ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಥಮ ಸ್ಥಾನ ಬಿಡದ ಶ್ರೀನಿವಾಸಪುರ

Last Updated 19 ಮೇ 2012, 8:15 IST
ಅಕ್ಷರ ಗಾತ್ರ

ಕೋಲಾರ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಶ್ರೀನಿವಾಸಪುರ ತಾಲ್ಲೂಕು ಮೊದಲ ಸ್ಥಾನ ಪಡೆದಿದೆ. ಕೆಜಿಎಫ್ ಕೊನೇ ಸ್ಥಾನಕ್ಕೆ ಸರಿದಿದೆ. ಕಳೆದ  ಬಾರಿ ಎರಡನೇ ಸ್ಥಾನದಲ್ಲಿದ್ದ ಕೋಲಾರ ಈ ಬಾರಿ ಮೂರನೇ ಸ್ಥಾನ ಪಡೆದಿದೆ. 3ನೇ ಸ್ಥಾನದಲ್ಲಿದ್ದ ಮುಳಬಾಗಲು ನಾಲ್ಕನೇ ಸ್ಥಾನಕ್ಕೆ ಸರಿದಿದೆ. ನಾಲ್ಕನೇ ಸ್ಥಾನದಲ್ಲಿದ್ದ ಮಾಲೂರು ಎರಡನೇ ಸ್ಥಾನಕ್ಕೆ ಏರಿರುವುದು ವಿಶೇಷ.

100 ಫಲಿತಾಂಶ: ಈ ಬಾರಿ ಜಿಲ್ಲೆಯ 20 ಸರ್ಕಾರಿ ಶಾಲೆಗಳು ಪೂರ್ಣ ಫಲಿತಾಶವನ್ನು ಪಡೆದಿವೆ. ಕೋಲಾರ ತಾಲ್ಲೂಕಿನ ನಾಯಕರಹಳ್ಳಿ, ಪಾರ್ಶ್ವಗಾನಹಳ್ಳಿ, ಮದನಹಳ್ಳಿ, ಮಾಲೂರು ತಾಲ್ಲೂಕಿನ ರಾಜೇನಹಳ್ಳಿ, ಮುಳಬಾಗಲು ತಾಲ್ಲೂಕಿನ ವಿರೂಪಾಕ್ಷಿ, ತಿಪ್ಪದೊಡ್ಡಿ, ಯಳಗೊಂಡಹಳ್ಳಿ, ಆವಣಿ, ನೂಗಲಬಂಡೆ, ನೂತನ ಪ್ರೌಢಶಾಲೆ, ಶ್ರೀನಿವಾಸಪುರದ ಸೋಮಯಾಜಲಪಲ್ಲಿಯ ಮೊರಾರ್ಜಿ ಶಾಲೆ, ಅಡ್ಡಗಲ್, ವೈ.ಹೊಸಕೋಟೆ, ಮಾಸ್ತೇನಹಳ್ಳಿ, ತಾಡಿಗೋಳ್, ಕೂರಿಗೆಪಲ್ಲ ಮತ್ತ ದಳಸನೂರು ಶಾಲೆಗಳು ಪೂರ್ಣ ಫಲಿತಾಂಶ ಪಡೆದಿವೆ.

 ಅನುದಾನಿತ ಪ್ರೌಢಶಾಲೆಗಳ ಪೈಕಿ ಮಾಲೂರಿನ ಹನುಮಂತ ನಗರದ ಗೌತಮ ಪ್ರೌಢಶಾಲೆ, ಮುಳಬಾಗಲು ತಾಲ್ಲೂಕಿನ ಮುಡಿಯನೂರಿನ ಎಂ.ಜಿ.ಎನ್.ಪ್ರೌಢಶಾಲೆ, ಎಚ್.ಗೊಲ್ಲಹಳ್ಳಿಯ ಎಸ್.ವಿ.ಪ್ರೌಢಶಾಲೆ  ಪೂರ್ಣ ಫಲಿತಾಂಶ ಪಡೆದಿವೆ. ಜಿಲ್ಲೆಯ 27 ಅನುದಾನ ರಹಿತ ಪ್ರೌಢಶಾಲೆಗಳು ಪೂರ್ಣ ಫಲಿತಾಂಶ ಪಡೆದಿವೆ.
ಕೋಲಾರ: ಆನಂದಮೂರ್ತಿ ವಿದ್ಯಾಸಂಸ್ಥೆ, ವಾಗ್ದೇವಿ ವಿದ್ಯಾನಿಕೇತನ ಶಾಲೆ, ಚಿನ್ಮಯ ಶಾಲೆ, ಸುವರ್ಣ ಸೆಂಟ್ರಲ್ ಶಾಲೆ, ಶಂಕರ ವಿದ್ಯಾಲಯ, ಜ್ಞಾನಬೋಧ ಶಾಲೆ.

ಮಾಲೂರು: ಎಸ್‌ಎಫ್‌ಎಸ್ ಶಾಲೆ, ಕೆಎಲ್‌ಇ ಶಾಲೆ, ಎಸ್‌ಆರ್‌ವಿಪಿ ಶಾಲೆ, ಪ್ರಗತಿ ಶಾಲೆ, ಎಸ್‌ಜೆಬಿಎನ್‌ಎಸ್ ಶಾಲೆ.

ಮುಳಬಾಗಲು: ಮ್ಯುಗ್ನೋಲಿಯಾ ಶಾಲೆ, ತಾಯಲೂರಿನ ಸಿಟಿಜನ್ ಶಾಲೆ, ಎಮ್ಮನತ್ತದ ಅಂಜನಾದ್ರಿ ಶಾಲೆ, ಬೈರಕೂರಿನ ವೆಂಕಟೇಶ್ವರ ಬಾಲಕಿಯರ ಶಾಲೆ, ಕುರುಡುಮಲೆ ಕ್ರಾಸ್‌ನ ಕುವೆಂಪು ಗ್ರಾಮೀಣ ಶಾಲೆ.

ಶ್ರೀನಿವಾಸಪುರ: ದೊಡ್ಡಮಡಲದೊಡ್ಡಿಯ ನಿಸರ್ಗ ವಿದ್ಯಾಮಂದಿರ, ಅಡ್ಡಗಲ್‌ನ ಆದರ್ಶ ವಿದ್ಯಾಮಂದಿರ, ಯಲ್ದೂರಿನ ಪ್ರೀತಿ ವಿದ್ಯಾಮಂದಿರ, ಲಕ್ಷ್ಮಿಪುರದ ವಿಆರ್‌ಎಸ್ ಶಾಲೆ, ರಾಯಲ್ಪಾಡಿನ ಆಶ್ರಯ ನೀಲಭಾಗ್ ಶಾಲೆ, ಉನಿಕಿಲಿಯ ವೇಣು ವೆಂಕಟಾದ್ರಿ ಶಾಲೆ, ಜಿಜಿ ವೇಣು ಆಂಗ್ಲ ಶಾಲೆ, ಬೈರಪಲ್ಲಿಯ ಬೈರವೇಶ್ವರ ಶಾಲೆ, ಗೌನಿಪಲ್ಲಿಯ ಸಪ್ತಗಿರಿ ಶಾಲೆ, ತಾಡಿಗೋಳ್‌ನ ಭಗವಾನ್ ಬುದ್ಧ ಶಾಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT