ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆಗೆ ಮಾನ್ಯತೆ ದೊರೆಯಲಿ

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಮಕ್ಕಳು ಹಲವು ಆಸೆಗಳನ್ನು ಇಟ್ಟುಕೊಂಡು ಕಷ್ಟಪಟ್ಟು ಹಾಡು ನೃತ್ಯಗಳನ್ನು ಕಲಿತುಕೊಳ್ಳುತ್ತಾರೆ. ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಅಂತಹ ಮಕ್ಕಳ ಪ್ರತಿಭೆಗೆ ಸರಿಯಾದ ಬಹುಮಾನ ನೀಡಬೇಕು. ಆ ಪುಟ್ಟ ಮಕ್ಕಳ ಪುಟ್ಟ ಪ್ರತಿಭೆಗೆ ಮಾನ್ಯತೆ ದೊರೆಯಬೇಕು. ಆದರೆ ಸಾರ್ವಜನಿಕ ಶಿಕ್ಷಣ ಇಲಾಖೆ 50, 40, 30 ರೂಪಾಯಿ ಕೊಡುವುದು ತುಂಬಾ ಸಣ್ಣ ಮೊತ್ತ.

ಈ ಮೊತ್ತ ಕೊಡುವ ಬದಲು ಪ್ರಮಾಣಪತ್ರ ಕೊಡಬಹುದು. ಇಂತಹ ಮೊತ್ತವನ್ನು ಕೊಡುವುದು ಶಿಕ್ಷಕರಿಗೆ ಮುಜುಗರ ತರುವ ವಿಷಯವಾಗಿದೆ. ಅಲ್ಲದೆ ಮಕ್ಕಳ ಪೋಷಕರು ಕೆರಳುವಂತಾಗಿದೆ. ಇಲಾಖೆ ಯಾಕೆ ಇಷ್ಟೊಂದು ಕಡಿಮೆ ಮೊತ್ತದ ಹಣ ನೀಡುತ್ತಿದೆ? ಈಗಿನ ಬೆಲೆಗಳಿಗೆ ಹೋಲಿಸಿದರೆ 10-15 ರೂಪಾಯಿ ತುಂಬ ಕಡಿವೆು ಮೊತ್ತ. ಇನ್ನಾದರೂ ಇಲಾಖೆ ಅದರ ನೀತಿಯನ್ನು ಬದಲಾಯಿಸಿಕೊಂಡು ಮಕ್ಕಳನ್ನು ಪ್ರೋತ್ಸಾಹಿಸುವಂತಾಗಲಿ. `ಪ್ರತಿಭಾ ಕಾರಂಜಿ' ಒಳ್ಳೆಯ ರೀತಿಯಲ್ಲಿ ನಡೆಯುವಂತಾಗಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT