ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪ್ರತಿಭೆಗಳಿಗೆ ಕಾರಂಜಿ ದಾರಿದೀಪ'

Last Updated 27 ಡಿಸೆಂಬರ್ 2012, 7:28 IST
ಅಕ್ಷರ ಗಾತ್ರ

ಚೇರ್ಕಾಡಿ(ಬ್ರಹ್ಮಾವರ): ಪ್ರತಿಯೊಂದು ಕೆಲಸವನ್ನು ಕೂಡಿ ಮಾಡಿದಲ್ಲಿ ಅದರಲ್ಲಿ ಯಶಸ್ಸು ಕಾಣಬಹುದು ಎಂದು ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯೆ ಗೋಪಿ ಕೆ ನಾಯ್ಕ ಹೇಳಿದರು.

ಚೇರ್ಕಾಡಿ ದುರ್ಗಾಪರಮೇಶ್ವರೀ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಉಡುಪಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ದುರ್ಗಾಪರಮೇಶ್ವರಿ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ನಡೆದ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬ್ರಹ್ಮಾವರ ವಲಯ ಮಟ್ಟದ ಪ್ರತಿಭಾ ಕಾರಂಜಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಯುವ ಪ್ರತಿಭೆಗಳಿಗೆ ಪ್ರತಿಭಾ ಕಾರಂಜಿ ದಾರಿದೀಪವಾಗಿದೆ ಎಂದರು.
ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗೌರಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಮಲ್ಪೆಯ ಉದ್ಯಮಿ ಪ್ರಮೋದ್ ಮಧ್ವರಾಜ್, ಪೆರ್ಡೂರು ಅನಂತ ಪದ್ಮನಾಭ ದೇವಳದ ಧರ್ಮದರ್ಶಿ ಸದಾನಂದ ಸೇರ್ವೆಗಾರ್, ಚೇರ್ಕಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಮಲಾಕ್ಷ ಹೆಬ್ಬಾರ್, ಕನ್ನಾರು ದುರ್ಗಾ ಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ಯಾಮರಾಜ ಹೆಗ್ಡೆ, ತಾ.ಪಂ ಸದಸ್ಯೆ ಜ್ಯೋತಿ ಪೂಜಾರಿ, ನಿವೃತ್ತ ಮುಖ್ಯ ಶಿಕ್ಷಕರಾದ ಮಂಜಯ್ಯ ಶೆಟ್ಟಿ, ಸೂರೆಬೆಟ್ಟು ಸಿದ್ಧಿವಿನಾಯಕ ದೇವಳದ ಧರ್ಮದರ್ಶಿ ರವಿರಾಜ್ ಶೆಟ್ಟಿ, ಇಲಾಖೆಯ ಮುಖ್ಯಸ್ಥರಾದ  ಆರೂರು ತಿಮ್ಮಪ್ಪ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಸಂತೋಷ ಕುಮಾರ್ ಶೆಟ್ಟಿ, ನಾಗೇಶ ಮಯ್ಯ, ಶಾಂತಾರಾಮ ಶೆಟ್ಟಿ, ಶ್ರೀಕಾಂತ ಸಾಮಂತ್, ಚಂದ್ರಶೇಖರ ಶೆಟ್ಟಿ, ಬಾಲಕೃಷ್ಣ ಹೆಗ್ಡೆ, ಮಧುಕರ್, ಶಾಲಾ ಅಭಿವೃದ್ಧಿ ಸಂಘದ ಅದ್ಯಕ್ಷರಾದ ಸಿ.ವಿಜಯ ಹೆಗ್ಡೆ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ವಿಶ್ವಾಸ್, ಶಾಲಾ ಮುಖ್ಯ ಶಿಕ್ಷಕ ದಿನೇಶ ಹೆಗ್ಡೆ, ಶಿಕ್ಷಣ ಸಂಯೋಜಕ ಪ್ರವೀಣ್‌ಕುಮಾರ್ ಶೆಟ್ಟಿ, ದೈಹಿಕ ಶಿಕ್ಷಣಾಧಿಕಾರಿ ಮಧುಕರ್ ಎಸ್.ಮತ್ತಿತರರು ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಶಾನುಭಾಗ್ ಸ್ವಾಗತಿಸಿದರು. ಅಧ್ಯಾಪಕ ಅಶೋಕ್ ಕುಮಾರ್ ಶೆಟ್ಟಿ ಮಾಡ ನಿರೂಪಿಸಿದರು.
ಇದಕ್ಕೂ ಮುನ್ನ ರಾಷ್ಟ್ರೀಯ ಯೋಗ ಪಟು ರಕ್ಷಾ ಪ್ರತಿಭಾ ಜ್ಯೋತಿಯನ್ನು ಚೇರ್ಕಾಡಿ ಕಂಬಳ ಖ್ಯಾತಿಯ ಜನ್ನ ದೇವರ ಸನ್ನಿಧಿಯಿಂದ ಶಾಲಾ ತನಕ ವೈಭವದ ಮೆರವಣಿಗೆಯಲ್ಲಿ ತಂದರು. ಬ್ರಹ್ಮಾವರ ವಲಯದ 16ಕ್ಲಸ್ಟರ್ ಮಟ್ಟದ 500ಕ್ಕೂ ಹೆಚ್ಚು ವಿಜೇತ ವಿದ್ಯಾರ್ಥಿಗಳು ಎರಡು ದಿನ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT