ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಸೂಚನೆ ಮಲಹೊರುವ ಪದ್ಧತಿ ತೊಲಗಿಸಿ

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

 ನವದೆಹಲಿ (ಐಎಎನ್‌ಎಸ್): ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ಆರು ತಿಂಗಳೊಳಗೆ ನಿರ್ಮೂಲನೆಗೊಳಿಸಬೇಕು ಎಂದು ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಶುಕ್ರವಾರ ರಾಜ್ಯಗಳಿಗೆ ಸೂಚಿಸಿದ್ದಾರೆ.

ಸಾಮಾಜಿಕ ನ್ಯಾಯ ಖಾತೆಯ ರಾಜ್ಯ ಸಚಿವರ ಎರಡು ದಿನಗಳ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, `ಸ್ವಾತಂತ್ರ್ಯ ಲಭಿಸಿ 64 ವರ್ಷಗಳ ನಂತರವೂ ತಲೆ ಮಲೆ ಮಲ ಹೊರುವ  ಅತ್ಯಂತ ಹೀನ ಪದ್ಧತಿ ರೂಢಿಯಲ್ಲಿದೆ.ಇದು ನಮ್ಮ ಅಭಿವೃದ್ಧಿ ಪ್ರಕ್ರಿಯೆಗೆ ಕಪ್ಪು ಚುಕ್ಕೆ~ ಎಂದರು.

`ಮುಂದಿನ ಆರು ತಿಂಗಳಲ್ಲಿ ರಾಷ್ಟ್ರದ ಎಲ್ಲಾ ಮೂಲೆಗಳಿಂದಲೂ ಈ ಅನಿಷ್ಠ ಪದ್ಧತಿ ತೊಲಗಿಸಲು ನೀವು ಇಂದು ಪ್ರಮಾಣ ಮಾಡಬೇಕು. ಒಣ ಶೌಚಗೃಹವನ್ನು ಪರಿವರ್ತಿಸುವ ಕಾರ್ಯ ಒಮ್ಮೆಗೇ ಪೂರ್ಣವಾಗಬೇಕು~ ಎಂದರು.

ದಲಿತರು, ಬುಡಕಟ್ಟು ಜನಾಂಗದವರು, ಇತರ ಹಿಂದುಳಿದ ಜನಾಂಗದ `ನಮ್ಮ ಸೋದರಿಯರು ಮತ್ತು ಸೋದರರಿಗೆ~ ನೀಡುವ ನೆರವಿನಿಂದ ಒಟ್ಟಾರೆ ಅಭಿವೃದ್ಧಿಯಲ್ಲಿ ಸರ್ಕಾರದ ಸಫಲತೆ ಅಳೆಯಲಾಗುವುದು ಎಂದರು.

ತಲೆ ಮೇಲೆ ಮಲ ಹೊರಲು ದಲಿತ ಅಥವಾ ಬುಡಕಟ್ಟು ಜನಾಂಗದವರನ್ನು ನೇಮಿಸುವುದು  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯಿದೆಯನ್ವಯ ಶಿಕ್ಷಾರ್ಹ ಅಪರಾಧ ಎಂದು ಈಚೆಗಷ್ಟೆ ಗೃಹ ಸಚಿವಾಲಯವು ರಾಜ್ಯಗಳಿಗೆ ನೀಡಿರುವ ಸಲಹೆ-ಮಾರ್ಗದರ್ಶನದಲ್ಲಿ ತಿಳಿಸಿದ್ದು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಪ್ರಧಾನಿ ರಾಜ್ಯಗಳಿಗೆ ಕರೆ ನೀಡಿದರು.

ಈಗಲೂ ತಲೆ ಮೇಲೆ ಮಲ  ಹೊರುವ ಕೆಲಸ ಮಾಡುವವರನ್ನು ಗುರುತಿಸಲು ಸಾಮಾಜಿಕ ನ್ಯಾಯ ಸಚಿವಾಲಯವು ಹೊಸದಾಗಿ ಸಮೀಕ್ಷೆ ನಡೆಸಲು ಆಲೋಚಿಸಿದೆ ಎಂದು ಸಾಮಾಜಿಕ ನ್ಯಾಯ ಖಾತೆ ಸಚಿವ ಮುಕುಲ್ ವಾಸ್ನಿಕ್ ಹೇಳಿದರು.

ಗ್ರಾಮ ಅಭಿವೃದ್ಧಿ ಯೋಜನೆ ವಿಸ್ತರಣೆಗೆ ಚಿಂತನೆ: ಪ್ರಧಾನಿ
ಪರಿಶಿಷ್ಟ ಜಾತಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಪ್ರಾಯೋಗಿಕ ಯೋಜನೆಯನ್ನು ಹೆಚ್ಚಿನ ಪ್ರದೇಶಗಳಿಗೆ ವಿಸ್ತರಣೆ ಮಾಡುವ ಬಗ್ಗೆ ಸರ್ಕಾರ ಆಲೋಚಿಸುತ್ತಿದೆ ಎಂದುಮನಮೋಹನ್ ಸಿಂಗ್  ಹೇಳಿದರು.

`ಪ್ರಾಯೋಗಿಕ ಯೋಜನೆ ಪ್ರಧಾನ್ ಮಂತ್ರಿ ಆದರ್ಶ ಗ್ರಾಮ ಯೋಜನೆಯನ್ನು ಕೇಂದ್ರ ಸರ್ಕಾರವು ಐದು ರಾಜ್ಯಗಳಲ್ಲಿ- ಅಸ್ಸಾಂ, ಬಿಹಾರ್, ಹಿಮಾಚಲ ಪ್ರದೇಶ್, ರಾಜಸ್ತಾನ್‌ಮತ್ತು ತಮಿಳುನಾಡಿನಲ್ಲಿ ಆರಂಭಿಸಿದೆ. ಯೋಜನೆಯಡಿ ಪರಿಶಿಷ್ಟ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿರುವ 1000 ಗ್ರಾಮಗಳ ಸಮಗ್ರ ಅಭಿವೃದ್ಧಿ ಮಾಡಲಾಗುವುದು~ ಎಂದು ಅವರು ತಿಳಿಸಿದರು.

`ಯೋಜನೆಗೆ ಉತ್ತಮ ಪ್ರತಿಕ್ರಿಯೆ ಲಭಿಸಿದಲ್ಲಿ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಈ ಯೋಜನೆ ವಿಸ್ತರಿಸುವ ಬಗ್ಗೆ ಆಲೋಚಿಸಲಾಗುವುದು~ ಎಂದರು.ಇತರ ಹಿಂದುಳಿದ ಜಾತಿಯ ವಿದ್ಯಾರ್ಥಿಗಳಿಗೆ ಆದಾಯ ಮಿತಿ ಮತ್ತು ಸ್ಕಾಲರ್‌ಶಿಪ್ ಮೊತ್ತವನ್ನು ಪರಿಷ್ಕರಿಸಲೂ ಸರ್ಕಾರ ಉದ್ದೇಶಿಸಿದೆ ಎಂದ ಅವರು ಅಂಗವಿಕಲರಿಗಾಗಿ ಹೊಸ ಕಾನೂನು ಜಾರಿಗೆ ತರಲೂ ಆಲೋಚಿಸಿದೆ ಎಂದು ತಿಳಿಸಿದರು.

`ಈ ಸಂಬಂಧ ಸಾಮಾಜಿಕ ನ್ಯಾಯ ಸಚಿವಾಲಯದ ತಜ್ಞರ ತಂಡವು ಹೊಸ ಕಾನೂನಿನ ಕರಡು ರೂಪಿಸುತ್ತಿದೆ. ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿದ ಬಳಿಕ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು~ ಎಂದು ಸಿಂಗ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT