ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗಕ್ಕೆ ಪ್ರಾಣಿ ಹಿಂಸೆ ತಡೆಗೆ ಕಾಯ್ದೆ

Last Updated 20 ಫೆಬ್ರುವರಿ 2011, 16:05 IST
ಅಕ್ಷರ ಗಾತ್ರ

ನವದೆಹಲಿ, (ಪಿಟಿಐ): ಸಂಸ್ಥೆಗಳು ಮತ್ತು ವ್ಯಕ್ತಿಗಳು ಪ್ರಾಣಿಗಳ ಮೇಲೆ ನಡೆಸುವ ಹಿಂಸಾತ್ಮಕ ಪ್ರಯೋಗವನ್ನು ನಿಯಂತ್ರಿಸುವ ಸಲುವಾಗಿ ಪ್ರಾಣಿ ಕಲ್ಯಾಣ ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.

ಎಐಐಎಂಎಸ್‌ನ ಆವರಣದೊಳಗೆ ಪ್ರಯೋಗಕ್ಕಾಗಿ ಪಂಜರದೊಳಗೆ ಇರಿಸಲಾಗಿರುವ ಪ್ರಾಣಿಗಳ ಕುರಿತು ಪಮೇಲಾ ಆ್ಯಂಡರ್‌ಸನ್ ವ್ಯಕ್ತಪಡಿಸಿದ ಕಳವಳವೂ ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲು ಕಾರಣ   ಎನ್ನಲಾಗಿದೆ.

ಈ ಮಸೂದೆಗೆ ಅಂಗೀಕಾರ ದೊರೆತ ನಂತರ, ಪ್ರಾಣಿಗಳ ಮೇಲೆ ಪ್ರಯೋಗ ನಡೆಸುವುದನ್ನು ನಿಯಂತ್ರಿಸುವುದು ಹಾಗೂ ಮೇಲ್ವಿಚಾರಣೆ ನಡೆಸುವ ಸಲುವಾಗಿ ಸಮಿತಿಯೊಂದನ್ನು ರೂಪಿಸಲಾಗುತ್ತದೆ. ಜೊತೆಗೆ ಪ್ರಯೋಗದ ಹೆಸರಿನಲ್ಲಿ ಪ್ರಾಣಿಗಳಿಗೆ ಅನಗತ್ಯ ಹಿಂಸೆ, ನೋವು ನೀಡದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಮಿತಿ ಹೊಂದಿದೆ.

ಕೇಂದ್ರ ಮೃಗಾಲಯ ಪ್ರಾಧಿಕಾರ, ಭಾರತೀಯ ಪಶು ವೈದ್ಯಕೀಯ ಮಂಡಳಿಯ ಪ್ರತಿನಿಧಿಗಳು, ಪ್ರಾಣಿ ಕಲ್ಯಾಣ ಸಂಸ್ಥೆಯ ಸದಸ್ಯರು, ಕೆಲವು ಅಧಿಕಾರಿಗಳು ಮತ್ತು ಅಧಿಕಾರಿಗಳೇತರರು ಈ ಸಮಿತಿಯಲ್ಲಿ ಸೇರಿದ್ದು ಪ್ರಾಣಿಗಳ ಮೇಲೆ ನಡೆಸುವ ಪ್ರಯೋಗಗಳು ಮಾನವೀಯತೆಯಿಂದ ಕೂಡಿರುವಂತೆ ನೋಡಿಕೊಳ್ಳುವ ಅಧಿಕಾರವನ್ನು ಈ ಸಮಿತಿ ಹೊಂದಿದೆ.

ಕಾಯ್ದೆ ರೂಪುಗೊಂಡ ನಂತರ ಪ್ರಾಣಿಗಳ ಮೇಲೆ ಹಿಂಸಾತ್ಮಕ ಪ್ರಯೋಗ ನಡೆಸುವವರು ಶಿಕ್ಷೆಗೆ ಅರ್ಹರಾಗುತ್ತಾರಲ್ಲದೆ ಭಾರಿ ದಂಡವನ್ನು ತೆರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT