ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಪಂಚದ ಹಿರಿಯಜ್ಜಿ ನಿಧನ

Last Updated 1 ಫೆಬ್ರುವರಿ 2011, 15:50 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): ವಿಶ್ವದಲ್ಲೇ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅಮೆರಿಕದ ಯೂನೈಸ್ ಸ್ಯಾನ್‌ಬಾರ್ನ್ (115) ಟೆಕ್ಸಾಸ್‌ನಲ್ಲಿ ಸೋಮವಾರ ಬೆಳಿಗ್ಗೆ ನಿಧನರಾದರು.

ಪ್ರಪಂಚದ ಹಿರಿಯ ಮಹಿಳೆ  ಎನಿಸಿದ್ದ ವೆಸ್ಟ್‌ಇಂಡೀಸ್‌ನ   ಯೂಜಿನ್ ಬ್ಲಾಂಚಾರ್ಡ್ 2010  ರಲ್ಲಿ ಮರಣ ಹೊಂದಿದ ನಂತರ  ಸ್ಯಾನ್‌ಬಾರ್ನ್ ಆ ಪಟ್ಟ ಪಡೆದಿದ್ದರು. ಕಳೆದ ಜುಲೈ 20ರಂದು 115ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಆಕೆ ಹಲವು ವರ್ಷಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು.

ಮೂರು ಬಾರಿ ಮದುವೆಯಾಗಿದ್ದ ಈ ಹಿರಿಯಜ್ಜಿಯ ಕೊನೆಯ ಪತಿ 1979ರಲ್ಲಿ ಮರಣ ಹೊಂದಿದ್ದರು. ತನ್ನ ಏಕಮಾತ್ರ ಪುತ್ರಿಯೊಂದಿಗೆ ಅವರು ವಾಸಿಸುತ್ತಿದ್ದರು. ಸ್ಯಾನ್‌ಬಾರ್ನ್ ನಿಧನದಿಂದ ಹಿರಿಯಜ್ಜಿಯ ಪಟ್ಟ ಜಾರ್ಜಿಯಾದ     114ರ ಹರೆಯದ ಬೆಸ್ಸೆ ಕೂಪರ್ ಪಾಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT