ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರದರ್ಶನ ಖುಷಿ ನೀಡಿದೆ

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): `ಹಿರಿಯ ಬಾಕ್ಸರ್ ವಿಜೇಂದರ್ ಸಿಂಗ್‌ಗಿಂತಲೂ ಉತ್ತಮ ಪ್ರದರ್ಶನ ನೀಡಿ ಬಾಕುವಿನಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದು ಖುಷಿ ನೀಡಿದೆ~ ಎಂದು ವಿಕಾಸ್ ಕೃಷ್ಣನ್ ಹೇಳಿದರು.

ಭಾರತ ತಂಡದಲ್ಲಿ ಸಾಕಷ್ಟು ಹಿರಿಯ ಬಾಕ್ಸರ್‌ಗಳಿದ್ದರೂ ಸಹ, ಈ ಸಲ ಪದಕ ಜಯಿಸಲು ಸಾಧ್ಯವಾಗಿಲ್ಲ. ಆದರೆ, 19 ವರ್ಷದ ವಿಕಾಸ್ ಕೃಷ್ಣನ್ ಮಾತ್ರ ಪದಕ ಜಯಿಸಿದ್ದಾರೆ. ಈ ಸಲ ಭಾರತಕ್ಕೆ ಬಂದ ಏಕೈಕ ಪದಕವು ಇದು.
2 ವರ್ಷಗಳ ಹಿಂದೆ ಒಲಿಂಪಿಯನ್ ವಿಜೇಂದರ್ ಕಂಚಿನ ಪದಕ ಜಯಿಸಿದ್ದರು. ವಿಕಾಸ್ 69 ಕೆ.ಜಿ. ವಿಭಾಗದಲ್ಲಿ ಶುಕ್ರವಾರ ಕಂಚು ಗೆದ್ದಿದ್ದರು.

ಪದಕ ಗೆಲ್ಲುವಲ್ಲಿ ಭಾರತದ ಸ್ಪರ್ಧಿಗಳು ವಿಫಲರಾದರೂ, ಎಲ್. ದೇವೇಂದ್ರೂ ಸಿಂಗ್ (49ಕೆ.ಜಿ.), ಜೈ ಭಗವಾನ್ (60 ಕೆಜಿ) ಹಾಗೂ ಮನೋಜ್ ಕುಮಾರ್ (64 ಕೆ.ಜಿ.) ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿರುವುದಷ್ಟೇ ಭಾರತಕ್ಕೆ ಸಮಾಧಾನ. `ನನಗೆ ಭಾರಿ ಸವಾಲು ಎದುರಾಯಿತು. ಆದರೂ ನಾನು ಉತ್ತಮ ಪ್ರದರ್ಶನ ನೀಡಿದೆ. ಒಲಿಂಪಿಕ್ಸ್‌ಗೂ ಮುನ್ನ ಪದಕ ಜಯಿಸಿರುವುದು ಖುಷಿ ನೀಡಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT