ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪ್ರಯೋಗದ ಬಳಿಕ ಪ್ಲಾಸ್ಟಿಕ್ ನೋಟು'

ಚಿನ್ನದ ನಾಣ್ಯ ಮಾರಾಟ; ಬ್ಯಾಂಕುಗಳಿಗೆ ನಿರ್ಬಂಧ ಇಲ್ಲ
Last Updated 16 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮಂಗಳೂರು: `ದೇಶದಲ್ಲಿ ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಕೆಲವೆಡೆ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು. ಈ ಪ್ರಯೋಗ ಯಶಸ್ವಿಯಾದರೆ ಮಾತ್ರ ಪ್ಲಾಸ್ಟಿಕ್ ನೋಟುಗಳನ್ನು ದೇಶದಾದ್ಯಂತ ಚಲಾವಣೆಗೆ ತರುತ್ತೇವೆ' ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಡೆಪ್ಯುಟಿ ಗವರ್ನರ್ ಕೆ.ಸಿ.ಚಕ್ರವರ್ತಿ ತಿಳಿಸಿದರು.

ಕಾರ್ಪೊರೇಷನ್ ಬ್ಯಾಂಕಿನ ಕೇಂದ್ರ ಕಚೇರಿಯ ವಜ್ರಮಹೋತ್ಸವ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ `ಪುರಭವನ ಸಭೆ' ಕಾರ್ಯಕ್ರಮದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಸಭೆಯಲ್ಲಿ ಗ್ರಾಹಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, `ಹಣದುಬ್ಬರ ಮತ್ತು ಬಡ್ಡಿದರಕ್ಕೆ ಪರಸ್ಪರ ಸಂಬಂಧವಿದೆ. ಹಣದುಬ್ಬರ ಇಳಿಕೆಯಾದರೆ ಬಡ್ಡಿದರವೂ ಕಡಿಮೆಯಾಗುತ್ತದೆ' ಎಂದು ಅಭಿಪ್ರಾಯಪಟ್ಟರು. 

`ಬ್ಯಾಂಕ್‌ಗಳ ಸೇವೆ ಪಾರದರ್ಶಕವಾಗಿರಬೇಕು. ಒಬ್ಬ ಗ್ರಾಹಕನಿಗೆ ಒಂದು ನೀತಿ ಇನ್ನೊಬ್ಬನಿಗೆ ಇನ್ನೊಂದು ನೀತಿ ಅನುಸರಿಸಲು `ಆರ್‌ಬಿಐ'      ಅವಕಾಶ ನೀಡದು ಎಂದು ಸ್ಪಷ್ಟಪಡಿ  ಸಿದರು.

ಚಿನ್ನದ ನಾಣ್ಯ ಮಾರಾಟ
ಬ್ಯಾಂಕ್‌ಗಳ ಮೂಲಕ ಚಿನ್ನದ ನಾಣ್ಯವನ್ನು ಮಾರುವ ವ್ಯವಸ್ಥೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಉದ್ಯಮಿ ಸುಧೀರ್ ಘಾಟೆ, `ಚಿನ್ನದ ಮೇಲೆ ಹೂಡಿಕೆ ಮಾಡಬಾರದು ಎಂದು ಸ್ವತಃ ಕೇಂದ್ರ ಹಣಕಾಸು ಸಚಿವರೇ ಅಭಿಪ್ರಾಯಪಟ್ಟಿದ್ದಾರೆ. ಆದರೂ, ಕೆಲವು ಬ್ಯಾಂಕುಗಳು ಅನುತ್ಪಾದಕವಾದ ಚಿನ್ನದ ಮೇಲಿನ ಹೂಡಿಕೆಯನ್ನು ಉತ್ತೇಜಿಸುತ್ತಿವೆ. ತಿಂಗಳಿಗೆ ಇಂತಿಷ್ಟು ಚಿನ್ನದ ನಾಣ್ಯ ಮಾರಾಟ ಮಾಡಲೇ ಬೇಕೆಂಬ ಒತ್ತಡವನ್ನು ಪ್ರಬಂಧಕರಿಗೆ ಹೇರುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.

`ಈ ಬಗ್ಗೆ ಆರ್‌ಬಿಐ ಯಾವುದೇ ನಿರ್ಬಂಧ ಹೇರಲು ಸಾಧ್ಯವಿಲ್ಲ. ಆದರೆ ಬ್ಯಾಂಕ್‌ಗಳಲ್ಲಿ ಚಿನ್ನದ ನಾಣ್ಯ ಮಾರಾಟ ಸರಿಯಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ' ಎಂದು ಚಕ್ರವರ್ತಿ ಪ್ರತಿಕ್ರಿಯಿಸಿದರು.

ಬ್ಯಾಂಕ್‌ಗಳು ಕೆಲವು ಸೇವೆಗಳನ್ನು ಹೊರಗುತ್ತಿಗೆ ನೀಡುತ್ತಿವೆ. ಈ ಸಂದರ್ಭದಲ್ಲಿ ಗ್ರಾಹಕರ ವಿಳಾಸ ಹಾಗೂ ವೈಯಕ್ತಿಕ ವಿವರಗಳನ್ನು ಖಾಸಗಿ ಸಂಸ್ಥೆಗಳಿಗೆ ಒದಗಿಸುವುದು ಸರಿಯಲ್ಲ ಎಂದು ಮಂಗಳೂರಿನ ಮನೋಹರ ಪಾಲ್ಕೆ ಅವರು ದೂರಿದರು.

`ಬ್ಯಾಂಕಿಂಗ್ ಕೋಡ್ ಅಂಡ್ ಸ್ಟ್ಯಾಂಡರ್ಡ್ ಬೋರ್ಡ್ ಆಫ್ ಇಂಡಿಯಾ' ಅಧ್ಯಕ್ಷ ಎ.ಸಿ.ಮಹಾಜನ್‌ಬ್ಯಾಂಕಿಂಗ್ ಒಂಬುಡ್ಸ್‌ಮನ್ ಪಳನಿಸ್ವಾಮಿ, ಕಾರ್ಪೊರೇಷನ್ ಬ್ಯಾಂಕ್ ಅಧ್ಯಕ್ಷ ಅಜಯ್ ಕುಮಾರ್, ವಿಜಯ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಉಪೇಂದ್ರ ಕಾಮತ್, ಸಿಂಡಿಕೇಟ್ ಬ್ಯಾಂಕ್ ಅಧ್ಯಕ್ಷ  ಎಂ.ಜಿ.ಸಾಂಘ್ವಿ, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಂ ಭಟ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT