ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿಗಾಗಿ ಸ್ಪರ್ಧೆ: ಶ್ರೀರಾಮರೆಡ್ಡಿ

Last Updated 23 ಏಪ್ರಿಲ್ 2013, 8:29 IST
ಅಕ್ಷರ ಗಾತ್ರ

ಗುಡಿಬಂಡೆ: ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರವು ಸ್ವಾತಂತ್ರ್ಯ ನಂತರ ಸಿಪಿಎಂ ಶಾಸಕರನ್ನು ಹೊರತುಪಡಿಸಿ ಇತರರ ಅವಧಿಯಲ್ಲಿ ಎಷ್ಟು ? ಪ್ರಗತಿಯಾಗಿದೆ ಎಂದು ಗಮನಿಸಿದಾಗ ಯಾರು ಗೆಲ್ಲಬೇಕು ಅಧಿಕಾರಕ್ಕೆ ಬರಬೇಕು ಎಂಬುದು ಗೊತ್ತಾಗುತ್ತದೆ ಎಂದು ಸಿಪಿಎಂ ಅಭ್ಯರ್ಥಿ ಜಿ.ವಿ.ಶ್ರೀರಾಮರೆಡ್ಡಿ ತಿಳಿಸಿದರು.
ಪಟ್ಟಣದಲ್ಲಿ ಸೋಮವಾರ ಅವರು ಪಾದಯಾತ್ರೆ ನಡೆಸುವುದರ ಮೂಲಕ ಪ್ರಮುಖ ವಾರ್ಡ್‌ಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದರು.

ನಂತರ ವಾರ್ಡ್‌ಗಳ ಮತದಾರೊಂದಿಗೆ ಸಂವಾದ ನಡೆಸಿದರು. ಪಟ್ಟಣದಲ್ಲಿ ಇರುವ ಸಮಸ್ಯೆಗಳು ಇತರೆ ಪಕ್ಷಗಳ ಕಳಪೆ ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ದೂರಿದರು.

ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಡಾ.ಪರಮಶಿವಯ್ಯ ವರದಿ ಪ್ರಕಾರ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವುದು ತ್ವರಿತ ಅಗತ್ಯವಾಗಿದೆ. ಬಡವರಿಗೆ ಪಡಿತರ ಚೀಟಿ ದೊರೆತಿಲ್ಲ. ದೇಶದಲ್ಲಿ ಸಿಪಿಎಂ ಪಕ್ಷ ಅಧಿಕಾರಕ್ಕೆ ಬಂದರೆ ಎಪಿಎಲ್, ಬಿಪಿಎಲ್ ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನವಾಗಿ  ವಿತರಿಸಲಾಗುವುದು ಎಂದರು.

ಸಿಪಿಎಂ ಮುಖಂಡರಾದ ಜಯರಾಮರೆಡ್ಡಿ, ಎಚ್.ಪಿ.ಲಕ್ಷ್ಮೀನಾರಾಯಣ, ಎಲ್.ಎನ್.ಈಶ್ವರಪ್ಪ, ದಪ್ಪರ್ತಿ ದೇವರಾಜ್, ವಾಹಿನಿ ಸುರೇಶ್, ರಾಮಾಂಜನೇಯ, ಎಜಾಜ್ ಪಾಷಾ, ರಹಮತ್ ಉಲ್ಲಾ, ಬಷೀರ್ ಅಹಮದ್, ಗುಲ್‌ಷೀರ್, ಜಬೀವುಲ್ಲಾ, ಬಾಬು, ಅಕ್ರಮ್, ರಫೀಕ್ ಸೇರಿದಂತೆ ಹಲವು ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT