ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿವರ್ಷ ಮೇಳ ಆಯೋಜನೆ: ವಿ.ವಿ ಘೋಷಣೆ

Last Updated 25 ನವೆಂಬರ್ 2011, 7:50 IST
ಅಕ್ಷರ ಗಾತ್ರ

ಉದ್ಯಾನಗಿರಿ (ಬಾಗಲಕೋಟೆ): ಬಾಗಲಕೋಟೆ ತೋಟಗಾ ರಿಕಾ ವಿಶ್ವವಿದ್ಯಾಲಯ ಪ್ರಥಮ ಬಾರಿಗೆ ಆಯೋಜಿಸಿದ್ದ ಮೂರು ದಿನಗಳ ತೋಟಗಾರಿಕಾ ಮೇಳಕ್ಕೆ ಗುರುವಾರ ಸಂಜೆ ಸಂಭ್ರಮದ ತೆರೆ ಬಿದ್ದಿತು .

ಮೆಚ್ಚುಗೆ, ಟೀಕೆ, ಕುಂದು-ಕೊರತೆ ನಡುವೆ ನಡೆದ ಪ್ರಥಮ ತೋಟಗಾರಿಕಾ ಮೇಳದಿಂದ ಉತ್ತೇಜಿತಗೊಂಡಿರುವ ವಿಶ್ವ ವಿದ್ಯಾಲಯವು ಪ್ರತೀ ವರ್ಷ ತೋಟಗಾರಿಕಾ ಮೇಳವನ್ನು ಆಯೋಜಿಸುವುದಾಗಿ ಘೋಷಣೆ ಮಾಡಿದೆ.

ವಿಶ್ವವಿದ್ಯಾಲಯದ ನಿರೀಕ್ಷೆಯಂತೆ ರಾಜ್ಯದ ವಿವಿಧ ಜಿಲ್ಲೆಯಿಂದ ರೈತರು, ತೋಟಗಾರಿಕಾ ತಜ್ಞರು, ಕಾಲೇಜು ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಾರ್ವಜನಿಕರು ಸೇರಿದಂತೆ ಒಟ್ಟು ಮೂರು ದಿನಗಳಲ್ಲಿ 42 ಸಾವಿರ ಜನ (ಪ್ರಥಮ ದಿನ 8,700, ಎರಡನೇ ದಿನ-18,500 ಮತ್ತು ಮೂರನೇ ದಿನ-14,800) ಮೇಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. 

ಉತ್ತರ ಕರ್ನಾಟಕದ ತೋಟಗಾರಿಕಾ ಬೆಳೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆ ಒದಗಿಸಿದ್ದ ಮೇಳದಲ್ಲಿ ಸುಮಾರು 110 ಮಳಿಗೆಗಳಲ್ಲಿ ವಿವಿಧ ಬಗೆಯ ತೋಟಗಾರಿಕಾ ಬೆಳೆಗಳು (ತೆಂಗು, ಪಪ್ಪಾಯಿ, ಹಲಸು, ಚಿಕ್ಕು, ಕಲ್ಲಂಗಡಿ, ದ್ರಾಕ್ಷಿ, ದಾಳಿಂಬೆ, ಕಬ್ಬು, ಈರುಳ್ಳಿ, ಬಣ್ಣಬಣ್ಣದ ದೊಡ್ಡ ಮೆಣಸು, ಕುಂಬಳ, ಪಡುವಲ, ತಾಳೆ, ಕ್ಯಾರೆಟ್, ಬದನೆಕಾಯಿ ಇನ್ನಿತರ ತರಕಾರಿ ಹಾಗೂ ಸಸಿ), ಯಾಂತ್ರಿಕ ಕೃಷಿ ಉಪಕರಣಗಳು (ಟ್ರ್ಯಾಕ್ಟರ್, ಟಿಲ್ಲರ್, ನೇಗಿಲು, ಕೂರಿಗೆ, ಔಷಧಿ ಸಿಂಪಡಿಸುವ ಯಂತ್ರಗಳು, ಸೌರಶಕ್ತಿ ಆಧಾರಿತ ತಂತಿ ಬೇಲಿ, ಹಸಿರು ಮನೆ), ದ್ರಾಕ್ಷಿ ವೈನ್, ಕೃಷಿ ಪುಸ್ತಕ, ಕೃಷಿ ಸಾಕ್ಷ್ಯಚಿತ್ರಗಳು, ಮುಧೋಳ ನಾಯಿ ಪ್ರದರ್ಶನ ಪ್ರಮುಖವಾಗಿ ರೈತರ ಮತ್ತು ಸಾರ್ವ ಜನಿಕರ ಗಮನ ಸೆಳೆಯಿತು.

ಜೊತೆಗೆ ಹೂವಿನಿಂದ ನಿರ್ಮಿ ಸಲಾ ಗಿದ್ದ ಐಕ್ಯ ಮಂಟಪ, ಹಣ್ಣು ತರಕಾರಿ ಬಳಸಿ ನಿರ್ಮಿಸಲಾಗಿದ್ದ ಸಾಹಿತಿಗಳ ಪ್ರತಿಕೃತಿ ಜನರನ್ನು ವೀಕ್ಷಕರನ್ನು ಆಕರ್ಷಿಸಿತು.

ಆದರೆ ಮೇಳದಲ್ಲಿ ಪುಷ್ಪ ಪ್ರದರ್ಶನಕ್ಕೆ ಮತ್ತು ಪ್ರಾತ್ಯಕ್ಷಿತೆಗೆ ಒತ್ತು ನೀಡದೇ ಸಂಪೂರ್ಣ ನಿರ್ಲಕ್ಷಿಸಿದ್ದು ರೈತರ ಮತ್ತು ಸಾರ್ವಜನಿಕರ ಟೀಕೆಗೆ ಒಳಗಾಯಿತು. ಸ್ಥಳೀಯ ಮತ್ತು ಸಣ್ಣ ಸಾಗುವಳಿದಾರರನ್ನು ತಲುಪುವಲ್ಲಿ ವೇಳ ಹಿಂದಿಬಿದ್ದತು.

`ರೈತರಿಂದ -ರೈತರಿಗಾಗಿ~ ಸಂವಾದ ಕಾರ್ಯಕ್ರಮ ರೈತ ಸಮೂಹವನ್ನು ತಟ್ಟುವಲ್ಲಿ ವಿಫಲವಾಯಿತು. ಕೇವಲ ಅನುಭವಿಗಳ, ತಜ್ಞರ ಭಾಷಣಕ್ಕೆ ಸೀಮಿತವಾಯಿತು. ಸಂವಾದಕ್ಕೆ ಅವಕಾಶ ನೀಡದ ಕಾರಣ ರೈತರಿಂದ ವಿರೋಧಕ್ಕೂ ಕಾರಣವಾಯಿತು. ಜಿಲ್ಲೆ ಸೇರಿದಂತೆ ರಾಜ್ಯದ ಆಯ್ದ ಪ್ರಗತಿಪರ ಕೃಷಿಕರನ್ನು ಗುರುತಿಸಿ ಮೇಳಕ್ಕೆ ಕರೆತಂದು ಗೌರವಿಸಿತು.

ಮೂರು ದಿನಗಳ ಮೇಳದ ಉದ್ದಕ್ಕೂ ಬಿಡುವಿಲ್ಲದ ಸಭಾ ಕಾರ್ಯಕ್ರಮಗಳು ಜರುಗಿದವು, ಆದರೆ ತೋಟಗಾರಿಕೆ ಕೃಷಿಯ ಬಗ್ಗೆ ರೈತರ ನಿರೀಕ್ಷೆಯಂತೆ ಯಾವುದೇ ಪ್ರಾತ್ಯಕ್ಷಿಕೆಗಳು ನಡೆಯಲಿಲ್ಲ, ಅಲ್ಲದೇ ದೂರ-ದೂರದ ಜಿಲ್ಲೆಯಿಂದ ಆಗಮಿಸಿದ್ದ ರೈತರು ದಾಲ್ಚಿನ್ನಿ, ಲವಂಗ ಸೇರಿದಂತೆ ಇನ್ನಿತರ ಸಸಿಗಳನ್ನು ಕೊಂಡೊಯ್ಯಲು ಸಿಗದೇ ನಿರಾಸೆ ವ್ಯಕ್ತಪಡಿಸಿದರು.

ಮಂತ್ರಿಗಳ ಗೈರು: ಕಾರ್ಯಕ್ರಮವನ್ನು ಉದ್ಘಾಟಿಸಬೇಕಾಗಿದ್ದ ತೋಟಗಾರಿಕಾ ಸಚಿವ ಎಸ್.ಎ. ರವೀಂದ್ರನಾಥ, ಕೃಷಿ ಸಚಿವ ಉಮೇಶ ಕತ್ತಿ, ಸಹಕಾರ ಮತ್ತು ಮಾರುಕಟ್ಟೆ ಸಚಿವ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಚಿವ ಮುರುಗೇಶ ನಿರಾಣಿ ಅವರ ಗೈರು ಎದ್ದು ಕಾಣುತ್ತಿತ್ತು. ಬಳ್ಳಾರಿ ಗ್ರಾಮಾಂತರ ಉಪಚುನಾವಣೆ `ಬಿಸಿ~ಯಿಂದಾಗಿ ಸರ್ಕಾರದ ಪ್ರತಿನಿಧಿಗಳು ತೋಟಗಾರಿಕಾ ಮೇಳದಲ್ಲಿ ಹಾಜರಾಗದೇ ನಿರ್ಲಕ್ಷ್ಯಿಸಿರುವುದು ಕಂಡುಬಂದಿತು.

ಬಾಗಲಕೋಟೆ ನಗರ ಸೇರಿದಂತೆ ಜಿಲ್ಲೆಯ ಕೆಲವು ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಮೇಳಕ್ಕೆ ಕರೆತಂದು ತೋಟಗಾರಿಕಾ ಬೆಳೆಗಳ ಬಗ್ಗೆ ಮಾಹಿತಿ ಒದಗಿಸಿದರು. ಉಳಿದಂತೆ ರಾಜ್ಯದ ವಿವಿಧ ತೋಟಗಾರಿಕಾ ಕಾಲೇಜುಗಳ ವಿದ್ಯಾರ್ಥಿಗಳು ಮೇಳದಲ್ಲಿ ಆಗಮಿಸಿ, ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

ರಾಜ್ಯದಲ್ಲಿ ನಡೆಯುವ ಹತ್ತಾರು ಕೃಷಿ ಮೇಳದಲ್ಲಿ ತೋಟಗಾರಿಕಾ ಮೇಳ ಮತ್ತೊಂದಾಯಿತೇ ಹೊರತು ರೈತ ಸಮೂಹಕ್ಕೆ ಹೊಸ ಉಡುಗೊರೆಯನ್ನು ನೀಡಲಿಲ್ಲ.

ಮೆಚ್ಚುಗೆ -ತೆಗಳಿಕೆ ನಡುವೆ ನಡೆದ ತೋಟಗಾರಿಕಾ ಮೇಳ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಪ್ರಥಮ ಮೇಳ ಎಂಬುದಷ್ಟೇ ವಿಶೇಷವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT