ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ನಿವಾಸದತ್ತ ಪ್ರತಿಭಟನಾ ಮೆರವಣಿಗೆ:ಕೇಜ್ರಿವಾಲ್ ಪೊಲೀಸರ ವಶಕ್ಕೆ

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ರಾಜೀನಾಮೆ ಮತ್ತು ಬಂಧನಕ್ಕೆ ಆಗ್ರಹಿಸಿ  ಶುಕ್ರವಾರ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿವಾಸದತ್ತ ಪ್ರತಿಭಟನಾ ಮೆರವಣಿಗೆ ಹೊರಟಿದ್ದ ಅರವಿಂದ ಕೇಜ್ರಿವಾಲ್ ಮತ್ತು ಇತರ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಖುರ್ಷಿದ್ ಹಾಗೂ ಅವರ ಪತ್ನಿ ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆ, (ಎನ್‌ಜಿಒ) ಜಾಕೀರ್ ಹುಸೇನ್ ಸ್ಮಾರಕ ಪ್ರತಿಷ್ಠಾನದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಲಾಗಿತ್ತು. ಆದರೆ ಖುರ್ಷಿದ್ ದಂಪತಿ ಈ ಆರೋಪವನ್ನು ತಳ್ಳಿ ಹಾಕಿದ್ದು, ಕೇಜ್ರಿವಾಲ್ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ.

ಕೇಜ್ರಿವಾಲ್ ಮತ್ತು ರಾಷ್ಟ್ರೀಯ ವಿಕಲಾಂಗ ಪಕ್ಷದ (ಆರ್‌ವಿಪಿ) 70 ಕಾರ್ಯಕರ್ತರು ಜನಪಥ್‌ನಿಂದ ಪ್ರಧಾನಿ ಅವರ ರೇಸ್‌ಕೋರ್ಸ್ ನಿವಾಸದತ್ತ ಶುಕ್ರವಾರ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು.ಪೊಲೀಸರು ರಾಜಪಥ್‌ನಲ್ಲಿ ಪ್ರತಿಭಟನಾಕಾರರನ್ನು ತಡೆದರು. ಆದರೆ ಅಲ್ಲಿಂದ ತೆರಳಲು ನಿರಾಕರಿಸಿ ಅದೇ ಸ್ಥಳದಲ್ಲಿ ಧರಣಿ ಕುಳಿತ ಪ್ರತಿಭಟನಾಕಾರರನ್ನು ಬಂಧಿಸಿದರು.

ಒಂದು ದಿನ ಮಾತ್ರ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಅನಿರ್ದಿಷ್ಟಾವಧಿವರೆಗೆ ಮುಂದುವರಿಸುವುದಾಗಿ ಕೇಜ್ರಿವಾಲ್ ಈ ಸಂದರ್ಭದಲ್ಲಿ ಘೋಷಿಸಿದರು. ಅಲ್ಲದೇ ಖುರ್ಷಿದ್ ರಾಜೀನಾಮೆ ನೀಡುವವರೆಗೆ ಅಥವಾ ಪ್ರಧಾನಿ ಸಿಂಗ್ ತಮ್ಮನ್ನು ಭೇಟಿ ಮಾಡುವವರೆಗೆ  ಸ್ಥಳ ಬಿಟ್ಟು ತೆರಳುವುದಿಲ್ಲ ಎಂದೂ ಹೇಳಿದರು.

ಈ ಪ್ರತಿಭಟನೆಯನ್ನು ಆರ್‌ವಿಪಿ ಹಮ್ಮಿಕೊಂಡಿತ್ತು. ಕೇಜ್ರಿವಾಲ್ ಅವರು ಪ್ರತಿಭಟನಾ ಕಾರ್ಯಕ್ರಮದ ಅತಿಥಿಯಾಗಿದ್ದರು ಎಂದು ಕೇಜ್ರಿವಾಲ್ ನೇತೃತ್ವದ ಭ್ರಷ್ಟಾಚಾರ ವಿರೋಧಿ ಭಾರತ (ಐಎಸಿ) ಹೇಳಿತ್ತು.
ಆದರೆ ಕೇಜ್ರಿವಾಲ್ ಪ್ರತಿಭಟನಾ ಸ್ಥಳದಲ್ಲಿ ಘೋಷಣೆ ಮಾಡಿದ ಬಳಿಕ ಐಎಸಿ ಎಲ್ಲರಿಗೂ ಸಂದೇಶ ಕಳುಹಿಸಿ, ಪ್ರತಿಭಟನೆಯಲ್ಲಿ ಕೈ ಜೋಡಿಸುವಂತೆ ಮನವಿ ಮಾಡಲು ಆರಂಭಿಸಿತು.

ಪ್ರಧಾನಿ ಭೇಟಿಗೆ ಅವಕಾಶ ನೀಡುವಂತೆ ತಾವು ಮನವಿ ಮಾಡಿದ್ದೆವು. ಆದರೆ ಪ್ರಧಾನಿ ಕಚೇರಿ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT