ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ರಾಜಲಕ್ಷ್ಮಿ, ಬಾಳೆಹೊನ್ನೂರು
ಪ್ರಶ್ನೆ:
ನನ್ನ ಬಳಿ ರೂ. 50,000 ಇದೆ. ಈ ಹಣವನ್ನು ಇಲ್ಲಿಯ ಬ್ಯಾಂಕೊಂದರಲ್ಲಿ ಉಳಿತಾಯ ಖಾತೆಯಲ್ಲಿ ಕಳೆದ ಆರು ತಿಂಗಳಿಂದ ಇರಿಸಿದ್ದೇನೆ. ಬ್ಯಾಂಕಿನಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಶೇ 4ರಷ್ಟು ಬಡ್ಡಿಯನ್ನು ಈ ಉಳಿತಾಯ ಖಾತೆಗೆ ಜಮಾ ಮಾಡುತ್ತಾರೆ. ನನಗೆ ಬಡ್ಡಿಯ ಅವಶ್ಯಕತೆ ಇರುವುದಿಲ್ಲ. ಈ ಹಣ ಫಿಕ್ಸೆಡ್ ಡಿಪಾಸಿಟ್‌ನಲ್ಲಿ ಇರಿಸಬಹುದೇ. ಅದಕ್ಕೆ ಎಷ್ಟು ಬಡ್ಡಿ ಬರುತ್ತದೆ. ಎಷ್ಟು ಸಮಯಕ್ಕೆ ಹಣವನ್ನು ಎಫ್.ಡಿ.ಯಲ್ಲಿ ಇರಿಸಬೇಕು. ನನಗೆ ಎಲ್ಲವನ್ನೂ ವಿವರವಾಗಿ ತಿಳಿಸಿ.

ಉತ್ತರ: ಬ್ಯಾಂಕುಗಳಲ್ಲಿ ಉಳಿತಾಯ ಖಾತೆಗೆ, ಉಳಿದ ಎಲ್ಲಾ ಠೇವಣಿಗಳಿಗಿಂತ ಕಡಿಮೆ ಬಡ್ಡಿ ಬರುತ್ತದೆ. ಬಹಳಷ್ಟು ಜನರು, ಉಳಿತಾಯ ಖಾತೆಯಲ್ಲಿ ಯಾವಾಗಬೇಕಾದರೂ ಹಣ ವಾಪಸು ಪಡೆಯಬಹುದು ಎನ್ನುವ ದೃಷ್ಟಿಯಿಂದ, ತಮ್ಮ ಹೆಚ್ಚಿನ ಉಳಿತಾಯವನ್ನು ಇಲ್ಲಿಯೇ ಇರಿಸುತ್ತಾರೆ. ಇದರಿಂದಾಗಿ ನಿಮ್ಮ ಉಳಿತಾಯಕ್ಕೆ ಹೆಚ್ಚಿನ ವರಮಾನ ಬರುವುದಿಲ್ಲ.
ಇನ್ನು, ಹಲವರು `ಅವಧಿ ಠೇವಣಿ~ ಎಂದರೆ ಎಫ್.ಡಿ. ಮಾಡುವುದು ಎಂದು ತಿಳಿದಿರುತ್ತಾರೆ.
 
ಎಫ್.ಡಿ. ನಿಜವಾಗಿ ಅವಧಿ ಠೇವಣಿಯಾದರೂ, ಹಾಗೂ ಇಲ್ಲಿ ಹೆಚ್ಚಿನ ವರಮಾನ ಬರುವುದು ಖಚಿತವಾದರೂ, ಇಲ್ಲಿ ಹೂಡಿದ ಹಣ ವೃದ್ಧಿಯಾಗಲಾರದು. ಪ್ರತಿ ಮೂರು ತಿಂಗಳಿಗೆ ಅಥವಾ ಆರು ತಿಂಗಳಿಗೆ, ಎಫ್.ಡಿ. ಮೇಲಿನ ಬಡ್ಡಿ, ನಗದಾಗಿ ಕೊಡುತ್ತಾರೆ. ಅಥವಾ ನಿಮ್ಮ ಉಳಿತಾಯ ಖಾತೆಗೆ ಜಮಾ ಮಾಡುತ್ತಾರೆ. ಇದರಿಂದಾಗಿ, ಅವಧಿ ಮುಗಿದು ಠೇವಣಿ ಪಡೆಯುವಾಗ ನೀವು ಇರಿಸಿದ ಹಣ ಮಾತ್ರ ನಿಮ್ಮ ಕೈ ಸೇರುತ್ತದೆ. ಆದರೆ ಬಡ್ಡಿಯಿಂದಲೇ ಜೀವಿಸುವ ವ್ಯಕ್ತಿಗಳಿಗೆ ಎಫ್.ಡಿ. ಅತಿ ಅಗತ್ಯ.

ನೀವು ನಿಮ್ಮ ಠೇವಣಿಯ ಮೇಲಿನ ಬಡ್ಡಿಯ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದ್ದೀರಿ. ಎಲ್ಲಾ ಬ್ಯಾಂಕುಗಳಲ್ಲಿ, ಮರುಹೂಡಿಕೆಯ ಯೋಜನೆ. (re in­ve­st­ment scheme)  ಎನ್ನುವ ಅವಧಿ ಠೇವಣಿಗಳಿರುತ್ತವೆ.

ಈ ಠೇವಣಿಯನ್ನು ಒಂದೊಂದು ಬ್ಯಾಂಕಿನಲ್ಲಿ ಒಂದೊಂದು ಹೆಸರಿನಿಂದ ಕರೆಯುತ್ತಾರೆ. ಉದಾಹರಣೆಗಾಗಿ ಸಿಂಡಿಕೇಟ್ ಬ್ಯಾಂಕಿನಲ್ಲಿ - `ವಿಕಾಸ ಸಿರ್ಟಿಫಿಕೇಟ್~, ಕೆನರಾ ಬ್ಯಾಂಕ್‌ನಲ್ಲಿ `ಕಾಮಧೇನು ಸರ್ಟಿಫಿಕೇಟ್~, ಕರ್ಣಾಟಕ ಬ್ಯಾಂಕ್‌ನಲ್ಲಿ `ಅಭ್ಯುದಯ ಕ್ಯಾಷ್ ಸರ್ಟಿಫಿಕೇಟ್~ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಸ್‌ಬಿಐ ಸಮೂಹದ ಬ್ಯಾಂಕುಗಳಲ್ಲಿ ಆರ್.ಐ. ಡಿಪಾಸಿಟ್, ಎಂಬುದಾಗಿ ಒಂದೊಂದು ಬ್ಯಾಂಕಿನಲ್ಲಿ ಒಂದೊಂದು ಹೆಸರಿನಿಂದ ಕರೆಯುತ್ತಾರೆ. ಈ ಎಲ್ಲಾ ಬ್ಯಾಂಕುಗಳ ಈ ಎಲ್ಲಾ ಠೇವಣಿಗಳ ಉದ್ದೇಶ ಒಂದೇ ಆಗಿರುತ್ತದೆ.

ಮೇಲೆ ತಿಳಿಸಿದಂತೆ, ನಿಮಗೆ ಬಡ್ಡಿಯ ಅವಶ್ಯಕತೆ ಇರದಿದ್ದಲ್ಲಿ, ಬ್ಯಾಂಕುಗಳಲ್ಲಿ ಲಭ್ಯವಿರುವ ಮರುಹೂಡಿಕೆ ಠೇವಣಿಯಲ್ಲಿ ್ಙ 50,000 ಇರಿಸಿ ನಿಶ್ಚಿಂತರಾಗಿರಿ. ಈ ಠೇವಣಿಗೆ, ಪ್ರತಿ ಮೂರು ತಿಂಗಳಿಗೆ ಬಡ್ಡಿ ಸೇರಿಸಿ, ಚಕ್ರಬಡ್ಡಿಯಲ್ಲಿ (compound interest) ಅಸಲು ಹಾಗೂ ಬಡ್ಡಿ, ಅವಧಿ ಮುಗಿಯುತ್ತಲೇ ನಿಮ್ಮ ಕೈಸೇರುತ್ತದೆ.

ಬಡ್ಡಿದರ ವಾರ್ಷಿಕ ಶೇಕಡಾ 9 ರಿಂದ 10 ಬರಬಹುದು. ಬಡ್ಡಿದರ ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಾಸವಿರುತ್ತದೆ. ಈ ಠೇವಣಿ ಒಂದು ವರ್ಷದಿಂದ ಹತ್ತು ವರ್ಷಗಳ ತನಕ ಇರಿಸಬಹುದಾಗಿದೆ.

ಸದ್ಯಕ್ಕೆ ನೀವು ್ಙ 50,000 ಐದು ವರ್ಷಗಳ ಅವಧಿಗೆ ಇರಿಸಿರಿ. ಹೀಗೆ ನೀವು ಇರಿಸಿದ ್ಙ 50,000 ಶೇ 9.5ರ ಬಡ್ಡಿದರದಲ್ಲಿ 5 ವರ್ಷಗಳ ಅಂತ್ಯಕ್ಕೆ ್ಙ 79,955 ಆಗುತ್ತದೆ. ಇದೊಂದು ಉದಾಹರಣೆ ಮಾತ್ರ. ಬಡ್ಡಿ ಕಾಲಕಾಲಕ್ಕೆ ಪಡೆಯುವ ಅವಶ್ಯ ಇರದಿರುವ ವ್ಯಕ್ತಿಗಳಿಗೆ, ಬ್ಯಾಂಕಿನ ಮರುಹೂಡಿಕೆ ಯೋಜನೆ, ಒಂದು ದೊಡ್ಡ ವರದಾನವೇ ಸರಿ. ಇದನ್ನು ನಗದು ಸರ್ಟಿಫಿಕೇಟ್ ಎಂಬುದಾಗಿಯೂ ಕರೆಯುತ್ತಾರೆ.

ರಾಘವೇಂದ್ರರಾವ್ ಹುಬ್ಬಳ್ಳಿ.
ಪ್ರಶ್ನೆ: ನಾನು ಇಲ್ಲಿಯ ಕಾಲೇಜೊಂದರಲ್ಲಿ ಪ್ರಾಧ್ಯಾಪಕನಾಗಿದ್ದೇನೆ. ನನಗೆ ತಿಂಗಳಿಗೆ ್ಙ 92,000 ಸಂಬಳ ಬರುತ್ತದೆ. ಆದಾಯ ತೆರಿಗೆ ಕಡಿಮೆ ಮಾಡಿಕೊಳ್ಳಲು ನನಗೆ, ಆದಾಯ ತೆರಿಗೆ ಕಾನೂನಿನಲ್ಲಿ ಏನೆಲ್ಲಾ ಉಪಾಯಗಳು ಇವೆ ಎಂಬುದನ್ನು ತಿಳಿಸಿ.

ಉತ್ತರ:
ಆದಾಯ ತೆರಿಗೆ ಇಲಾಖೆಯವರು ಕಾಲಕಾಲಕ್ಕೆ ವಿಧಿಸುವ ತೆರಿಗೆಯನ್ನು ಸ್ವಲ್ಪಮಟ್ಟಿಗೆ ಕಡಿವೆು ಮಾಡಿಕೊಳ್ಳಲು, ಕೆಲವು ಉಳಿತಾಯ ಯೋಜನೆಗಳನ್ನು ಸೂಚಿಸಿರುತ್ತಾರೆ. ಇವುಗಳ ವಿವರ ಹೀಗಿದೆ.
 

ಆದಾಯ ತೆರಿಗೆ ಸೆಕ್ಷನ್ 80ಸಿ. ಆಧಾರದ ಮೇಲೆ, ಜೀವವಿಮಾ ಕಂತುಗಳು, ಪಿ.ಎಫ್. (ಊ) ಎನ್.ಎಸ್.ಸಿ., ಪಿ.ಪಿ.ಎಫ್., ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್, ಇಬ್ಬರು ಮಕ್ಕಳ ಶೈಕ್ಷಣಿಕ ಶುಲ್ಕ, ಗೃಹಸಾಲಕ್ಕೆ ಅಸಲಿಗೆ ತುಂಬಿದ ಹಣ, ಶೆಡ್ಯೂಲ್ಡ್ ಬ್ಯಾಂಕಿನಲ್ಲಿ 5 ವರ್ಷಗಳ ಅವಧಿಗೆ ತೊಡಗಿಸಿದ ಠೇವಣಿ, `ನಬಾರ್ಡ್~ ಬಾಂಡುಗಳು ಹಾಗೂ 5 ವರ್ಷಗಳ ಅಂಚೆಕಚೇರಿ ಠೇವಣಿ, ಇವುಗಳಲ್ಲಿ ಹೂಡಿರುವ ಗರಿಷ್ಠ ್ಙ 1 ಲಕ್ಷ ಮೊತ್ತವನ್ನು, ನಿಮ್ಮ ಒಟ್ಟು ಆದಾಯದಿಂದ ಕಡಿತಮಾಡಿ ಆದಾಯ ತೆರಿಗೆ ಸಲ್ಲಿಸಬಹುದು.

ಆದಾಯ ತೆರಿಗೆ ಸೆಕ್ಷನ್ `80ಸಿಸಿಸಿ~ ಆಧಾರದ ಮೇಲೆ ಕೇಂದ್ರ ಸರಕಾರ ಗುರುತುಪಡಿಸಿದ ಪಿಂಚಣಿ ಯೋಜನೆಯಲ್ಲಿ ಉದಾಹರಣೆಗಾಗಿ ಎಲ್‌ಐಸಿ ಜೀವನ ಸುರಕ್ಷಾ, ಹಾಗೂ ಸೆಕ್ಷನ್ 80ಸಿಸಿಡಿ ಆಧಾರದ ಮೇಲೆ ಕೇಂದ್ರ ಸರಕಾರದ ಪಿಂಚಣಿ ಯೋಜನೆಯಲ್ಲಿ ಸಂಬಳದ ಶೇ 10ರ ತನಕ, ಹಣ ಹೂಡಿ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದು.

ಸೂಚನೆ: ಆದಾಯ ತೆರಿಗೆ ಸೆಕ್ಷನ್ 80ಸಿ, 80ಸಿಸಿಸಿ, ಮತ್ತು 80ಸಿಸಿಡಿ, ಇವುಗಳಲ್ಲಿ ಆರ್ಥಿಕ ವರ್ಷದಲ್ಲಿ ( ಏಪ್ರಿಲ್ 1ರಿಂದ ಮಾರ್ಚ್ 31ರತನಕ) ಹೂಡಲು ಇರುವ ಗರಿಷ್ಠ ಮೊತ್ತ ್ಙ 1 ಲಕ್ಷ ಮಾತ್ರ.

ಸೆಕ್ಷನ್ 80ಸಿ, 80ಸಿಸಿಸಿ, ಹಾಗೂ 80ಸಿಸಿಡಿ ಇವುಗಳಲ್ಲಿ ಉಳಿತಾಯ ಮಾಡಲು ಇರುವ ಗರಿಷ್ಠ ಮಿತಿ ್ಙ 1ಲಕ್ಷ ಹೊರತುಪಡಿಸಿ, ್ಙ 20,000 ಗರಿಷ್ಠ ಮಿತಿಯಲ್ಲಿ ಸೆಕ್ಷನ್ 80ಸಿಸಿಡಿ ಆಧಾರದ ಮೇಲೆ, ಕೇಂದ್ರ ಸರಕಾರದ ಮಾನ್ಯತೆ ಪಡೆದ, ಮೂಲ ಸೌಕರ್ಯ (infrastructure) ಒದಗಿಸುವ ಕಂಪೆನಿಗಳ ಬಾಂಡುಗಳಲ್ಲಿ ಕನಿಷ್ಠ ಮೂರು ವರ್ಷಗಳ ಅವಧಿಗೆ ಹಣ ಹೂಡಬಹುದು.

ಒಟ್ಟಿನಲ್ಲಿ ್ಙ 1,20,000 ತನಕ ಆರ್ಥಿಕ ವರ್ಷದಲ್ಲಿ ಮೇಲಿನ ಯೋಜನೆಗಳಲ್ಲಿ ಹಣ ಹೂಡಿ, ನಿಮ್ಮ ಒಟ್ಟು ಆದಾಯದಿಂದ (gross income) ಕಡಿತ ಮಾಡಿ ಆದಾಯ ತೆರಿಗೆ ಸಲ್ಲಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT