ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವೇಶ ಪತ್ರಕ್ಕೆ ಆನ್‌ಲೈನ್ ಅರ್ಜಿ ಕಡ್ಡಾಯ

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲು ನಿರ್ಧರಿಸಿರುವ ನಾಗರಿಕ ವಿಮಾನಯಾನ ಭದ್ರತಾ ಮಂಡಳಿಯು (ಬಿಸಿಎಎಸ್) ಪ್ರಯಾಣದ ಟಿಕೆಟ್ ಇಲ್ಲದವರ ಪ್ರವೇಶವನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ವಿಮಾನನಿಲ್ದಾಣ ಪ್ರವೇಶಿಸಲು ಇಚ್ಛಿಸುವ ಪ್ರಯಾಣಿಕರಲ್ಲದವರು ಕಡ್ಡಾಯವಾಗಿ ಆಯಾ ವಿಮಾ ನಿಲ್ದಾಣಗಳ ನಿರ್ದೇಶಕರಿಂದ ಪ್ರವೇಶಪತ್ರ ಪಡೆಯಲು ಅರ್ಜಿಯನ್ನು ಆನ್‌ಲೈನ್‌ನಲ್ಲಿಯೇ ಸಲ್ಲಿಸಬೇಕು. ಭಾವಚಿತ್ರವಿರುವ ಪ್ರವೇಶ ಪತ್ರ ಲಭಿಸಿದರೆ ಮಾತ್ರ ವಿಮಾನನಿಲ್ದಾಣ ಪ್ರವೇಶಿಸಬಹುದು. ಈ ಮಾಹಿತಿಯನ್ನು ಬಿಸಿಎಎಸ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

`ಪ್ರಯಾಣಿಕರಲ್ಲದವರು ವಿಮಾನನಿಲ್ದಾಣ ಪ್ರವೇಶಿಸಬೇಕಿದ್ದರೆ ಅಲ್ಲಿನ ನಿರ್ದೇಶಕರಿಗೆ ಕೈ ಬರಹದಲ್ಲಿ ಅರ್ಜಿ ಸಲ್ಲಿಸಿ ಪ್ರವೇಶ ಪತ್ರ ಪಡೆಯುವ ಪದ್ಧತಿ ಇತ್ತು. ಇನ್ನು ಮುಂದೆ ಈ ವ್ಯವಸ್ಥೆ ಇರುವುದಿಲ್ಲ. ಬಿಸಿಎಎಸ್ ವೆಬ್‌ಸೈಟ್ (ಡಿಡಿಡಿ. ಚ್ಚಿಜ್ಞಿಜಿ.್ಞಜ್ಚಿ.ಜ್ಞಿ) ಮೂಲಕವೇ ಪ್ರವೇಶಪತ್ರಕ್ಕೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಮುದ್ರಿತ ಸ್ವೀಕೃತ ಪತ್ರ ಮತ್ತು ಪೊಲೀಸ್ ಪರಿಶೀಲನಾ ಪತ್ರ (ಸರ್ಕಾರಿ ನೌಕರರ ಹೊರತು) ತೋರಿಸಬೇಕು. ಅದನ್ನು ಪರಿಶೀಲಿಸಿ, ಪ್ರವೇಶ ಪತ್ರವನ್ನು ನೀಡಲಾಗುತ್ತದೆ~ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಕೆ.ಎಂ.ಬಸವರಾಜು `ಪ್ರಜಾವಾಣಿ~ಗೆ ತಿಳಿಸಿದರು.

`ಮುಖ್ಯಮಂತ್ರಿ, ಸಚಿವರು ಸಹಿತ ಗಣ್ಯರು, ಅತಿಗಣ್ಯರನ್ನು ಅಥವಾ ಸರ್ಕಾರದ ಉನ್ನತ ಹುದ್ದೆಗಳಲ್ಲಿರುವವರನ್ನು ಸ್ವಾಗತಿಸಲು ಅಥವಾ ಬೀಳ್ಕೊಡಲು (ಶಿಷ್ಟಾಚಾರ ಅಧಿಕಾರಿಗಳು) ಹೋಗುವವರೂ ಆನ್‌ಲೈನ್ ಮೂಲಕ ಪ್ರವೇಶ ಪತ್ರ ಪಡೆಯಲೇಬೇಕು. ಒಂದು ತಿಂಗಳ ಅವಧಿವರೆಗಿನ ಪ್ರವೇಶ ಪತ್ರ ನೀಡುವ ಅಧಿಕಾರವನ್ನು ಆಯಾ ನಿಲ್ದಾಣಗಳ ನಿರ್ದೇಶಕರಿಗೆ ನೀಡಲಾಗಿದೆ.

ಅದಕ್ಕಿಂತ ಹೆಚ್ಚಿನ ಅವಧಿಗೆ ಬೇಕಿದ್ದರೆ ಹೈದರಾಬಾದಿನಲ್ಲಿರುವ ಬಿಸಿಎಎಸ್ ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕು. ಸರ್ಕಾರಿ ನೌಕರರಿಗೆ ಉಚಿತವಾಗಿ ಪ್ರವೇಶಪತ್ರ ದೊರೆಯಲಿದೆ.  ಇತರರು 50 ರೂಪಾಯಿ ಶುಲ್ಕ ನೀಡಬೇಕು~ ಎಂದು ವಿವರಿಸಿದರು.

~ರಾಜಕೀಯ ವ್ಯಕ್ತಿಗಳು, ಗಣ್ಯರು ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ವಿಮಾನ ನಿಲ್ದಾಣ ಪ್ರವೇಶಿಸುತ್ತಾರೆ. ಈ ರೀತಿ ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಬಿಸಿಎಎಸ್ ತೀರ್ಮಾನಿಸಿದೆ. ನಿಲ್ದಾಣದ ಒಳಗೆ ಕೆಲಸ ಮಾಡುವ ಖಾಸಗಿ ವೈಮಾನಿಕ ಕಂಪೆನಿಗಳ ಸಿಬ್ಬಂದಿಗೂ ಈ ನಿಯಮ ಅನ್ವಯವಾಗಲಿದೆ ಮಾಡಲಾಗಿದೆ~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT