ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಮಗುವಿಗೂ ರಕ್ಷಣೆ ಅಗತ್ಯ

Last Updated 24 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸಮಾಜದಲ್ಲಿ ಜನಿಸುವ ಪ್ರತಿಯೊಂದು ಮಗುವಿಗೂ ರಕ್ಷಣೆ ಹಾಗೂ ಪೋಷಣೆ ಸಿಗಬೇಕು~ ಎಂದು ರಾಜ್ಯ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಸುಧಾರಣಾ ವಿಭಾಗದ ನಿರ್ದೇಶಕಿ ನರ್ಮದಾ ಆನಂದ್ ಇಲ್ಲಿ ಅಭಿಪ್ರಾಯಪಟ್ಟರು.

ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶುಮಂದಿರದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ದತ್ತು ಪೋಷಕರ ಸಭೆಯಲ್ಲಿ ಅವರು ಮಾತನಾಡಿ, ಮಕ್ಕಳು ಪೋಷಕರ ಪೋಷಣೆಯಿಂದ ವಂಚಿತರಾಗಬಾರದು ಎಂದರು.

ದತ್ತು ಸಹಕಾರ ಸಮಿತಿ (ಎಸಿಎ) ಅಧ್ಯಕ್ಷೆ ಡಾ.ಅಲಮಾ ಲೊಬೊ ಮಾತನಾಡಿ, `ದತ್ತು ಪಡೆದ ಮಕ್ಕಳು ಹಾಗೂ ಹೆತ್ತ ಮಕ್ಕಳನ್ನು ಒಂದೇ ದೃಷ್ಟಿಕೋನದಲ್ಲಿ ನೋಡಬೇಕು. ಪೋಷಣೆಯ ಅವಧಿಯಲ್ಲಿ ಸಂಪೂರ್ಣವಾಗಿ ಪ್ರೀತಿಯಿಂದ ವರ್ತಿಸಬೇಕು. ಆಗ ಮಾತ್ರ ಮಕ್ಕಳಿಂದ ನಿರೀಕ್ಷಿಸಿದ ಫಲ ಪೋಷಕರಿಗೆ ಸಿಗಲು ಸಾಧ~್ಯ ಎಂದು ಹೇಳಿದರು.

ದತ್ತು ಸ್ವೀಕಾರ: ಇಂದು ನಡೆದ ಸಭೆಯಲ್ಲಿ ಮಂಗಳೂರಿನ ದಂಪತಿಗಳಾದ ಅನಿಲ್‌ಕುಮಾರ್ ವೆಗಾಸ್ ಹಾಗೂ ಮೀನಾ 4 ತಿಂಗಳ `ವಿಜಯಲಕ್ಷ್ಮೀ~ ಎಂಬ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡರು. ಇದೇ ವೇಳೆ ಶಿಶು ಮಂದಿರದಿಂದ ದತ್ತು ಪಡೆದ ಮಕ್ಕಳ ಪೋಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಶಿಶು ಮಂದಿರದ ಮಕ್ಕಳು ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಇಲಾಖೆಯ ಉಪ ನಿರ್ದೇಶಕ ರಮೇಶ್ ಹಾಲಬಾವಿ, ಮಕ್ಕಳ ಕಲ್ಯಾಣ ಸಮಿತಿ ನಗರ ಅಧ್ಯಕ್ಷೆ ರಾಧಾ ಶ್ರೀನಿವಾಸಮೂರ್ತಿ, ಸಮಿತಿಯ ಗ್ರಾಮೀಣ ವಿಭಾಗದ ಅಧ್ಯಕ್ಷೆ ಅಲಾಸ್ ಅಲೋಸೆಯಸ್, ಜನೋದಯ ಸಮಿತಿಯ ನಿರ್ದೇಶಕಿ ಸಂತೋಷ್ ವಾಜ್ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT