ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ, ಸ್ಮಾರಕಗಳ ರಕ್ಷಣೆ ಅಗತ್ಯ: ಸಿದ್ರಾಮ

Last Updated 7 ಅಕ್ಟೋಬರ್ 2011, 9:55 IST
ಅಕ್ಷರ ಗಾತ್ರ

ಬಾಗಲಕೋಟೆ: ಭಾರತ ಅತ್ಯಂತ ಸಂಪದ್ಭರಿತ ದೇಶ. ಅದರಲ್ಲೂ ಕನ್ನಡ ನಾಡು ವನ್ಯಸಂಪತ್ತಿಗೆ ಹೆಸರಾ ದುದು. ಆದರೆ ಈಗ ಕರ್ನಾಕಟ ಸೇರಿದಂತೆ ಮಾನವ ಪ್ರಕತಿ ಸಂಪತ್ತನ್ನು ಲೂಟಿ ಮಾಡುತ್ತಿದ್ದಾನೆ. ಪ್ರಕತಿ  ಸಂಪತ್ತು ಹಾಗೂ ಪಾರಂಪರಿಕ ಸ್ಮಾರಕಗಳನ್ನು ರಕ್ಷಿಸಿ ಅವುಗಳನ್ನು ಉಳಿಸುವ ಹೊಣೆ ಯುವಕರ ಮೇಲಿದೆ. ಹಾಗಾಗಿ ಕಾಲೇ ಜಿನ ಯುವಕರು ಪರಂಪರೆಯ ರಕ್ಷಣೆ ಯತ್ತ ಗಮನ ಹರಿಸಬೇಕು ಎಂದು ವಲಯ ಅರಣ್ಯಾಧಿಕಾರಿ ಎನ್.ಸಿದ್ರಾಮ ಹೇಳಿದರು.

ನಗರದ ಬಸವೇಶ್ವರ ಕಲಾ ಮಹಾ ವಿದ್ಯಾಲಯದ ಕರ್ನಾಟಕ ಸರ್ಕಾರದ ಪರಂಪರೆ ಕೂಟದ ಅಡಿಯಲ್ಲಿ ರಾಷ್ಟ್ರೀಯ ಹಸಿರು ಪಡೆಯ ಚಟು ವಟಿಕೆಗಳನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು  ಮಾತನಾಡಿದರು.

ಸಮಾರಂಭದ ಅಧ್ಯ ಕ್ಷತೆ ವಹಿಸಿದ್ದ ಮಹಾ ವಿದ್ಯಾಲ ಯದ ಪ್ರಾಂಶುಪಾಲ ವಿ.ಕೆ.ಮೊ ರಬದ ಮಾತನಾಡಿ, ಕಾಲೇಜು ಯುವಕರು ನಮ್ಮ ಪರಂಪರೆ ಮತ್ತು ಇತಿಹಾಸದ ಕಡೆ ಗಮನ ಹರಿಸಬೇಕು. ಹಸಿರು ಬೆಳೆಸಲು ಪರಂಪರೆ ಉಳಿ ಸಲು ನಾವೆಲ್ಲರೂ ಆ ದಿಶೆ ಯಲ್ಲಿ ಕಾರ‌್ಯ ಪ್ರವತ್ತರಾ ಗಬೇಕಾಗಿದೆ ಎಂದು ವಿದ್ಯಾರ್ಥಿ ಗಳಿಗೆ ಸಲಹೆ ನೀಡಿದರು.

ವಿದ್ಯಾ ಹಣಗಿ, ವಿನಯ ಸಂಕನೂರ, ಪ್ರೊ. ಆರ್.ಆರ್.ಅರಿಷಿಣಗೋಡಿ, ಪ್ರೊ.ಎಸ್.ಎನ್.ರಾಂಪೂರ, ರಂಗಣ್ಣ ಬಡಿಗೇರ, ಮಾಳಾ ಹೂಗಾರ ಮತ್ತಿ ತರರು ಉಪಸ್ಥಿತರಿದ್ದರು.

ರಿಯಾಯಿತಿ ಬಸ್ ಪಾಸ್
ಗುಳೇದಗುಡ್ಡ:
ನಗರದ ಕೆ.ಎಸ್.ಆರ್.ಟಿ.ಸಿ. ಸಾರಿಗೆ ಸಂಸ್ಥೆಯಿಂದ ಗುಳೇದ ಗುಡ್ಡ-ಬಾಗಲಕೋಟೆ ನಗರಗಳ ನಡುವೆ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ 35 ರೂಪಾಯಿ ದಿನದ ಬಸ್ ಪಾಸ್‌ಗಳನ್ನು ವಿತರಿಸಲಾಗುತ್ತಿದೆ. 

 ದೈನಿಕ ರಿಯಾಯಿತಿ ಪಾಸ್‌ಗಳಲ್ಲಿ   ಬಾಗಲಕೋಟೆ, ನವನಗರ, ವಿದ್ಯಾಗಿರಿ, ನಗರವ್ಯಾಪ್ತಿಯಲ್ಲಿ ಸಂಚರಿಸುವ ಬಸ್‌ಗಳಲ್ಲಿಯೂ ಸಹ ಉಚಿತವಾಗಿ  ಪ್ರಯಾಣಿಸಬಹುದು.

ಬಾಗಲಕೋಟೆಯಿಂದ ಬೆಳಿಗ್ಗೆ 8.30ಕ್ಕೆ ಬಿಡುವ ಬಸ್ ಗುಳೇದಗುಡ್ಡ ರೈಲು ನಿಲ್ದಾಣದ ಮೂಲಕ ಗುಳೇದ ಗುಡ್ಡಕ್ಕೆ ಬರುತ್ತದೆ ಎಂದು ನಗರ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ರಾ ಮಯ್ಯ ಪುರಾಣಿಕಮಠ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT