ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾ ಕಾರಂಜಿ: ಉರ್ದು ಶಾಲೆಯ ವಿದ್ಯಾರ್ಥಿಗಳ ಸಾಧನೆ

Last Updated 12 ಡಿಸೆಂಬರ್ 2013, 6:51 IST
ಅಕ್ಷರ ಗಾತ್ರ

ಹಾವೇರಿ: ತಾಲ್ಲೂಕಿನ ಸಂಗೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಕಬ್ಬೂರು ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಸಂಗೂರಿನ ಸರ್ಕಾರಿ ಉರ್ದು ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.

ನಾಲ್ಕನೇ ತರಗತಿ ವಿಭಾಗದ ಸಂಸ್ಕೃತ ಪಠಣ ಸ್ಪರ್ಧೆಯಲ್ಲಿ ತರಕ್ಷಾ ಆಡರಕಟ್ಟಿ ಪ್ರಥಮ, ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಸುಹಾನ್‌ ಕಣವಿ ದ್ವಿತೀಯ, ಇಂಗ್ಲಿಷ್‌ ಕಂಠಪಾಠ ಸ್ಪರ್ಧೆಯಲ್ಲಿ ಶಮೀರ್‌ ಹಲಗೇರಿ ದ್ವಿತೀಯ ಹಾಗೂ ಆರನೇ ತರಗತಿ ಸಂಸ್ಕೃತ ಪಠಣ ಸ್ಪರ್ಧೆಯಲ್ಲಿ ಉಮ್ಮೆಸಲ್ಮಾ ಆಡರಕಟ್ಟಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಎಂಟನೇ ತರಗತಿ ವಿಭಾಗದ ಸ್ಥಳದಲ್ಲಿಯೇ ಮಾದರ ತಯಾರಿಸುವ ಸ್ಪರ್ಧೆಯಲ್ಲಿ ತೌಸಿನ್‌ಬಾನು ಪಿರಖಾನವರ ಹಾಗೂ ಸಹರಿನ್‌ ಲಕ್ಷ್ಮೇಶ್ವರ ಪ್ರಥಮ, ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಸ್ವಾಲಿಹಾ ಹಲಗೇರಿ ಪ್ರಥಮ, ಜನಪದ ಗೀತೆ ಸ್ಪರ್ಧೆಯಲ್ಲಿ ನಗೀನಾ ಜಿಗಳೂರ ದ್ವಿತೀಯ ಹಾಗೂ ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಗಂಟಿಸಿದ್ದಪ್ಪನವರ, ಸಮೂಹ ಸಂಪನ್ಮೂಲ ವ್ಯಕ್ತಿ ಜೆ.ಎಂ.ದೊಡ್ಡಮನಿ, ಕಾರ್ಯಕ್ರಮ ಆಯೋಜಕಿ ಶೈಲಜಾ ಹಲಗೇರಿ, ಮುಖ್ಯ ಶಿಕ್ಷಕರಾದ ಉಷಾ ಕರಬಸನಗೌಡ್ರ ಮತ್ತು ಎ.ಪಿ.ಮೋಸಿನ್‌, ಶಾಲೆಯ ಸಿಬ್ಬಂದಿ ಹಾಗೂ ಪಾಲಕರು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT