ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪ್ರಳಯ- ಕಟ್ಟು ಕತೆ'

Last Updated 19 ಡಿಸೆಂಬರ್ 2012, 20:03 IST
ಅಕ್ಷರ ಗಾತ್ರ

ಬೆಂಗಳೂರು: `ಪ್ರಳಯವಾಗುತ್ತದೆ ಎಂಬುದು ಜನರನ್ನು ಮರುಳು ಮಾಡಲು ಕಟ್ಟಿರುವ ಕಟ್ಟುಕತೆ. ಜನತೆ ಇದನ್ನು ನಂಬಬಾರದು' ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಗೌರವ ಕಾರ್ಯದರ್ಶಿ ಡಾ.ವಸುಂಧರಾ ಭೂಪತಿ ಹೇಳಿದರು.
ನಗರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ನಗರ ದಕ್ಷಿಣ ಜಿಲ್ಲಾ ಸಮಿತಿಯು ಬುಧವಾರ ಆಯೋಜಿಸಿದ್ದ `ಪ್ರಳಯ, ಮೂಢನಂಬಿಕೆ ಮತ್ತು ಮೌಢ್ಯಗಳ ಜನ ಸ್ಪಂದನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಪ್ರಳಯ ಮತ್ತು ಮೂಢನಂಬಿಕೆಯ ವಿಷಯಗಳು ಟಿವಿ ಚಾನೆಲ್‌ಗಳಿಗೆ ವ್ಯಾಪಾರದ ಸರಕಾಗಿವೆ. ಜ್ಯೋತಿಷದ ಹೆಸರಿನಲ್ಲಿ ದಿನವಿಡೀ ಮೌಢ್ಯ ಬಿತ್ತುವುದೇ ಚಾನೆಲ್‌ಗಳ ಕೆಲಸವಾಗಿದೆ. ಕೋಟಿ ಕೋಟಿ ರೂಪಾಯಿ ಆದಾಯವಿರುವ ಈ ವಿಷಯಗಳನ್ನು ಬಿಡಲು ಚಾನೆಲ್‌ಗಳಿಗೆ ಮನಸ್ಸಿಲ್ಲ' ಎಂದು ಅವರು ಹೇಳಿದರು.

`ಶುಕ್ರವಾರ (ಡಿ.21) ಪ್ರಳಯವಾಗುತ್ತದೆ ಎಂಬುದು ಶುದ್ಧ ಸುಳ್ಳು. ಭೂಮಿಯ ಆಯಸ್ಸು ಇನ್ನೂ ಸಾವಿರಾರು ವರ್ಷಗಳಿದೆ. ಚಾನೆಲ್‌ಗಳು ಅಬ್ಬರಿಸುವ ಕಾರಣಕ್ಕೆ ಪ್ರಳಯವಾಗುವುದಿಲ್ಲ. ಪ್ರಳಯದ ಬಗ್ಗೆ ಜನರಿಗೆ ಭಯಬೇಡ' ಎಂದು ಅವರು ನುಡಿದರು. ಕಾರ್ಯಕ್ರಮದಲ್ಲಿ ಲೇಖಕ ಎ.ಎಸ್. ನಟರಾಜ್, ಪರಿಷತ್‌ನ ನಗರ ದಕ್ಷಿಣ ಜಿಲ್ಲಾ ಸಮಿತಿಯ ಗೌರವ ಕಾರ್ಯದರ್ಶಿ ಟಿ.ಬಿ.ನರಹರಿ ಮತ್ತಿತರರು ಉಪಸ್ಥಿತದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT