ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮುಖ ಸ್ಪರ್ಧಿಗಳಿಂದ ಪೈಪೋಟಿ ನಿರೀಕ್ಷೆ

Last Updated 12 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಖಿಲ ಭಾರತ ಅಥ್ಲೆಟಿಕ್ ಫೆಡರೇಷನ್ ಹಾಗೂ ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಆಶ್ರಯದಲ್ಲಿ 9ನೇ ರಾಷ್ಟ್ರೀಯ ಯುವ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಉದ್ಯಾನ ನಗರಿಯಲ್ಲಿ ಜುಲೈ 13ರಿಂದ 15ರವರೆಗೆ ನಡೆಯಲಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾಗಲಿರುವ ಮೂರು ದಿನಗಳ ಈ ಚಾಂಪಿಯನ್‌ಷಿಪ್‌ನಲ್ಲಿ 20 ರಾಜ್ಯಗಳ 459 ಅಥ್ಲೀಟ್‌ಗಳು ಪೈಪೋಟಿ ನಡೆಸಲಿದ್ದಾರೆ. ಇವರಲ್ಲಿ 168 ಬಾಲಕಿಯರೂ ಸೇರಿದ್ದಾರೆ. ಕರ್ನಾಟಕದಿಂದ 56 ಅಥ್ಲೀಟ್‌ಗಳು ಕಣಕ್ಕಿಳಿಯುತ್ತಿದ್ದಾರೆ.

ಈ ಕೂಟದಲ್ಲಿ 16ರಿಂದ 18 ವರ್ಷ ವಯಸ್ಸಿನೊಳಗಿನ ಅಥ್ಲೀಟ್‌ಗಳಿಗೆ ಮಾತ್ರ ಅವಕಾಶವಿದೆ. ಒಟ್ಟು 20 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಕಳೆದ ಬಾರಿ ರಾಂಚಿಯಲ್ಲಿ ನಡೆದ ಕೂಟದಲ್ಲಿ ಹರಿಯಾಣ ಸಮಗ್ರ ಪ್ರಶಸ್ತಿ ಪಡೆದಿತ್ತು. ಕೇರಳ ನಂತರದ ಸ್ಥಾನ ಗಳಿಸಿತ್ತು.

`ಈ ಚಾಂಪಿಯನ್‌ಷಿಪ್ ಉತ್ತರಪ್ರದೇಶದಲ್ಲಿ ನಡೆಯಬೇಕಿತ್ತು. ಆದರೆ ಪರಸ್ಪರ ಹೊಂದಾಣಿಕೆಯಿಂದ ಈ ಅವಕಾಶ ನಮಗೆ ಲಭಿಸಿದೆ. ಅವರು ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಆಯೋಜಿಸಲಿದ್ದಾರೆ. ನಿಗದಿತ ಕಾರ್ಯಕ್ರಮದ ಪ್ರಕಾರ ಈ ಕೂಟವನ್ನು ನಾವು ಆಯೋಜಿಸಬೇಕಿತ್ತು. ಈ ಕೂಟವನ್ನು ಯಶಸ್ವಿಯಾಗಿ ಆಯೋಜಿಸುವ ವಿಶ್ವಾಸವಿದೆ. ನಾವು ಈ ಹಿಂದೆ 2005 ಹಾಗೂ 2007ರಲ್ಲಿ ಈ ಚಾಂಪಿಯನ್ ಆಯೋಜಿಸಿದ್ದೆವು~ ಎಂದು ಕರ್ನಾಟಕ ಅಥ್ಲೆಟಿಕ್ ಸಂಸ್ಥೆಯ ಕಾರ್ಯದರ್ಶಿ ಸತ್ಯನಾರಾಯಣ ಹೇಳಿದರು.

ಕೂಟದಲ್ಲಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆಗುವ ಅಥ್ಲೀಟ್‌ಗಳಿಗೆ ತಲಾ 11 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಬೆಂಗಳೂರು ಗ್ರಾಮೀಣ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಎ.ಮುನಿಸಂಜೀವಪ್ಪ ಪ್ರಕಟಿಸಿದರು.

`ಚಾಂಪಿಯನ್‌ಷಿಪ್ ವೇಳೆ ರಾಷ್ಟ್ರೀಯ ಉದ್ದೀಪನ ಮದ್ದು ನಿಯಂತ್ರಣ (ನಾಡಾ) ಘಟಕವು ಮದ್ದು ಪರೀಕ್ಷೆ ನಡೆಸಲಿದೆ. ಅದಕ್ಕಾಗಿ ನಾಡಾದ ನಾಲ್ಕು ಸಿಬ್ಬಂದಿ ಆಗಮಿಸಲಿದ್ದಾರೆ~ ಎಂದು ಭಾರತ ಅಥ್ಲೆಟಿಕ್ ಫೆಡರೇಷನ್‌ನ ಜಂಟಿ ಕಾರ್ಯದರ್ಶಿ ಹಾಗೂ ತಾಂತ್ರಿಕ ಸಮಿತಿಯ ಮುಖ್ಯಸ್ಥ ಬಿ.ಕೆ.ವಾಸ್ತವ ತಿಳಿಸಿದರು.

ಕರ್ನಾಟಕ ತಂಡ ಇಂತಿದೆ: 

ಬಾಲಕರು: ಎಂ.ಎಂ.ಶಿವಕುಮಾರ್ (100 ಮೀ, 200 ಮೀ., ರಿಲೇ), ರಿತೇಶ್ (100 ಮೀ., ರಿಲೇ), ಆರ್.ರಾಕೇಶ್ (400 ಮೀ, 800 ಮೀ., ರಿಲೇ), ಎನ್.ವಿಜಯ್ (800 ಮೀ.), ಸಾಯಿರಾಜ್ (ಡಿಸ್ಕಸ್ ಥ್ರೋ, ಶಾಟ್‌ಪಟ್), ಜಿ.ಗೌತಮ್ (ಡಿಸ್ಕಸ್ ಥ್ರೋ), ಜೆಸ್ಸಿ ಸಂದೇಶ್, ಪಿ.ಎಂ.ಮಂಜುನಾಥ್ (ಹೈಜಂಪ್), ಮೋಹಿತ್ ಕುಮಾರ್, ಸೂರಜ್ ಮಂಡಲ (ಲಾಂಗ್   ಜಂಪ್), ಲಕ್ಷ್ಮಿಕಾಂತ್ ಪಟೇಲ್, ಸೂರಜ್ (3000 ಮೀ.), ರಾಹುಲ್ ಅಷ್ಟಗಿ, ಮೋಹಾಂತೇಶ್ ಟಿ.ಬೆನಕಟ್ಟಿ (10000 ಮೀ. ನಡಿಗೆ), ಗೋವಿಸ್ವಾಮಿ, ಸಿದ್ದಾರ್ಥ್ ಎಸ್.ಪುತ್ರನ್ (ಹ್ಯಾಮರ್ ಥ್ರೋ), ಸಿದ್ಧಾರ್ಥ್, ಅಲ್ನ್‌ಸ್ಟಾನ್ ಕಾರಿಯಾ (ಟ್ರಿಪಲ್ ಜಂಪ್), ಜೇಸನ್ ಬಿಯುಬೆನ್ ಸಾಲಿನ್ಸ್ (ಶಾಟ್‌ಪುಟ್), ಫಕೀರಪ್ಪ ವಿ.ಬಾಂಗಿ (110ಮೀ. ಹರ್ಡಲ್ಸ್, 400 ಮೀ. ಹರ್ಡಲ್ಸ್), ಸಿ.ಶಿವಕುಮಾರ (100 ಮೀ.ಹರ್ಡಲ್ಸ್), ಸಚಿನ್‌ಗೌಡ ಯು ಪಾಟೀಲ್, ಸಿ.ನವೀನ್ ಗೌಡ (1500 ಮೀ.), ಶರತ್ ಪೂಜಾರಿ, ಸಮರ್ಥ್ ಜಿ.ಹೆಗಡೆ (ಪೋಲ್  ವಾಲ್ಟ್), ಎನ್.ಮಂಜುನಾಥ್, ವಿ.ಎನ್. ವಿನೋದ್ (ಅಕ್ಟಾಥ್ಲಾನ್), ಎ.ಕೆ.ರಘು (400 ಮೀ., 400 ಮೀ. ಹರ್ಡಲ್ಸ್, ರಿಲೇ.),   ಕಾರ್ತಿಕ್, ಎಸ್.ಬಿನೋದ್ ಮುಂಡಾ (ಜಾವೆಲಿನ್ ಥ್ರೋ), ಕೆ.ಆಶ್ರಿತ್ ನಂಜಪ್ಪ (2000 ಮೀ.ಸ್ಟೀಪಲ್ ಚೇಸ್) ಹಾಗೂ ಸಲೀಮ್ (200 ಮೀ.ಹಾಗೂ ರಿಲೇ).

ಬಾಲಕಿಯರು: ಮೇಘನಾ ಶೆಟ್ಟಿ (100 ಮೀ., 100ಮೀ. ಹರ್ಡಲ್ಸ್, ರಿಲೇ), ಎಸ್.ಎಸ್.ನಿಶ್ಚಿತಾ (100 ಮೀ., 200 ಮೀ., ರಿಲೇ), ಕೆ.ಜಿ.ಸೌಜನ್ಯಾ (100 ಮೀ. ಹರ್ಡಲ್ಸ್, 200  ಮೀ., ರಿಲೇ), ವಿ.ಪ್ರಿಯಾಂಕಾ (800 ಮೀ.), ಕೆ.ಎ.ಅರ್ಚನಾ (800 ಮೀ. 400 ಮೀ., ರಿಲೇ), ಸೃಷ್ಟಿ ಸುನಿಲ್ (ಹೈಜಂಪ್, ಲಾಂಗ್ ಜಂಪ್), ಜೀನ್ ಲಸ್ವಿ ಆಲಿವೇರಾ (ಹೈಜಂಪ್), ಕೆ.ದೀಕ್ಷಾ, ಎ.ಡಿ.ಚೇತನಾ (ಜಾವೆಲಿನ್), ಜೆ.ಎಸ್.ಪ್ರಿಯಾಂಕಾ (ಡಿಸ್ಕಸ್, ಶಾಟ್‌ಪಟ್), ಎಂ.ಎಸ್.ನವ್ಯಾ ಶೆಟ್ಟಿ (ಡಿಸ್ಕಸ್), ಕೆ.ಅನುಷಾ, ಸೌಮ್ಯಾ (3000 ಮೀ., 1500 ಮೀ.), ಪ್ರಣೀತಾ ಪ್ರದೀಪ್ (ಲಾಂಗ್ ಜಂಪ್, ಟ್ರಿಪಲ್ ಜಂಪ್), ವೈಶಾಲಿ ಸೋಮಯ್ಯ (400 ಮೀ. ಹರ್ಡಲ್ಸ್, ಟ್ರಿಪಲ್ ಜಂಪ್), ಜಿ.ಕೆ.ವಿಜಯಕುಮಾರಿ (400 ಮೀ., ರಿಲೇ), ಎಸ್.ಆರ್.ಪ್ರತೀಕ್ಷಾ, ಎಂ.ಎನ್.ಅಖಿಲಾ (5000 ಮೀ. ನಡಿಗೆ), ಪ್ರೀತಿ (ಪೋಲ್ ವಾಲ್ಟ್), ಪುಣ್ಯಶ್ರೀ ಎಸ್.ರೈ, ಚೈತ್ರಾ (ಹ್ಯಾಮರ್ ಥ್ರೋ), ಅಭಿಮತಿ (ಹೆಪ್ಟಾಥ್ಲಾನ್), ರಂಜನಾ ನಾರಾಯಣ ಬದ್ರಿ (ಶಾಟ್‌ಪಟ್) ಹಾಗೂ ಎ.ಗಾಮಿನಿ (400 ಮೀ. ಹರ್ಡಲ್ಸ್).

ತಂಡದ ಅಧಿಕಾರಿಗಳು: ಎಸ್.ವಿ.ರಾಮಚಂದ್ರ (ಮ್ಯಾನೇಜರ್-ಬಾಲಕರ ವಿಭಾಗ), ವಿ.ಆರ್.ಬೀಡು (ಕೋಚ್-ಬಾಲಕರು), ಅನಂದ್ ಕುಮಾರ್ (ಮ್ಯಾನೇಜರ್-ಬಾಲಕಿಯರ ವಿಭಾಗ), ಎಸ್.ಕೃಷ್ಣಮೂರ್ತಿ (ಕೋಚ್-ಬಾಲಕಿಯರು).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT