ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಾರಕ್ಕಾಗಿ ಮೋದಿ 3 ಲಕ್ಷ ಕಿ.ಮೀ ಸಂಚಾರ

Last Updated 11 ಮೇ 2014, 20:04 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಕ್ಕಾಗಿ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ದೇಶದ ಉದ್ದಗಲಕ್ಕೆ 3 ಲಕ್ಷ ಕಿ.ಮೀ.ಗೂ ಹೆಚ್ಚು ಸಂಚಾರ ಮಾಡಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ವಿಡಿಯೊ ತಂತ್ರಜ್ಞಾನದ ನೆರವಿನಿಂದ ನಡೆದ ನಾಲ್ಕು ಸಾವಿರದಷ್ಟು ‘ಚಾಯ್‌ ಪೆ ಚರ್ಚಾ’ ಕಾರ್ಯಕ್ರಮವೂ ಸೇರಿದಂತೆ 5,827 ರ್‍ಯಾಲಿಗಳನ್ನು ಮೋದಿ ಅವರು ನಡೆಸಿದ್ದಾರೆ ಎಂದು ಹೇಳಿಕೊಂಡಿರುವ ಬಿಜೆಪಿ, 51 ಕೋಟಿ ಜನರನ್ನು ಮೋದಿ ಅವರು ನೇರವಾಗಿ ತಲುಪುತ್ತಿದ್ದಾರೆ. ಇದು ದೇಶದ ಚುನಾವಣಾ ಇತಿಹಾಸದಲ್ಲೇ ಗರಿಷ್ಠ ಮಟ್ಟದ್ದು ಎಂದಿದೆ.

ಮೋದಿ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿ­­ಸಿದ ಬಳಿಕ ಸೆಪ್ಟೆಂಬರ್‌ 15ರಿಂದೀಚೆಗೆ ಅವರು 25 ರಾಜ್ಯ­­ಗ­ಳಲ್ಲಿ ಪ್ರತ್ಯಕ್ಷವಾಗಿ 437 ಪ್ರಚಾರ ಸಭೆಯಲ್ಲಿ ಭಾಗ­ವಹಿ­ಸಿ­ದ್ದಾರೆ. 3ಡಿ ತಂತ್ರಜ್ಞಾನ ಮೂಲಕ 1,350 ರ್‍ಯಾಲಿಗಳನ್ನು ನಡೆಸಿದ್ದಾರೆ. ಇದರಲ್ಲಿ ಚುನಾವಣೆ ಘೋಷ­ಣೆಗೂ ಪೂರ್ವದಲ್ಲಿ 21 ರಾಜ್ಯಗಳಲ್ಲಿ ನಡೆದ 38 ರ್‍ಯಾಲಿ­ಗಳು ಸೇರಿವೆ ಎಂದು ಬಿಜೆಪಿ ತಿಳಿಸಿದೆ.

ಚುನಾವಣೆ ಘೋಷಣೆ­ಯಾದ ನಂತರ 25 ರಾಜ್ಯಗಳಲ್ಲಿ 196 ಸಭೆಗಳನ್ನು ನಡೆ­ಸಿ­ರುವ ಮೋದಿ, ದೇಶದ ಉದ್ದಗಲಕ್ಕೆ ಸುಮಾರು 2 ಲಕ್ಷ ಕಿ.ಮೀ. ಸಂಚಾರ ಮಾಡಿದ್ದಾರೆ. ಉತ್ತರ ಪ್ರದೇ­ಶ­ದಲ್ಲಿ 6, ಕರ್ನಾ­­ಟಕದಲ್ಲಿ 4, ಬಿಹಾರದಲ್ಲಿ 3, ತಮಿಳುನಾಡು, ಮಹಾ­­ರಾಷ್ಟ್ರ, ಅಸ್ಸಾಂ, ಒಡಿಶಾಗಳಲ್ಲಿ ತಲಾ ಎರಡು ಹಾಗೂ ಉಳಿದ ರಾಜ್ಯಗಳಲ್ಲಿ ಒಂದೊಂದು ರ್‍ಯಾಲಿಗಳಲ್ಲಿ ಅವರು ಭಾಗಿಯಾಗಿದ್ದಾರೆ  ಎಂದು ಬಿಜೆಪಿ ಮಾಹಿತಿ ನೀಡಿದೆ.

‘ಚಾಯ್‌ ಪೆ ಚರ್ಚಾ’ ಕಾರ್ಯಕ್ರಮವು 24 ರಾಜ್ಯ­ಗಳಲ್ಲಿ ಹಲವು ಸುತ್ತು ನಡೆದಿದ್ದರೆ, 15 ರಾಷ್ಟ್ರಗಳಲ್ಲಿ ಬಿತ್ತರವಾಗಿದೆ. ಹೊಸರೂಪದ ಈ ಕಾರ್ಯಕ್ರಮದಲ್ಲಿ ಅಂದಾಜು 10 ಲಕ್ಷ ಜನರು ಭಾಗವಹಿಸಿದ್ದಾರೆ ಎಂದೂ ತಿಳಿಸಿದೆ.

ಮೋದಿ ಭದ್ರತೆಯಲ್ಲಿ ಹೆಚ್ಚಳ
ಎರಡು ತಿಂಗಳಿಗೂ ಹೆಚ್ಚು ಕಾಲದ ಚುನಾವಣಾ ಸಂದರ್ಭದಲ್ಲಿ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಭದ್ರತೆಯನ್ನು ಹೆಚ್ಚಿಸಿ ವಿಶೇಷ ರೀತಿಯ ರಕ್ಷಣೆ ಒದಗಿಸಲಾಗಿತ್ತು ಎಂದು ಭದ್ರತಾ ಸಂಸ್ಥೆಗಳ ಮೂಲಗಳು ತಿಳಿಸಿವೆ.

ಅತ್ಯಾಧುನಿಕ ಭದ್ರತಾ ಬಲದ (ಎಸ್‌ಎಎಲ್‌) ತಂಡಗಳು (ರಾಷ್ಟ್ರೀಯ ಭದ್ರತಾ ಪಡೆ– ಎನ್‌ಎಸ್‌ಜಿ, ಗುಜರಾತ್‌ ಪೊಲೀಸರು), ಬಾಂಬ್‌ ನಿಷ್ಕ್ರಿಯ ದಳ ಹಾಗೂ ಬೇಹುಗಾರಿಕಾ ಸಿಬ್ಬಂದಿಗೆ ಮೋದಿ ಭದ್ರತಾ ಕೆಲಸವನ್ನು ವಹಿಸಲಾಗಿತ್ತು.

100ಕ್ಕೂ ಹೆಚ್ಚು ಎನ್‌ಎಸ್‌ಜಿ ‘ಬ್ಲ್ಯಾಕ್‌ ಕ್ಯಾಟ್‌’ ಯೋಧರನ್ನು ಅವರ ಭದ್ರತೆಗೆ ನಿಯೋಜಿಸಲಾಗಿತ್ತು ಎಂದು ಮೂಲಗಳು ಹೇಳಿವೆ.

ಮೋದಿ ಅವರಿಗೆ ‘ಝೆಡ್‌ ಪ್ಲಸ್‌’ ದರ್ಜೆಯ ಭದ್ರತೆ ನೀಡಲಾಗಿದೆ. ಇದು ದೇಶದ ಪ್ರಧಾನಿ ಮತ್ತು ಅವರ ಕುಟುಂಬದವರಿಗೆ ನೀಡುವ ಭದ್ರತೆಗೆ ಸಮೀಪದ್ದಾಗಿದೆ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT