ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆಗೆ ಕಾಲಮಾನ ಇಲ್ಲ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಮುಂಬೈ: `ಸಾಹಿತ್ಯ ಎಂದೂ ನಿಂತ ನೀರಲ್ಲ. ಅಲ್ಲಿ ಏರಿಳಿತ ಇದ್ದದ್ದೇ. ಇದನ್ನು ನಾವು ಎಲ್ಲ ಸಾಹಿತ್ಯ ಚರಿತ್ರೆಯಲ್ಲಿ ಕಾಣಬಹುದು. ಭಾಷೆ, ಸಾಹಿತ್ಯದ ಬಗೆಗೆ ಆತಂಕ ಇದ್ದಾಗಲೇ ಆ ಕುರಿತು ಕಾಳಜಿ , ಕ್ರಿಯಾಶೀಲತೆ ಸಾಧ್ಯವಾಗುತ್ತದೆ.  ಪ್ರತಿಭೆಗೆ ಕಾಲಮಾನ ಎಂಬುದಿಲ್ಲ. ಪಂಪನಿಂದ ತೊಡಗಿ ಕುವೆಂಪು ಅವರ ವರೆಗೆ ಕನ್ನಡ ಮಹಾನ್ ಪ್ರತಿಭೆಗಳನ್ನು ಕಂಡಿದೆ ಎಂದು ಲೇಖಕ ಡಾ. ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟಿದ್ದಾರೆ.

ಅವರು ಮುಂಬೈ ವಿಶ್ವವಿದ್ಯಾಲಯ ಏರ್ಪಡಿಸಿದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. `ಅಸಮಾನತೆಯ ವಿರುದ್ಧ, ಶೋಷಣೆಯ ವಿರುದ್ಧ ಕನ್ನಡ ಸಾಹಿತ್ಯದಲ್ಲಿ ಉದ್ದಕ್ಕೂ ಪ್ರತಿಭಟನೆ ವ್ಯಕ್ತವಾದುದುನ್ನು ನಾವು ಕಾಣಬಹುದು. ವಚನಕಾರರು ಬದುಕು ದೊಡ್ಡದೆಂದು ಭಾವಿಸಿ ಬರೆದರು. ಜನಭಾಷೆಯಲ್ಲಿ ಬರೆದರು.

ಆದರೆ ಇಂದು ವಿಜ್ಞಾನಿಗಳು, ವೈದ್ಯರು, ವಿವಿಧ ಕ್ಷೇತ್ರಗಳ ಪರಿಣತರು ಜನಭಾಷೆಯಲ್ಲಿ ಏನನ್ನೂ ಬರೆಯುತ್ತಿಲ್ಲ ಎಂಬುದು ಖೇದದ ಸಂಗತಿ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT