ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಯೊಬ್ಬ ಪ್ರಜೆ ವಿರೋಧ ಪಕ್ಷದ ನಾಯಕ: ಉಮಾಶ್ರೀ

Last Updated 3 ಅಕ್ಟೋಬರ್ 2011, 5:45 IST
ಅಕ್ಷರ ಗಾತ್ರ

ಬನಹಟ್ಟಿ: `ಆಡಳಿತಾರೂಢ ಬಿಜೆಪಿ ನಾಯಕರು ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಸಂಪತ್ಭರಿತ ಕರ್ನಾಟಕದ ಲೂಟಿ ನಡೆದಿದೆ. ಜನತೆ ಜಾಗೃತರಾಗದೆ ಹೋದರೆ, ದೇಶಕ್ಕೆ ದುರ್ದೆಶೆ ತಪ್ಪಿದ್ದಲ್ಲ. ಪ್ರತಿಯೊಬ್ಬ ಪ್ರಜೆಯೂ ವಿರೋಧ ಪಕ್ಷದ ನಾಯಕ ನಾಗಿ, ಭ್ರಷ್ಟಾಚಾರದ ವಿರುದ್ಧ ಹೋರಾ ಡಬೇಕು~ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕಿ ಉಮಾಶ್ರೀ ಹೇಳಿದರು.
 
ರಬಕವಿ-ಬನಹಟ್ಟಿ ನಗರ ಕಾಂಗ್ರೆಸ್ ಘಟಕ ಭಾನುವಾರ 30ನೆಯ ವಾರ್ಡಿ ನಲ್ಲಿ ಏರ್ಪಡಿಸಿದ್ದ ಗಾಂಧಿ ಜಯಂತಿ ಹಾಗೂ ಮತದಾರರೊಂದಿಗೆ ಮುಖಾ ಮುಖಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದವರಿಗೆ ಡಿನೋಟಿಫೈ ಭೂಹಗ ರಣದಲ್ಲಿ ಜೈಲು ಸೇರುವ ಭಯ ಬಂದಿದೆ. ಶಿಸ್ತಿನ ಪಕ್ಷದಲ್ಲಿ ಇಂದು ಭ್ರಷ್ಟರೇ ತುಂಬಿಕೊಂಡಿದ್ದಾರೆ. ಮಾತು ತಪ್ಪಿ ನಡೆಯುವ ಜನಪ್ರತಿನಿಧಿಗಳನ್ನು ಮತದಾರ ಪ್ರಶ್ನಿಸುವಂತಾಗಬೇಕು~ ಎಂದು ಉಮಾಶ್ರೀ ನುಡಿದರು.
 
ನಗರಸಭೆ ಹಿಂದಿನ ಅಧ್ಯಕ್ಷ ಸಂಗಪ್ಪ ಕುಂದಗೋಳ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ ಡಾ. ಎ ಆರ್ ಬೆಳಗಲಿ, ಸಂಗಪ್ಪ ಹಲ್ಲಿ, ದುಂಡಪ್ಪ ಕುಂಬಾರ, ಮಹಾದೇವ ಮಹಾಲಿಂಗ ಪುರ,  ಸದಾಶಿವ ಗೊಂದಕರ, ರಾಜ ಶೇಖರ ಮಟ್ಟಿಕಲ್ಲಿ ಮುಂತಾದವರು ಉಪಸ್ಥಿತರಿದ್ದರು.

ಸದಾಶಿವ ಕೈಸಲಗಿ ಸ್ವಾಗತಿಸಿದರು. ಆಶಾ ಹೊಸೂರ ವಂದಿಸಿದರು.ವಕ್ತಾರ ರವೀಂದ್ರ ಹಟ್ಟಿ ನಿರೂಪಿಸಿದರು.  ಸಂಗೀತಾ ಬನ್ನೂರು ಮತ್ತು ಸಂಗಡಿಗರು ಪ್ರಾರ್ಥಿಸಿದರು. 
 
ಪಡಿತರ: ಅನ್ಯಾಯ  
ಬನಹಟ್ಟಿ: ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕಡುಬಡವರಿಗೆಂದು ಕೇಂದ್ರ ಸರಕಾರ ಪ್ರತಿ ತಿಂಗಳು 35 ಕೆಜಿ ಅಕ್ಕಿ ಬಿಡುಗಡೆ ಮಾಡುತ್ತದೆ. ಆದರೆ ರಾಜ್ಯದಲ್ಲಿ ಕೇವಲ 25 ಕೆಜಿ ಮಾತ್ರ ವಿತರಿಸಲಾಗುತ್ತಿದೆ.

ಉಳಿದ ಧಾನ್ಯವನ್ನು ಕಪ್ಪು ಮಾರ್ಕೇಟ್‌ನಲ್ಲಿ ಮಾರಾಟಮಾಡಿ, ಬಡವರಿಗೆ ಅನ್ಯಾಯ ಮಾಡಲಾಗುತ್ತಿದೆ~ ಎಂದು ಕಾಂಗ್ರೆಸ್‌ನ ಸಂಗಪ್ಪ ಕುಂದ ಗೋಳ ಆರೋಪಿಸಿದ್ದಾರೆ.

ಪಕ್ಷದ `ಮುಖಾಮುಖಿ ಕಾರ್ಯ ಕ್ರಮ~ದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, `ಕಳೆದ ಮೂರು ವರ್ಷಗಳಿಂದ ಬಿಜೆಪಿ ಈ ರೀತಿ ಬಡವರಿಗೆ ಮೋಸ ಮಾಡುತ್ತ ಬಂದಿದೆ. ಇದರ ವಿರುದ್ಧ ನಮ್ಮ ಪಕ್ಷ ಹೋರಾಟ ನಡೆಸಲಿದೆ~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT