ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಕೇಜಿಂಗ್ ತಂತ್ರಜ್ಞಾನ ಸಮ್ಮೇಳನ

Last Updated 16 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ಯಾಕೇಜಿಂಗ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸ್ವಾಯತ್ತ ಸಂಸ್ಥೆ ಭಾರತೀಯ ಪ್ಯಾಕೇಜಿಂಗ್ ಸಂಸ್ಥೆಯು (ಐಐಪಿ), ಹೈದರಾಬಾದ್‌ನಲ್ಲಿ 14ನೇಯ `ಇಂಡ್‌ಪ್ಯಾಕ್-2011~ ಸಮ್ಮೇಳನ  ಆಯೋಜಿಸಿದೆ.

ಮೂರು ದಿನಗಳ ಈ ರಾಷ್ಟ್ರೀಯ ಸಮ್ಮೇಳನವು ಈ ವರ್ಷದ ನವೆಂಬರ್ 24ರಿಂದ 26ರವರೆಗೆ ಹೈದರಾಬಾದ್‌ನ ಅಂತರರಾಷ್ಟ್ರೀಯ ಸಮ್ಮೇಳನ ಸಭಾಂಗಣದಲ್ಲಿ  ನಡೆಯಲಿದೆ. `ಭವಿಷ್ಯದ ಪ್ಯಾಕೇಜಿಂಗ್~ ಈ ಸಮಾವೇಶದ ಮುಖ್ಯ ಧ್ಯೇಯವಾಗಿರಲಿದೆ.

ಪ್ರದರ್ಶನದ ಪೂರ್ವಭಾವಿ ಸಮಾರಂಭವು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. `ಐಐಪಿ~ ನಿರ್ದೇಶಕ ಪ್ರೊ. ಎನ್. ಸಿ. ಸಹಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ  `ಐಐಪಿ~ ಉಪಾಧ್ಯಕ್ಷ ದಿವಾಕರ ಶೆಟ್ಟಿ, ಹೈದರಾಬಾದ್ `ಐಐಪಿ~ ಅಧ್ಯಕ್ಷ ಎ. ವಿ. ಪಿ. ಎಸ್. ಚಕ್ರವರ್ತಿ, ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷ ಪಿ. ದಾಸಗುಪ್ತಾ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT