ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್‌

Last Updated 19 ಜೂನ್ 2016, 19:30 IST
ಅಕ್ಷರ ಗಾತ್ರ

1) ಭಾರತದ ಇತಿಹಾಸದಲ್ಲಿ ರಂಗೀಲಾ ಎಂದು ಯಾವ ಮೊಘಲ್ ಚಕ್ರವರ್ತಿಯನ್ನು ಕರೆಯಲಾಗುತ್ತಿತ್ತು?
a) ಬಹದ್ದೂರ್ ಷಾ 
b) ಮಹಮ್ಮದ್ ಷಾ
c) ಹುಮಾಯುನ್ 
d) ಬಾಬರ್

2) ರಾಮನವಮಿಯನ್ನು ಈ ಕೆಳಕಂಡ ಯಾವ ದಿನದಂದು ಆಚರಿಸಲಾಗುತ್ತದೆ?
a) ಚೈತ್ರಮಾಸದ ನವಮಿ ದಿನ  
b) ಚೈತ್ರಮಾಸದ ಆರಂಭದ ದಿನ
c) ಚೈತ್ರಮಾಸದ ಕೊನೆಯ ದಿನ
d) ಯಾವುದು ಅಲ್ಲ

3) ರಂಜಾನ್ ಮಾಸಾಚರಣೆ ಯಾವ ಧರ್ಮದವರ ಪವಿತ್ರ ಆಚರಣೆಯಾಗಿದೆ?
a) ಈಸ್ಟರ್ ಧರ್ಮ  
b) ಕ್ಯಾಥೋಲಿಕ್ ಧರ್ಮ
d) ಇಸ್ಲಾಂ ಧರ್ಮ 
d) ಯಹೂದಿ ಧರ್ಮ

4) ಕೋನಾರ್ಕ್‌ದ ಪ್ರಸಿದ್ಧ ಸೂರ್ಯದೇವಾಲಯ ಈ ಕೆಳಕಂಡ ಯಾವ ರಾಜ್ಯದಲ್ಲಿದೆ?
a) ತಮಿಳುನಾಡು
b) ಕೇರಳ
c) ಮಧ್ಯಪ್ರದೇಶ
d) ಒಡಿಶಾ

5) ಪದಕವಿತಾ ಪಿತಾಮಹ ಎಂಬ ಬಿರುದನ್ನು ಹೊಂದಿದ್ದ ಕವಿ ಅಥವಾ ಸಂತ ಯಾರು?
a) ತಾಳಪಾಕ ಅನ್ನಮಾಚಾರ್ಯರು
b) ತಿರುವಳ್ಳವರ್
c) ವೇಮನ 
d) ಬಸವಣ್ಣ

6) ಬೌದ್ಧ ಭಿಕ್ಕುಗಳು ವಾಸಿಸಲು ನಿರ್ಮಿಸಿದ್ದ ವಸತಿಗೃಹಗಳನ್ನು ಯಾವ ಹೆಸರಿನಿಂದ ಕರೆಯಲಾಗುತ್ತದೆ?
a) ಬಿಡಾರಗಳು 
b) ಮಂದಿರಗಳು
c) ವಿಶ್ರಾಂತಿ ಗೃಹಗಳು
d) ವಿಹಾರಗಳು

7) ಭಾರತೀಯ ಇತಿಹಾಸದಲ್ಲಿ ಯಾರ ಕಾಲದ ಶಿಲ್ಪಕಲೆಯನ್ನು ಸುವರ್ಣಯುಗ ಎಂದು ಕರೆಯಲಾಗಿದೆ?
a) ಮೌರ್ಯರು  
b) ಗುಪ್ತರು
c) ಶಾತವಾಹನರು 
d) ಚೋಳರು

8) ಕಥಕ್ಕಳಿ ನೃತ್ಯ ಪ್ರಕಾರ ಯಾವ ರಾಜ್ಯದಲ್ಲಿ ಜನಪ್ರಿಯವಾಗಿದೆ?
a) ಆಂಧ್ರಪ್ರದೇಶ     
b) ಪಶ್ಚಿಮ ಬಂಗಾಳ
c) ಕೇರಳ 
d) ದೆಹಲಿ

9) ತ್ಯಾಗರಾಜರು ರಚಿಸಿದ ಸಂಗೀತನಾಟಕ ಕೃತಿ ಯಾವುದು?
a) ಪ್ರಹ್ಲಾದ ಭಕ್ತಿವಿಜಯ 
b) ಸಂಪೂರ್ಣ ರಾಮಾಯಣ
c) ಸೋಮದೇವ ಕುಣಿತ 
d) ಬಲ ಭೀಮ

10) ಸಂಗೀತಕ್ಕೆ ಸಂಬಂಧಿಸಿದಂತೆ  ಶಾರ್ಙ್ಗದೇವ ರಚಿಸಿದ ಜನಪ್ರಿಯ ಗ್ರಂಥ ಯಾವುದು?
a) ಸಂಗೀತ ಚಿಂತಾಮಣಿ 
b) ಸಂಗೀತ ರತ್ನಾಕರ
c) ರಾಗ ತಾಳ ಚಿಂತಾಮಣಿ  
d) ನೃತ್ಯ ರತ್ನಾವಳಿ

ಉತ್ತರಗಳು: 1-b, 2-a, 3-c, 4-d, 5-a, 6-d, 7-b, 8-c, 9-a, 10-b.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT