ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿಯ ಹೆಬ್ಬಾಗಿಲಲ್ಲಿ ಸೈನಾ

ಆಸ್ಟ್ರೇಲಿಯನ್‌ ಓಪನ್‌ ಬ್ಯಾಡ್ಮಿಂಟನ್‌: ಸೆಮಿಯಲ್ಲಿ ಎಡವಿದ ಶ್ರೀಕಾಂತ್‌
Last Updated 11 ಜೂನ್ 2016, 19:30 IST
ಅಕ್ಷರ ಗಾತ್ರ

ಸಿಡ್ನಿ (ಪಿಟಿಐ): ಆಸ್ಟ್ರೇಲಿಯಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಎರಡನೇ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ  ಸೈನಾ ನೆಹ್ವಾಲ್‌ ಅವರು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಭಾರತದ ಆಟಗಾರ್ತಿ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದು  ಚಾಂಪಿಯನ್‌ ಪಟ್ಟ ಕ್ಕೇರಲು ಇನ್ನೊಂದೇ ಮೆಟ್ಟಿಲು ಬಾಕಿ ಉಳಿದಿದೆ. ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆ ಎನಿಸಿದ್ದ ಕೆ.ಶ್ರೀಕಾಂತ್‌ ಅವರು  ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಶನಿವಾರ ನಡೆದ ಮಹಿಳೆಯರ ವಿಭಾಗದ ನಾಲ್ಕರ ಘಟ್ಟದ ಪೈಪೋಟಿ ಯಲ್ಲಿ ಸೈನಾ 21–8, 21–12ರ ನೇರ ಗೇಮ್‌ಗಳಿಂದ ಚೀನಾದ ಯಿಹಾನ್‌ ವಾಂಗ್‌ ಅವರಿಗೆ ಆಘಾತ ನೀಡಿದರು. ಸೈನಾ ಅವರು ವಿಶ್ವ  ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಯಿಹಾನ್‌ ಅವರನ್ನು ಮಣಿಸಿ, ರಿಯೊ ಒಲಿಂಪಿಕ್ಸ್‌ಗೂ ಮುನ್ನ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. 

ಟೂರ್ನಿಯ ಆರಂಭದಿಂದಲೂ ಶ್ರೇಷ್ಠ ಸಾಮರ್ಥ್ಯ ತೋರುತ್ತಾ ಸಾಗಿದ್ದ ಸೈನಾ, ಸೆಮಿಫೈನಲ್‌ನಲ್ಲೂ ಅಮೋಘ ಆಟ ಮುಂದುವರಿಸಿದರು. ಯಿಹಾನ್‌ ಎದುರಿನ ಹೋರಾಟದ ಮೊದಲ ಗೇಮ್‌ನಲ್ಲಿ ಭಾರತದ ಆಟ  ಗಾರ್ತಿ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು.

ಆಕರ್ಷಕ ಡ್ರಾಪ್‌ ಮತ್ತು ಸೊಗಸಾದ ಸರ್ವ್‌ಗಳ ಮೂಲಕ 2011ರ ವಿಶ್ವ ಚಾಂಪಿಯನ್‌  ವಾಂಗ್‌ ಅವರನ್ನು ಕಂಗೆ ಡಿಸಿದ ಸೈನಾ ನಿರಂತರವಾಗಿ ಪಾಯಿಂಟ್ಸ್‌ ಕಲೆಹಾಕಿ 15–6ರ ಮುನ್ನಡೆ ಗಳಿಸಿದರು.

ಆ ಬಳಿಕವೂ ಭಾರತದ ಆಟಗಾರ್ತಿಯ ಆಟ ರಂಗೇರಿತು. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿರುವ ಸೈನಾ ಅವರ ರ‍್ಯಾಕೆಟ್‌ನಿಂದ ಹೊರಹೊಮ್ಮಿದ ಬಲಿಷ್ಠ ರಿಟರ್ನ್‌ ಮತ್ತು ಆಕರ್ಷಕ ಕ್ರಾಸ್‌ ಕೋರ್ಟ್‌ ಸ್ಮ್ಯಾಷ್‌ಗಳಿಗೆ  ವಾಂಗ್‌  ನಿರು ತ್ತರರಾದರು.

ಇದರೊಂದಿಗೆ ಸುಲಭ ವಾಗಿ ಗೇಮ್‌ ಕೈಚೆಲ್ಲಿ ಹಿನ್ನಡೆ ಅನು ಭವಿಸಿದರು. 2012ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ  ವಾಂಗ್‌ ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಬಹು ದೆಂದು ಅಂದಾಜಿಸಲಾಗಿತ್ತು. ಆದರೆ ಈ ನಿರೀಕ್ಷೆ ಯನ್ನು ಸೈನಾ ಹುಸಿಗೊಳಿಸಿದರು.

2014ರ ಟೂರ್ನಿಯಲ್ಲಿ ಚಾಂಪಿ ಯನ್‌ ಆಗಿದ್ದ ಭಾರತದ ಆಟಗಾರ್ತಿ ಆರಂಭದಿಂದಲೇ ಪಾಯಿಂಟ್‌ ಬೇಟೆ ಮುಂದುವರಿಸಿದರು. ಈ ಮೂಲಕ 11–4ರ ಮುನ್ನಡೆ ಪಡೆದು ಪಂದ್ಯದ ಮೇಲಿನ ಹಿಡಿತವನ್ನು ಬಿಗಿಯಾಗಿಸಿ ಕೊಂಡರು.

ವಿರಾಮದ ಬಳಿಕ ಸೈನಾ ಇನ್ನಷ್ಟು ಗುಣಮಟ್ಟದ ಆಟ ಆಡಿದರು. ಎದು ರಾಳಿ ಆಟಗಾರ್ತಿ ನೆಟ್‌ನಿಂದ ಸಾಕಷ್ಟು ದೂರ ನಿಂತು ಆಡುತ್ತಿದ್ದುದರಿಂದ ಷಟಲ್‌ ಅನ್ನು ಆದಷ್ಟು ನೆಟ್‌ನ ಸಮೀಪದಲ್ಲಿ ಡ್ರಾಪ್‌ ಮಾಡುವ ಅವರ ತಂತ್ರಕ್ಕೆ ಯಶಸ್ಸು ಲಭಿಸಿತು.

ಈ ಮೂಲಕ ನಿರಾಯಾಸವಾಗಿ ಪಾಯಿಂಟ್‌ ಸಂಗ್ರಹಿಸಿದ ಭಾರತದ ಆಟಗಾರ್ತಿ ಏಕಪಕ್ಷೀಯವಾಗಿ ಗೆಲುವು ಗಳಿಸಿ ಸಂಭ್ರಮಿಸಿದರು. ಭಾನುವಾರ ನಡೆಯುವ ಫೈನಲ್‌ ಹೋರಾಟದಲ್ಲಿ ಸೈನಾ, ಚೀನಾದ ಆಟಗಾರ್ತಿ ಸುನ್‌ ಯು ವಿರುದ್ಧ ಸೆಣಸುವರು.

ಇನ್ನೊಂದು ಸೆಮಿ ಫೈನಲ್‌ನಲ್ಲಿ ಸುನ್‌ ಅವರು ತಮ್ಮದೇ ರಾಷ್ಟ್ರದ ಲಿ ಕ್ಸುಯೆರುಯಿ ಎದುರು ಗೆದ್ದರು. ಸೈನಾ, ವಿಶ್ವ  ಕ್ರಮಾಂಕ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿರುವ  ಸುನ್‌ ವಿರುದ್ಧ 5–1ರ ಗೆಲುವಿನ ದಾಖಲೆ ಹೊಂದಿದ್ದಾರೆ. ಹೀಗಾಗಿ ಅವರ ಪ್ರಶಸ್ತಿಯ ಹಾದಿ ಸುಗಮ ಎಂದೇ ಭಾವಿಸಲಾಗಿದೆ.

ಮುಗ್ಗರಿಸಿದ ಶ್ರೀಕಾಂತ್‌: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕೆ.ಶ್ರೀಕಾಂತ್‌ ನಿರಾಸೆ ಅನುಭವಿಸಿದರು. ಸೆಮಿಫೈನಲ್‌ನಲ್ಲಿ ಶ್ರೀಕಾಂತ್‌ 20–22, 13–21ರಲ್ಲಿ ಡೆನ್ಮಾರ್ಕ್‌ನ ಹಾನ್ಸ್‌ ಕ್ರಿಸ್ಟಿಯನ್‌ ವಿಟ್ಟಿಂಗಸ್‌ ಎದುರು ಸೋಲು ಕಂಡರು. 43 ನಿಮಿಷಗಳ ಪಂದ್ಯದ ಮೊದಲ ಗೇಮ್‌ನಲ್ಲಿ ಎದುರಾಳಿಗೆ ತೀವ್ರ ಪೈಪೋಟಿ  ಒಡ್ಡಿದ ಶ್ರೀಕಾಂತ್‌ ಅವರು ಎರಡನೇ ಗೇಮ್‌ನಲ್ಲಿ ದಿಟ್ಟ ಆಟ ಆಡಲು ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT