ್ಲವಿ (ಕಾಲ: 28.6) ಎರಡನೇ ಸ್ಥಾನ ಗಳಿಸಿದರು. ಶಾಟ್‌ಪಟ್‌ನಲ್ಲಿ ರಾಜ್ಯದ ಎಚ್‌.ಎಂ. ಸುನಂದಾ ಕಂಚು ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT