ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವರ್ಗ 2ಎಗೆ ಸೇರಿಸಿ: ಆದಿ ಬಣಜಿಗರ ಆಗ್ರಹ

Last Updated 20 ಜುಲೈ 2013, 7:01 IST
ಅಕ್ಷರ ಗಾತ್ರ

ಗದಗ: ಆದಿ ಬಣಜಿಗ ಪಂಗಡವನ್ನು ಪ್ರವರ್ಗ 2ಎ ಸೇರಿಸುವಂತೆ ಒತ್ತಾಯಿಸಿ ಆದಿ ಬಣಜಿಗ ಸಂಘ ಸರ್ಕಾರವನ್ನು ಆಗ್ರಹಿಸಿದೆ.ಈ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಎನ್.ನೀಲಪ್ಪಗೌಡ್ರ, ಆದಿ ಬಣಜಿಗ ಸಮಾಜವು ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ರಂಗದಲ್ಲಿ ಹಿಂದುಳಿದಿದೆ.

ಕಾನೂನಿನ ಚೌಕಟ್ಟಿನಲ್ಲಿ ಸಮಾಜದ ಸಮಗ್ರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ಎಸ್.ಸಿದ್ಧಗಂಗಯ್ಯ ನೇತೃತ್ವದ ಆಯೋಗ ರಚನೆಯಾಗಿತ್ತು ಅದರಂತೆ 2005 ರಲ್ಲಿ ರಾಜ್ಯದಾದ್ಯಂತ ಸಮೀಕ್ಷೆ ಮಾಡಿ ಈ ಜನಾಂಗವನ್ನು 2ಎ ಮೀಸಲಾತಿ ಅಡಿಯಲ್ಲಿ ಹಿಂದುಳಿದ ವರ್ಗಕ್ಕೆ  ಸೇರಿಸಬಹುದು ಎಂದು ಶಿಫಾರಸು ಮಾಡಿದ್ದರೂ ಸರ್ಕಾರ ಇಂದಿಗೂ ಬೇಡಿಕೆ ಈಡೇರಿಸಿಲ್ಲ ಎಂದರು.

ಕಾರ್ಯದರ್ಶಿ ಆರ್.ಜಿ.ಚುಳಕಿ ಮಾತನಾಡಿ, ರಾಜ್ಯದಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ ಸಾಕಷ್ಟು ಶಕ್ತಿಪಡೆದಿರುವ ಪಂಚಮಸಾಲಿ, ಬಣಜಿಗ, ಸಾದರು, ಒಕ್ಕಲಿಗರು ಮುಂತಾದ ಪಂಗಡಗಳಿಗೆ ಕೇಳಿದ್ದೆಲ್ಲವನ್ನು ನೀಡುವ ಸರ್ಕಾರ ಆದಿ ಬಣಜಿಗ ಪಂಗಡವನ್ನು ನಿರ್ದಯವಾಗಿ ಕಾಣುತ್ತಿದೆ.

ಮುಂದಿನ ದಿನಗಳಲ್ಲಿ ಆದಿ ಬಣಜಿಗ ಸಮಾಜಕ್ಕೆ ಸಂವಿಧಾನ ಬದ್ಧ ನ್ಯಾಯ ನೀಡದೆ ಹೋದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.  ಮುಖಂಡರಾದ ಎಂ.ಎಂ. ಬಾಳಿಕಾಯಿ, ಬಿ.ಡಿ.ಗಡಾದಿ, ಆರ್.ಸಿ.ಪಾಟೀಲ, ಎಚ್.ಸಿ. ಗೋಪಾಳಿ, ಬಸವರಾಜ ಮಂಡಣ್ಣವರ, ಬಸವರಾಜ ಶಾಂತಗಿರಿ, ಬಸವರಾಜ ಗೊಡಚಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT