ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಟೆ ಹುಡ್ಗೀರ್ ಮತ್ತೆ ಬಂದ್ರು!

Last Updated 24 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ‘ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು’ ಹೆಸರಿನ ಜನಪ್ರಿಯ ರಿಯಾಲಿಟಿ ಶೋ ತನ್ನ ಎರಡನೇ ಇನಿಂಗ್ಸ್ ಆರಂಭಿಸುತ್ತಿದೆ. ಇದು ಹೊಸ ಸರಣಿ, ಸ್ಪರ್ಧಿಗಳೂ ಹೊಸಬರು. ಈ ಮೊದಲು ಶಿವಮೊಗ್ಗ ಜಿಲ್ಲೆಯ ‘ಪುರದಾಳು’ ಗ್ರಾಮದಲ್ಲಿ ಶೋ ನಡೆದಿತ್ತು. ಇದೀಗ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕರಕಲ ಮಟ್ಟಿ ಗ್ರಾಮದಲ್ಲಿ ನಡೆಯಲಿದೆ.

ಎಂದಿನಂತೆ ಅಕುಲ್ ಬಾಲಾಜಿ ನಿರೂಪಣೆಯ ಹೊಣೆ ಹೊತ್ತಿದ್ದಾರೆ. ಪೇಟೆ ಬದುಕಿನಲ್ಲಿ ಮುಳುಗಿರುವ ಹನ್ನೆರಡು ಮಂದಿ ಹುಡುಗಿಯರು ಈ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟು ಅರವತ್ತೈದು ದಿನ ನಡೆಯುವ ಈ ರಿಯಾಲಿಟಿ ಶೋನಲ್ಲಿ ತಮ್ಮ ಪ್ರತಿಭೆ-ತಾಳ್ಮೆಯನ್ನು ಒರೆಗೆ ಹಚ್ಚಲಿರುವ ಹುಡುಗಿಯರು ಉತ್ತರ ಕರ್ನಾಟಕದ ಮಣ್ಣಿನ ಕಂಪನ್ನು, ಆ ಸೊಗಡನ್ನು ನಾಡಿನ ತುಂಬಾ ಹರಡಲಿದ್ದಾರೆ ಎಂಬುದು ವಾಹಿನಿಯ ವಿಶ್ವಾಸ. ಫೆಬ್ರುವರಿ 28ರಿಂದ ಪ್ರತೀ ರಾತ್ರಿ 8 ಗಂಟೆಗೆ ಶೋ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT