ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿಗಾಗಿ ಮುಂಬೈ-ಸೌರಾಷ್ಟ್ರ ಪೈಪೋಟಿ

ರಣಜಿ ಕ್ರಿಕೆಟ್ ಟ್ರೋಫಿ: ಇಂದಿನಿಂದ ಫೈನಲ್
Last Updated 25 ಜನವರಿ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): 39 ಸಲ ಟ್ರೋಫಿ ಜಯಿಸಿರುವ ಮುಂಬೈ ಹಾಗೂ ಚೊಚ್ಚಲ ಪ್ರಶಸ್ತಿಯ ಕನಸಲ್ಲಿರುವ ಸೌರಾಷ್ಟ್ರ ತಂಡಗಳು ಶನಿವಾರದಿಂದ ವಾಂಖೇಡೆ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ  ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.

ಉಭಯ ತಂಡಗಳ ಬಲಾಬಲಗಳನ್ನು ನೋಡಿದರೆ ಆತಿಥೇಯ ಮುಂಬೈ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಅನುಭವಿ ಆಟಗಾರರಾದ ಸಚಿನ್ ತೆಂಡೂಲ್ಕರ್, ನಾಯಕ ಅಜಿತ್ ಅಗರ್ಕರ್, ವಾಸೀಮ್ ಜಾಫರ್, ಅಭಿಷೇಕ್ ನಾಯರ್ ಹಾಗೂ ವಿಕೆಟ್ ಕೀಪರ್ ಆದಿತ್ಯ ತಾರೆ ತಂಡದಲ್ಲಿರುವುದು ಇದಕ್ಕೆ ಕಾರಣ.

ಆದರೆ, ಎರಡೂ ತಂಡಗಳಿಗೆ ಪ್ರಮುಖ ಆಟಗಾರರ ಅನುಪಸ್ಥಿತಿ ಕಾಡುತ್ತಿದೆ. ರಾಜ್‌ಕೋಟ್‌ನ ರವೀಂದ್ರ ಜಡೇಜ, ಚೇತೇಶ್ವರ ಪೂಜಾರ, ಮುಂಬೈನ ಅಜಿಂಕ್ಯ ರಹಾನೆ ಹಾಗೂ ರೋಹಿತ್ ಶರ್ಮ ಫೈನಲ್ ಪಂದ್ಯದಲ್ಲಿ ಆಡುತ್ತಿಲ್ಲ. ಈ ಆಟಗಾರರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದಲ್ಲಿದ್ದಾರೆ.

ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ, ಸೆಮಿಫೈನಲ್‌ನಲ್ಲಿ ಪಂಜಾಬ್ ಎದುರು ಯಶ ಪಡೆದು ಫೈನಲ್ ತಲುಪಿರುವ ಸೌರಾಷ್ಟ್ರ ಮೊದಲ ಸಲ ರಣಜಿ ರಾಜನಾಗುವ ಕನಸು ಕಾಣುತ್ತಿದೆ. ಈ ಪಂದ್ಯ ಜನವರಿ 26ರಿಂದ ಐದು ದಿನ ನಡೆಯಲಿದೆ. 43 ಸಲ ಫೈನಲ್ ಪ್ರವೇಶಿಸಿರುವ ಮುಂಬೈ ನಿರಾಸೆ ಕಂಡಿದ್ದು ನಾಲ್ಕು ಪಂದ್ಯಗಳಲ್ಲಿ ಮಾತ್ರ. ಈ ಸಂಖ್ಯಾಬಲವೇ ತಂಡದ ವಿಶ್ವಾಸ ಹೆಚ್ಚಿಸಿದೆ.

ತಂಡಗಳು ಇಂತಿವೆ
ಮುಂಬೈ: 
ಅಜಿತ್ ಅಗರ್‌ಕರ್ (ನಾಯಕ), ಸಚಿನ್ ತೆಂಡೂಲ್ಕರ್, ವಾಸೀಮ್ ಜಾಫರ್, ಸೂರ್ಯಕುಮಾರ್ ಯಾದವ್, ಧವಳ್ ಕುಲಕರ್ಣಿ, ಕೌಸ್ತುಬ್ ಪವಾರ್, ಅಭಿಷೇಕ್ ನಾಯರ್, ಹಿಕೆನ್ ಷಾ, ಆದಿತ್ಯ ತಾರೆ, ಅಂಕಿತ್ ಚವ್ಹಾಣ್, ನಿಖಿಲ್ ಪಾಟೀಲ್, ಜಾವೇದ್ ಖಾನ್, ಎಂ.   ಸುಶಾಂತ್, ಶಾರ್ದೂಲ್ ಠಾಕೂರ್ ಮತ್ತು ವಿಶಾಲ್. ಕೋಚ್:

ಸೌರಾಷ್ಟ್ರ: ಜಯದೇವ್ ಷಾ (ನಾಯಕ), ಸಾಗರ್ ಜೋಗಿಯಾನಿ, ಶಿತಾನ್ಶು ಕೊಟಕ್, ಶೆಲ್ಡನ್ ಜಾಕ್ಸನ್, ಅರ್ಪಿತ್ ವಸುವದ, ರಾಹುಲ್    ದೇವ್, ಕಮಲೇಶ್ ಮಕ್ವಾನ್, ಚಿರಾಗ್ ಪಾಠಕ್, ಸಿದ್ಧಾರ್ಥ ತ್ರಿವೇದಿ, ಜಯದೇವ್ ಉನದ್ಕತ್, ವಿಶಾಲ್ ಜೋಷಿ, ಧರ್ಮೇಂದ್ರ ಜಡೇಜ, ಸಂದೀಪ್ ಮಣಿಯಾರ್, ಸೂರ್ಯ ಸನಾದಿ ಹಾಗೂ ಎ. ಹರ್ಷ.

ಅಂಪೈರ್: ಕೆ. ಹರಿಹರನ್, ನಂದನ್. ಮೂರನೇ ಅಂಪೈರ್:       ವೀರೇಂದ್ರ ಶರ್ಮ, ರೆಫರಿ: ಚಿನ್ಮಯ್ ಶರ್ಮ
ಪಂದ್ಯ ಆರಂಭ: ಬೆಳಿಗ್ಗೆ 9.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT